ಅರುಣಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ; ಹಿಮದಡಿ ಸಿಲುಕಿ ನಾಪತ್ತೆಯಾಗಿರುವ ಭಾರತೀಯ ಸೇನೆಯ ಏಳು ಯೋಧರು

2021ರ ಅಕ್ಟೋಬರ್​ನಲ್ಲಿ ಉತ್ತರಾಖಂಡ್​ನ ತ್ರಿಶೂಲ್​ ಪರ್ವತದಲ್ಲಿ ಉಂಟಾದ ಹಿಮಪಾತಕ್ಕೆ ನೌಕಾಪಡೆಯ ಐವರು ಯೋಧರು ಮೃತರಾಗಿದ್ದರು. ನಂತರ ಅವರ ಮೃತದೇಹ ಪತ್ತೆಯಾಗಿತ್ತು.  

ಅರುಣಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ; ಹಿಮದಡಿ ಸಿಲುಕಿ ನಾಪತ್ತೆಯಾಗಿರುವ ಭಾರತೀಯ ಸೇನೆಯ ಏಳು ಯೋಧರು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Feb 07, 2022 | 5:25 PM

ಇಟಾನಗರ: ಅರುಣಾಚಲ ಪ್ರದೇಶದ ಅತ್ಯಂತ ಎತ್ತರ ವಲಯವಾದ ಕಾಮೆಂಗ್​​ನಲ್ಲಿ ಹಿಮಕುಸಿತ( Avalanche) ಉಂಟಾದ ಪರಿಣಾಮ ಸುಮಾರು ಏಳು ಮಂದಿ ಸೇನಾ ಸಿಬ್ಬಂದಿ ಅದರಡಿಯಲ್ಲಿ ಸಿಲುಕಿದ್ದಾರೆ. ಇಲ್ಲಿ ಭಾರತೀಯ ಸೇನಾ ಯೋಧರು ಗಸ್ತು ತಿರುಗುತ್ತಿದ್ದರು. ಅವರ ಮೇಲೆ ಹಿಮ ಕುಸಿದು ಬಿದ್ದಿದೆ. ಅಲ್ಲಿದ್ದ ಏಳು ಮಂದಿ ಹಿಮದಡಿ ಸಮಾಧಿಯಾಗಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ. ಈ ಘಟನೆ ನಿನ್ನೆಯೇ ನಡೆದಿದ್ದು, ನಾಪತ್ತೆಯಾದವರ ಹುಡುಕಾಟ, ರಕ್ಷಣಾ ಕಾರ್ಯಾಚರಣೆ ಇನ್ನೂ ಕೂಡ ನಡೆಯುತ್ತಲೇ ಇದೆ.   

ಕಳೆದ ಹಲವು ದಿನಗಳಿಂದಲೂ ಇಲ್ಲಿ ಹಿಮಪಾತ ಆಗುತ್ತಲೇ ಇತ್ತು. ಹಾಗಾಗಿ ಹವಾಮಾನ ಕೂಡ ಪ್ರತಿಕೂಲವಾಗಿತ್ತು. ಆದರೆ ಭಾನುವಾರ ಭಾರಿ ಪ್ರಮಾಣದಲ್ಲಿ ಹಿಮಪಾತವಾಗಿದೆ. ಘಟನೆ ನಡೆಯುತ್ತಿದ್ದಂತೆ ಯೋಧರ ರಕ್ಷಣೆಗಾಗಿ ವಿಶೇಷ ತರಬೇತಿ ಪಡೆದ ಸೈನಿಕರ ತಂಡಗಳನ್ನು ಅಲ್ಲಿಗೆ ಕಳಿಸಲಾಗಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ. ಸಮುದ್ರ ಮಟ್ಟದಿಂದ ಅತ್ಯಂತ ಎತ್ತರದಲ್ಲಿರುವ ಈ ಗಡಿ ರಾಜ್ಯಗಳಲ್ಲಿ ಸೈನಿಕರು ಕೆಲಸ ನಿರ್ವಹಿಸುವುದು ಅತ್ಯಂತ ಕಷ್ಟ. ಸದಾ ಹಿಮಪಾತವಾಗುವ ಪ್ರದೇಶಗಳಲ್ಲಂತೂ ಅದೆಷ್ಟು ಯೋಧರು ಪ್ರಾಣ ಕಳೆದುಕೊಳ್ಳುತ್ತಾರೆ ಹೇಳಲು ಸಾಧ್ಯವಿಲ್ಲ. 2020ರ ಮೇ ತಿಂಗಳಲ್ಲಿ ಸಿಕ್ಕಿಂನಲ್ಲಿ ಹಿಮಪಾತವಾಗಿ ಇಬ್ಬರು ಯೋಧರು ಪ್ರಾಣಕಳೆದುಕೊಂಡಿದ್ದರು.  2021ರ ಅಕ್ಟೋಬರ್​ನಲ್ಲಿ ಉತ್ತರಾಖಂಡ್​ನ ತ್ರಿಶೂಲ್​ ಪರ್ವತದಲ್ಲಿ ಉಂಟಾದ ಹಿಮಪಾತಕ್ಕೆ ನೌಕಾಪಡೆಯ ಐವರು ಯೋಧರು ಮೃತರಾಗಿದ್ದರು. ನಂತರ ಅವರ ಮೃತದೇಹ ಪತ್ತೆಯಾಗಿತ್ತು.

ಇದನ್ನೂ ಓದಿ: ಮಾಲ್ಡೀವ್ ನಲ್ಲಿ ಹಾಟ್ ಹಾಟ್ ಫೋಟೋ ಶೂಟ್ ಮಾಡಿಸಿಕೊಂಡ ನಟಿ

Published On - 2:40 pm, Mon, 7 February 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್