ಯಮುನಾ ನದಿ ಕುರಿತ ತಮ್ಮ ಹೇಳಿಕೆಗೆ ಚುನಾವಣಾ ಆಯೋಗಕ್ಕೆ ಉತ್ತರಿಸಿದ ಕೇಜ್ರಿವಾಲ್; ಮತ್ತೆ ಹರಿಯಾಣದ ಬಗ್ಗೆ ಆಕ್ರೋಶ
ದೆಹಲಿಗೆ ಹರಿಯುತ್ತಿರುವ ಯಮುನಾ ನದಿ ನೀರಿಗೆ ಹರಿಯಾಣದ ಬಿಜೆಪಿ ಸರ್ಕಾರ ವಿಷ ಬೆರೆಸುತ್ತಿದೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ಈ ಬಗ್ಗೆ ಸಾಕ್ಷಿಗಳ ಸಮೇತ ಉತ್ತರಿಸುವಂತೆ ಚುನಾವಣಾ ಆಯೋಗ ಸೂಚಿಸಿತ್ತು. ಇದೀಗ ಚುನಾವಣಾ ಆಯೋಗಕ್ಕೆ ಉತ್ತರಿಸಿರುವ ಆಪ್ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಕುಡಿಯುವ ನೀರಿನ ಗುಣಮಟ್ಟದ ಕಾರಣದಿಂದ ಆರೋಗ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದೆ ಎಂದಿದ್ದಾರೆ.
![ಯಮುನಾ ನದಿ ಕುರಿತ ತಮ್ಮ ಹೇಳಿಕೆಗೆ ಚುನಾವಣಾ ಆಯೋಗಕ್ಕೆ ಉತ್ತರಿಸಿದ ಕೇಜ್ರಿವಾಲ್; ಮತ್ತೆ ಹರಿಯಾಣದ ಬಗ್ಗೆ ಆಕ್ರೋಶ](https://images.tv9kannada.com/wp-content/uploads/2025/01/kejriwal-1.jpg?w=1280)
ನವದೆಹಲಿ: ಯಮುನಾ ನದಿ ನೀರು ವಿಷಪೂರಿತವಾಗಿದೆ ಎಂಬ ತಮ್ಮ ಹೇಳಿಕೆಗೆ ಅರವಿಂದ್ ಕೇಜ್ರಿವಾಲ್ ಚುನಾವಣಾ ಆಯೋಗಕ್ಕೆ ಉತ್ತರ ಸಲ್ಲಿಸಿದ್ದಾರೆ. ತಮ್ಮ ಉತ್ತರದಲ್ಲಿ ಮತ್ತೆ ಹರಿಯಾಣವನ್ನು ಅವರು ದೂಷಿಸಿದ್ದಾರೆ. “ತೀವ್ರ ವಿಷಕಾರಿಯಾದ, ಹರಿಯಾಣದಿಂದ ಸ್ವೀಕರಿಸಿದ ಕಚ್ಚಾ ನೀರಿನ ಮಾಲಿನ್ಯವನ್ನು ಎತ್ತಿ ತೋರಿಸಲು ಯಮುನಾ ನೀರಿನ ಬಗ್ಗೆ ಹೇಳಿಕೆಗಳನ್ನು ನೀಡಿದ್ದೆ” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿರುವಂತೆ, ಚುನಾವಣಾ ಆಯೋಗ ಯಮುನಾ ನದಿಯನ್ನು “ವಿಷಪೂರಿತ” ಎಂದು ಹೇಳಲು ಕಾರಣವೇನೆಂದು ವಿವರಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕೊಲ್ಲಬಹುದಾಗಿದ್ದ ರಾಸಾಯನಿಕಗಳ ಸ್ವರೂಪ ಮತ್ತು ವ್ಯಾಪ್ತಿಯನ್ನು ಈ ಯಮುನಾ ನದಿ ನೀರು ಹೊಂದಿತ್ತು ಎಂದಿದ್ದಾರೆ.
ಇದನ್ನೂ ಓದಿ: ಯಮುನಾ ನೀರು ವಿಷಪೂರಿತವಾಗಿದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ಗೆ ಸಮನ್ಸ್ ಜಾರಿ
ಜನವರಿ 29ರಂದು ಹರಿಯಾಣದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಪಕ್ಷದ ವಿರುದ್ಧದ ಆರೋಪಗಳ ಕುರಿತು ಭಾರತ ಆಯೋಗ(ಇಸಿಐ)ಕ್ಕೆ ಪ್ರತ್ಯುತ್ತರಿಸಿದ್ದಾರೆ. ಜನವರಿ 28ರಂದು ಚುನಾವಣಾ ಆಯೋಗವು ಹರಿಯಾಣದಲ್ಲಿ ಬಿಜೆಪಿ ಯಮುನಾ ನದಿಗೆ ವಿಷಪ್ರಾಶನ ಮಾಡುತ್ತಿದೆ ಎಂಬ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಗೆ ಪುರಾವೆಗಳನ್ನು ಒದಗಿಸುವಂತೆ ಸೂಚಿಸಿತ್ತು.
ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಗಳು ದಾರಿತಪ್ಪಿಸುವಂತಿದೆ ಎಂದು ಹರಿಯಾಣ ಸರ್ಕಾರ ಕಳವಳ ವ್ಯಕ್ತಪಡಿಸಿತ್ತು. ಚುನಾವಣಾ ರ್ಯಾಲಿಯಲ್ಲಿ ಮಾತನಾಡುವಾಗ ಅರವಿಂದ್ ಕೇಜ್ರಿವಾಲ್ ಹರಿಯಾಣದ ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಹರಿಯಾಣ ಸರ್ಕಾರ ಯಮುನಾ ನದಿಗೆ ವಿಷ ಬೆರೆಸಿದೆ. ಈ ಮೂಲಕ ಸಾಮೂಹಿಕ ನರಮೇಧಕ್ಕೆ ಮುಂದಾಗಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ