Arunachal Pradesh Avalanche: ಅರುಣಾಚಲ ಪ್ರದೇಶದ ಹಿಮಪಾತದಲ್ಲಿ ಸಿಲುಕಿದ್ದ 7 ಸೈನಿಕರ ಮೃತದೇಹ ಪತ್ತೆ

ಅರುಣಾಚಲ ಪ್ರದೇಶದ ಕಮೆಂಗ್ ಸೆಕ್ಟರ್‌ನ ಎತ್ತರದ ಪ್ರದೇಶದಲ್ಲಿ ಹಿಮಕುಸಿತಕ್ಕೆ ಸಿಲುಕಿದ್ದ ಏಳು ಭಾರತೀಯ ಸೇನಾ ಸಿಬ್ಬಂದಿಯ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ಅಧಿಕಾರಿ ತಿಳಿಸಿದ್ದಾರೆ.

Arunachal Pradesh Avalanche: ಅರುಣಾಚಲ ಪ್ರದೇಶದ ಹಿಮಪಾತದಲ್ಲಿ ಸಿಲುಕಿದ್ದ 7 ಸೈನಿಕರ ಮೃತದೇಹ ಪತ್ತೆ
ಅರುಣಾಚಲ ಪ್ರದೇಶದಲ್ಲಿ ಹಿಮಪಾತ
Updated By: ಸುಷ್ಮಾ ಚಕ್ರೆ

Updated on: Feb 08, 2022 | 5:54 PM

ನವದೆಹಲಿ: ಅರುಣಾಚಲ ಪ್ರದೇಶದ (Arunachal Pradesh) ಪಶ್ಚಿಮ ತುದಿಯಲ್ಲಿರುವ ಕಮೆಂಗ್‌ನಲ್ಲಿನ ಎತ್ತರದ ಪ್ರದೇಶದಲ್ಲಿ ಭಾನುವಾರ ಉಂಟಾದ ಭಾರೀ ಹಿಮಪಾತದಲ್ಲಿ 7 ಭಾರತೀಯ ಸೈನಿಕರು (Indian Soldiers) ಸಿಲುಕಿದ್ದರು. ಅವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಇದೀಗ ಹಿಮಪಾತದಲ್ಲಿ ಸಿಲುಕಿದ್ದ 7 ಯೋಧರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ.

ಹಿಮಪಾತದಲ್ಲಿ ಸಿಲುಕಿರುವ ಭಾರತೀಯ ಸೇನೆಯ 7 ಯೋಧರ ರಕ್ಷಣೆಗಾಗಿ ಕಾರ್ಯಾಚರಣೆ ನಡೆದಿತ್ತು. ಇದೀಗ ಹಿಮಪಾತದಲ್ಲಿ ಸಿಲುಕಿದ್ದ 7 ಯೋಧರ ಶವಗಳನ್ನು ಹೊರಗೆಳೆಯಲಾಗಿದೆ. ಅರುಣಾಚಲ ಪ್ರದೇಶದ ಕಮೆಂಗ್ ಸೆಕ್ಟರ್‌ನ ಎತ್ತರದ ಪ್ರದೇಶದಲ್ಲಿ ಹಿಮಕುಸಿತಕ್ಕೆ ಸಿಲುಕಿದ್ದ ಏಳು ಭಾರತೀಯ ಸೇನಾ ಸಿಬ್ಬಂದಿಯ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ಅಧಿಕಾರಿ ತಿಳಿಸಿದ್ದಾರೆ.

ಹಿಮಪಾತದಲ್ಲಿ ಸಿಲುಕಿದ್ದ ಸೇನಾ ಸಿಬ್ಬಂದಿಗಳು ಗಸ್ತು ತಿರುಗುವ ತಂಡದ ಭಾಗವಾಗಿದ್ದರು. ಭಾನುವಾರ ಹಿಮಕುಸಿತದಿಂದ ಆ 7 ಸೈನಿಕರು ಗಾಯಗೊಂಡಿದ್ದರು ಎಂದು ಅವರು ಹೇಳಿದ್ದರು. “ಕಳೆದ ಕೆಲವು ದಿನಗಳಿಂದ ಭಾರೀ ಹಿಮಪಾತದಲ್ಲಿ ಈ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ ಉಂಟಾಗಿತ್ತು ಎಂದು ಭಾರತೀಯ ಸೇನಾ ಅಧಿಕಾರಿ ಹೇಳಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ಹಿಮಪಾತದಲ್ಲಿ ಸಿಲುಕಿದ್ದ ಎಲ್ಲಾ 7 ಯೋಧರು ಶವವಾಗಿ ಪತ್ತೆಯಾಗಿದ್ದಾರೆ. ಭಾನುವಾರದಂದು 14,500 ಅಡಿ ಎತ್ತರದ ಪ್ರದೇಶದಲ್ಲಿ ಅವರು ಹಿಮಪಾತಕ್ಕೆ ಒಳಗಾಗಿದ್ದರು. ಕಳೆದ ಕೆಲವು ದಿನಗಳಿಂದ ಭಾರೀ ಹಿಮಪಾತದೊಂದಿಗೆ ಈ ಪ್ರದೇಶವು ಪ್ರತಿಕೂಲ ಹವಾಮಾನಕ್ಕೆ ಸಾಕ್ಷಿಯಾಗಿತ್ತು.

2020ರ ಮೇ ತಿಂಗಳಲ್ಲಿ ಸಿಕ್ಕಿಂನಲ್ಲಿ ಹಿಮಪಾತದಲ್ಲಿ ಗಸ್ತು ಮತ್ತು ಹಿಮವನ್ನು ತೆರವುಗೊಳಿಸುವಾಗ ಇಬ್ಬರು ಸೈನಿಕರು ಸಾವನ್ನಪ್ಪಿದ್ದರು.

ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ; ಹಿಮದಡಿ ಸಿಲುಕಿ ನಾಪತ್ತೆಯಾಗಿರುವ ಭಾರತೀಯ ಸೇನೆಯ ಏಳು ಯೋಧರು

Karnataka Weather Today: ಉತ್ತರ ಭಾರತದಲ್ಲಿ ಫೆ. 3ರಿಂದ ಮಳೆ ಹೆಚ್ಚಳ; ಹಿಮಾಚಲ ಪ್ರದೇಶದಲ್ಲಿ ಹಿಮಪಾತ