ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ನಾವು ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್, ಪೆಟ್ ಬಾಟಲ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಇಂದು ದೆಹಲಿಯಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಆಡಳಿತ ಮಂಡಳಿಯ 8ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ಲಾಸ್ಟಿಕ್ ಮತ್ತು ಪೆಟ್ ಬಾಟಲಿಗಳಲ್ಲಿನ ಆಹಾರ ಪದಾರ್ಥ ಸೇವನೆಯಿಂದ ಮೈಕ್ರೋ ಲೆವೆಲ್ ಪ್ಲಾಸ್ಟಿಕ್ ಹಂತ-ಹಂತವಾಗಿ ಸಣ್ಣ ಪ್ರಮಾಣದಲ್ಲಿ ನಮ್ಮ ದೇಹವನ್ನು ಸೇರುತ್ತಿದೆ. ಇದು ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಫೈಬರ್ ಅಂಶವಿರುವ ಮತ್ತು ಪ್ಲಾಸ್ಟಿಕ್ನಂತಹ ಪ್ಯಾಕೆಟ್ಗಳಲ್ಲಿನ ಆಹಾರ ಸೇವನೆಯಿಂದ ಇಂದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಆಯುಷ್ಮಾನ್ ಭಾರತ್ ಬಾಕಿ ಪಾವತಿಸಲು ಪಂಜಾಬ್ ಸರ್ಕಾರ ವಿಫಲ; ಆಪ್ ವಿರುದ್ಧ ಕೇಂದ್ರ ಸರ್ಕಾರ ಟೀಕೆ
ಇಂದು ಬಹುತೇಕ ಜಂಕ್ ಫುಡ್ಗಳನ್ನೆಲ್ಲ ಪ್ಲಾಸ್ಟಿಕ್ ಪ್ಯಾಕೆಟ್ ಗಳಲ್ಲೇ ಹಾಕಿ ನೀಡಲಾಗುತ್ತದೆ. ಇದನ್ನು ಮನಗಂಡು ಪ್ರಧಾನಿ ನರೇಂದ್ರ ಮೋದಿ ಅವರು ಸಭೆ, ಸಮಾರಂಭಗಳಲ್ಲಿ ಇಂಥ ಪ್ಲಾಸ್ಟಿಕ್, ಪೆಟ್ ಬಾಟಲ್ ಬಳಕೆ ನಿಲ್ಲಿಸಲು ನಿರ್ದೇಶಿಸಿದ್ದಾರೆ ಎಂದು ಹೇಳಿದರು.
Both food safety and food quality are equally important to enhance the export potential of India to make Bharat a brand in the global food sector. pic.twitter.com/sQlHbStORC
— Pralhad Joshi (@JoshiPralhad) September 20, 2024
ಪ್ರಧಾನಿ ಮೋದಿ ವರ ಮಾರ್ಗದರ್ಶನದಂತೆ ನಾವು ಸಭೆ, ಸಮಾರಂಭಗಳಲ್ಲಿ ಪೆಟ್ ಬಾಟಲ್ ಬಳಕೆಯನ್ನು ಕೈ ಬಿಟ್ಟಿದ್ದೇವೆ. ನಮ್ಮ ದೇಶದಲ್ಲಿ ಆಹಾರ ಉತ್ಪನ್ನಗಳ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಇರುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
Both food safety and food quality are equally important to enhance the export potential of India to make Bharat a brand in the global food sector. pic.twitter.com/4NaF32ercx
— Pralhad Joshi (@JoshiPralhad) September 20, 2024
ವಾರ್ಷಿಕ 112 ಕೋಟಿ ಉಳಿತಾಯ:
ಜನ್ ಪೋಷಣ್ ಕೇಂದ್ರ, ಮೇರಾ ರೇಷನ್ 2.0 ಆ್ಯಪ್ ಬಿಡುಗಡೆ ಮತ್ತು ಪಿಡಿಎಸ್ ಪೂರೈಕೆ ವ್ಯವಸ್ಥೆ ಉತ್ತಮಗೊಳಿಸುವ ಮೂಲಕ 13 ರಾಜ್ಯಗಳಲ್ಲಿ ವಾರ್ಷಿಕ 112 ಕೋಟಿ ರೂ. ಉಳಿತಾಯವಾಗಿದೆ. ಗುಣಮಟ್ಟ ನಿರ್ವಹಣಾ ವ್ಯವಸ್ಥೆ (QMS) ಮತ್ತು SCAN 2.0 ಪೋರ್ಟಲ್ ಅನುಷ್ಠಾನ ಪಾರದರ್ಶಕತೆ ಹೊಂದಿದೆ. ರಾಗಿ ದಾಖಲೆ ಸಂಗ್ರಹಣೆ ಮತ್ತು ಹೆಚ್ಚಿದ ಎಥೆನಾಲ್ ಉತ್ಪಾದನಾ ಸಾಮರ್ಥ್ಯವು ನಮ್ಮ ಆಹಾರ ಭದ್ರತೆಯನ್ನು ಮತ್ತಷ್ಟು ಬಲಪಡಿಸಿದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದರು.
Consumption of beverages from PET bottles results in plastics entering our body in micro quantities, resulting in irreversible damage. As per PM Shri Narendra Modi’s direction we have stopped using PET bottles during events. pic.twitter.com/ctwFxWvAPi
— Pralhad Joshi (@JoshiPralhad) September 20, 2024
ಇದನ್ನೂ ಓದಿ: ವಿದೇಶದಲ್ಲಿ ಭಾರತವನ್ನು ಕಾಂಗ್ರೆಸ್ ಅವಮಾನಿಸಿದೆ; ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಅಂತಾರಾಷ್ಟ್ರೀಯ ಸಂಬಂಧಗಳ ಸುಧಾರಣೆಗೆ (IRD) ಪೋರ್ಟಲ್, ಹಾಲ್ ಮಾರ್ಕಿಂಗ್ ಪೋರ್ಟಲ್ ಅಭಿವೃದ್ಧಿ, ಪಾಲುದಾರ ಸಂಸ್ಥೆಗಳಲ್ಲಿ ತಾಂತ್ರಿಕ ತರಬೇತಿಗಾಗಿ ಕೈಪಿಡಿಗಳ ಡಿಜಿಟಲ್ ಆವೃತ್ತಿ ಅನಾವರಣ, ಅಲ್ಲದೆ, BIS ಚಟುವಟಿಕೆ ಪರಿಶೀಲನೆ ಮತ್ತು ಪ್ರಾಮಾಣೀಕರಣ ಸೌಲಭ್ಯಗಳನ್ನು ಹೆಚ್ಚಿಸುವ ಕುರಿತು ಈ BIS ಮಂಡಳಿ ಸಭೆಯಲ್ಲಿ ಚರ್ಚಿಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:37 pm, Fri, 20 September 24