ಅಮಿತ್ ಶಾ ಪ್ರಧಾನಿಯಾಗುತ್ತಾರೆ: ಮತ್ತೊಮ್ಮೆ ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್

ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ. ಅವರಿಗೆ ಶಿವರಾಜ್ ಸಿಂಗ್ ಚೌಹಾಣ್, ಡಾ. ರಮಣ್ ಸಿಂಗ್, ವಸುಂಧರಾ ರಾಜೆ, ಮನೋಹರ್ ಲಾಲ್ ಖಟ್ಟರ್, ದೇವೇಂದ್ರ ಫಡ್ನವೀಸ್ ಅವರಂತೆ ಬಿಜೆಪಿ ಪ್ರತಿ ಸವಾಲನ್ನು ಬದಿಗೊತ್ತಿದೆ. ಈಗ ಇರುವ ಏಕೈಕ ಸವಾಲು ಯೋಗಿ ಆದಿತ್ಯನಾಥ್. ಅವರನ್ನು 2-3 ತಿಂಗಳೊಳಗೆ ತೆಗೆದುಹಾಕಲಾಗುವುದು.

ಅಮಿತ್ ಶಾ ಪ್ರಧಾನಿಯಾಗುತ್ತಾರೆ: ಮತ್ತೊಮ್ಮೆ ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್
ಕೇಜ್ರಿವಾಲ್- ಅಖಿಲೇಶ್

Updated on: May 16, 2024 | 1:11 PM

ದೆಹಲಿ ಮೇ 16: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು 2025 ರಲ್ಲಿ ನರೇಂದ್ರ ಮೋದಿಯವರಿಗೆ (Narendra Modi) 75 ವರ್ಷವಾದ ನಂತರ ಅಮಿತ್ ಶಾ (Amit Shah)ಅವರು ಪ್ರಧಾನಿಯಾಗುತ್ತಾರೆ ಎಂದು ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. 75 ವರ್ಷದ ನಂತರ ತಾನು ನಿವೃತ್ತಿಯಾಗುತ್ತೇನೆ ಎಂದು ಪ್ರಧಾನಿ ಎಂದಿಗೂ ಹೇಳಲಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್ ಹೇಳಿದ್ದಾರೆ. ಲಕ್ನೋದಲ್ಲಿ ಅಖಿಲೇಶ್ ಯಾದವ್, ಕೇಜ್ರಿವಾಲ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು ದೆಹಲಿಯಲ್ಲಿ ಪ್ರಧಾನಿ ಮೋದಿ ಅವರ ವಯಸ್ಸು ಮತ್ತು ನಿವೃತ್ತಿಯ ವಿಷಯವನ್ನು ಪ್ರಸ್ತಾಪಿಸಿದಾಗ, ಅಮಿತ್ ಶಾ ಮತ್ತು ಇತರ ಹಲವಾರು ನಾಯಕರು ಅದನ್ನು ವಿರೋಧಿಸಿದರು. 75 ವರ್ಷ ವಯಸ್ಸಿನಲ್ಲೂ ಮೋದಿ ತಮ್ಮ ನಿವೃತ್ತಿ ನಿಯಮವನ್ನು ಮುರಿಯುವುದಿಲ್ಲ ಎಂದು ಇಡೀ ದೇಶವೇ ನಂಬುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ. ಅವರಿಗೆ ಶಿವರಾಜ್ ಸಿಂಗ್ ಚೌಹಾಣ್, ಡಾ. ರಮಣ್ ಸಿಂಗ್, ವಸುಂಧರಾ ರಾಜೆ, ಮನೋಹರ್ ಲಾಲ್ ಖಟ್ಟರ್, ದೇವೇಂದ್ರ ಫಡ್ನವೀಸ್ ಅವರಂತೆ ಬಿಜೆಪಿ ಪ್ರತಿ ಸವಾಲನ್ನು ಬದಿಗೊತ್ತಿದೆ. ಈಗ ಇರುವ ಏಕೈಕ ಸವಾಲು ಯೋಗಿ ಆದಿತ್ಯನಾಥ್. ಅವರನ್ನು 2-3 ತಿಂಗಳೊಳಗೆ ತೆಗೆದುಹಾಕಲಾಗುವುದು, ಯಾಕೆಂದರೆ ಆದಿತ್ಯನಾಥ್ ಅವರ ಬೀಳ್ಕೊಡುಗೆ ಬಹುತೇಕ ಖಚಿತ ಎಂದು ತಾನು ಹೇಳಿದ್ದನ್ನು ಯಾವುದೇ ಬಿಜೆಪಿ ನಾಯಕರು ವಿರೋಧಿಸಲಿಲ್ಲ ಎಂದಿದ್ದಾರೆ ಕೇಜ್ರಿವಾಲ್.

ಕೇಜ್ರಿವಾಲ್- ಅಖಿಲೇಶ್ ಸುದ್ದಿಗೋಷ್ಠಿ

ಚುನಾವಣೆಯಲ್ಲಿ ಗೆದ್ದರೆ ಮೀಸಲಾತಿಯನ್ನು ಕೊನೆಗೊಳಿಸುವುದು ಬಿಜೆಪಿಯ ‘ದೊಡ್ಡ ಯೋಜನೆ’ ಎಂದು ಕೇಜ್ರಿವಾಲ್ ಹೇಳಿದರು.

ತಿಹಾರ್‌ ಜೈಲಿನಿಂದ ಹೊರಬಂದ ನಂತರ ತಮ್ಮ ಮೊದಲ ರ‍್ಯಾಲಿಯಲ್ಲಿ, ಕೇಜ್ರಿವಾಲ್ ಅವರು ಬಿಜೆಪಿಗೆ ಮತ ಹಾಕುವುದು ಎಂದರೆ 2025 ರಲ್ಲಿ ನರೇಂದ್ರ ಮೋದಿಗೆ 75 ವರ್ಷವಾಗುವುದರಿಂದ ಅಮಿತ್ ಶಾ ಅವರನ್ನು ಪ್ರಧಾನಿ ಮಾಡಲು ಮತ ಹಾಕುವುದು ಎಂದರ್ಥ. ಪಕ್ಷದ ಆಡಳಿತಕ್ಕೆ 75 ವರ್ಷಕ್ಕಿಂತ ಮೇಲ್ಪಟ್ಟವರು ಯಾರೂ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಕೇಜ್ರಿವಾಲ್ ಹೇಳಿಕೆಗೆ ಉತ್ತರಿಸಿದ ಅಮಿತ್ ಶಾ, 2029ರ ನಂತರವೂ ನರೇಂದ್ರ ಮೋದಿ ತಮ್ಮ ಅವಧಿಯನ್ನು ಪೂರ್ಣಗೊಳಿಸಿ ಪಕ್ಷವನ್ನು ಮುನ್ನಡೆಸುತ್ತಾರೆ ಎಂದು ಹೇಳಿದರು. ನಾಯಕತ್ವದ ಬಗ್ಗೆ ಪಕ್ಷದೊಳಗೆ ಯಾರೂ ಇಲ್ಲದಿರುವಾಗ ಕೇಜ್ರಿವಾಲ್ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ ಎಂದು ಅಮಿತ್ ಶಾ ಆರೋಪಿಸಿದ್ದಾರೆ.

ಇದನ್ನೂ ಓದಿ: Heatwave Deaths: 30 ವರ್ಷಗಳಲ್ಲಿ ಶಾಖದ ಅಲೆಯಿಂದ ಜಾಗತಿಕವಾಗಿ 1.53 ಲಕ್ಷ ಮಂದಿ ಸಾವು, ಭಾರತದವರೆಷ್ಟು?

ನಾನು ಅರವಿಂದ್ ಕೇಜ್ರಿವಾಲ್ ಮತ್ತು ಕಂಪನಿಗೆ ಹೇಳ ಬಯಸುವುದೇನೆಂದರೆ, ಮೋದಿಜಿ 75 ವರ್ಷಕ್ಕೆ ಕಾಲಿಡುತ್ತಿರುವ ಬಗ್ಗೆ ನೀವು ಸಂತೋಷಪಡಬೇಕಾಗಿಲ್ಲ. ಅವರು ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಬಿಜೆಪಿಯ ಸಂವಿಧಾನದಲ್ಲಿ ಎಲ್ಲಿಯೂ ಬರೆದಿಲ್ಲ. ಅವರು ಪ್ರಧಾನಿಯಾಗುತ್ತಾರೆ ಮತ್ತು ಅವರ ಅವಧಿಯನ್ನು ಪೂರ್ಣಗೊಳಿಸುತ್ತಾರೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ