‘ಜನರಿಗಾಗಿ ಕೆಲಸ ಮಾಡುವವರು ಇತರರನ್ನು ನಿಂದಿಸುವುದಿಲ್ಲ’; ದುರಂತ ಸರ್ಕಾರ ಎಂಬ ಮೋದಿ ಹೇಳಿಕೆಗೆ ಕೇಜ್ರಿವಾಲ್ ತಿರುಗೇಟು

|

Updated on: Jan 03, 2025 | 5:03 PM

ದೆಹಲಿಯಲ್ಲಿ ಇಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಆಪ್ ಸರ್ಕಾರವನ್ನು ಆಪ್ಡಾ ಸರ್ಕಾರ (ದುರಂತ ಸರ್ಕಾರ) ಎಂದು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ತಿರುಗೇಟು ನೀಡಿರುವ ಆಪ್ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್, ಪ್ರಧಾನಿ ಮೋದಿ ಇಂದು ದೆಹಲಿಗೆ ಬಂದು 43 ನಿಮಿಷಗಳ ಭಾಷಣ ಮಾಡಿದ್ದಾರೆ. ಅದರಲ್ಲಿ 39 ನಿಮಿಷಗಳ ಕಾಲ ಅವರು ದೆಹಲಿಯಲ್ಲಿ ಬಹುಮತದಿಂದ ರಚಿಸಲ್ಪಟ್ಟ ಸರ್ಕಾರವನ್ನು ನಿಂದಿಸಿದ್ದಾರೆ ಎಂದಿದ್ದಾರೆ.

ಜನರಿಗಾಗಿ ಕೆಲಸ ಮಾಡುವವರು ಇತರರನ್ನು ನಿಂದಿಸುವುದಿಲ್ಲ; ದುರಂತ ಸರ್ಕಾರ ಎಂಬ ಮೋದಿ ಹೇಳಿಕೆಗೆ ಕೇಜ್ರಿವಾಲ್ ತಿರುಗೇಟು
Aap Leader Arvind Kejriwal
Follow us on

ನವದೆಹಲಿ: ಪ್ರಧಾನಿ ಮೋದಿಯವರ ‘ಆಪ್ಡಾ ಸರ್ಕಾರ’ (ದುರಂತ ಸರ್ಕಾರ) ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಜನರಿಗಾಗಿ ಕೆಲಸ ಮಾಡುವವರು ಎಂದಿಗೂ ಇತರರನ್ನು ನಿಂದಿಸುವುದಿಲ್ಲ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಇಂದು ದೆಹಲಿಗೆ ಬಂದು 43 ನಿಮಿಷಗಳ ಭಾಷಣ ಮಾಡಿದರು. ಅದರಲ್ಲಿ 39 ನಿಮಿಷಗಳ ಕಾಲ ದೆಹಲಿಯಲ್ಲಿ ಪ್ರಚಂಡ ಬಹುಮತದಿಂದ ರಚಿಸಲಾದ ಸರ್ಕಾರವನ್ನು ನಿಂದಿಸಿದರು ಎಂದಿದ್ದಾರೆ.

ದೆಹಲಿ ಸರ್ಕಾರ 10 ವರ್ಷಗಳಲ್ಲಿ ಮಾಡಿರುವ ಕೆಲಸಗಳನ್ನು ಲೆಕ್ಕ ಹಾಕಲು 2ರಿಂದ 3 ಗಂಟೆ ಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಆದರೆ ಬಿಜೆಪಿಯವರು ಇಂದು ಪ್ರಧಾನಿ ಹೇಳುವಂತಹ ಯಾವ ಕೆಲಸವನ್ನೂ ಮಾಡಿಲ್ಲ ಎಂದಿದ್ದಾರೆ. ಕೆಲಸ ಮಾಡುವವನನ್ನು ಬೈಯಬಾರದು, ಮಾಡದವನನ್ನು ಬೈಯಬೇಕು. ಪ್ರಧಾನಿಯವರು 2020ರಲ್ಲಿ ನಿರ್ಣಯದ ಪತ್ರವನ್ನು ನೀಡಿದ್ದರು. ಆದರೆ, ಇದುವರೆಗೆ 5 ವರ್ಷಗಳಲ್ಲಿ ಕೇವಲ 4700 ಮನೆಗಳನ್ನು ಮಾತ್ರ ನಿರ್ಮಿಸಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ: ನಾನು ಕೂಡ ಶೀಶ್​ ಮಹಲ್ ನಿರ್ಮಿಸಬಹುದಿತ್ತು; ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಇಂದು ಬೆಳಗ್ಗೆ ದೆಹಲಿಯ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಎಎಪಿ ದೆಹಲಿಗೆ “ಆಪ್ಡಾ” (ದುರಂತ) ಆಗಿದೆ ಎಂದು ವಾಗ್ದಾಳಿ ನಡೆಸಿದ್ದರು. ಈ “ಆಪ್ಡಾ” ಕಳೆದ 10 ವರ್ಷಗಳಲ್ಲಿ ರಾಷ್ಟ್ರ ರಾಜಧಾನಿಯನ್ನು ತನ್ನ ಹಿಡಿತದಲ್ಲಿ ತೆಗೆದುಕೊಂಡಿದೆ ಎಂದು ಹೇಳಿದ್ದರು. ವಸತಿ ಮತ್ತು ಶಿಕ್ಷಣ ಕ್ಷೇತ್ರಗಳು ಸೇರಿದಂತೆ ರಾಷ್ಟ್ರ ರಾಜಧಾನಿಯಲ್ಲಿ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದ ನಂತರ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಎಪಿ ನೇತೃತ್ವದ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಆಪ್ ಆಳ್ವಿಕೆ ಮುಂದುವರಿದರೆ ರಾಷ್ಟ್ರ ರಾಜಧಾನಿಯಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂದು ಹೇಳಿದರು.


ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ನಾನು ಕೂಡ ನನಗಾಗಿ “ಶೀಶ್ ಮಹಲ್” ಅನ್ನು ನಿರ್ಮಿಸಬಹುದಿತ್ತು. ಆದರೆ ದೇಶದ ಪ್ರತಿಯೊಬ್ಬರಿಗೂ ಮನೆಗಳನ್ನು ನಿರ್ಮಿಸಿಕೊಡುವುದು ನನ್ನ ಕನಸು. ಆ ನಿಟ್ಟಿನಲ್ಲಿ ನಾವು ಹೆಜ್ಜೆಯಿಡುತ್ತಿದ್ದೇವೆ ಎಂದು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ