ಅಸ್ಸಾಂನಲ್ಲಿ ಆಧಾರ್ ಕಾರ್ಡ್ ಅರ್ಜಿದಾರರಿಗೆ ಹೊಸ ಷರತ್ತು ವಿಧಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ
ಆಧಾರ್ ಕಾರ್ಡ್‌ಗಾಗಿ ಅರ್ಜಿಗಳು ಜನಸಂಖ್ಯೆಗಿಂತ ಹೆಚ್ಚಿವೆ. ಅನುಮಾನಾಸ್ಪದ ನಾಗರಿಕರಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ. ಹೊಸ ಅರ್ಜಿದಾರರು ತಮ್ಮ ಎನ್‌ಆರ್‌ಸಿ ಅರ್ಜಿ ರಶೀದಿ ಸಂಖ್ಯೆಯನ್ನು (ARN) ಸಲ್ಲಿಸಬೇಕು ಎಂದು ನಾವು ನಿರ್ಧರಿಸಿದ್ದೇವೆ" ಎಂದು ಅಸ್ಸಾಂ ಸಿಎಂ ಹೇಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.
ಗುವಾಹಟಿ ಸೆಪ್ಟೆಂಬರ್ 07: ರಾಜ್ಯದಲ್ಲಿ ಆಧಾರ್ ಕಾರ್ಡ್‌ಗಾಗಿ ಹೊಸ ಅರ್ಜಿದಾರರು ತಮ್ಮ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಅರ್ಜಿ ರಶೀದಿ ಸಂಖ್ಯೆಯನ್ನು ಸಲ್ಲಿಸಬೇಕು ಎಂದು ಅಸ್ಸಾಂ (Assam) ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಶನಿವಾರ ಹೇಳಿದ್ದಾರೆ. ಆಧಾರ್ ಕಾರ್ಡ್‌ಗಾಗಿ ಅರ್ಜಿಗಳು ಜನಸಂಖ್ಯೆಗಿಂತ ಹೆಚ್ಚಿವೆ. ಅನುಮಾನಾಸ್ಪದ ನಾಗರಿಕರಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ. ಹೊಸ ಅರ್ಜಿದಾರರು ತಮ್ಮ ಎನ್‌ಆರ್‌ಸಿ ಅರ್ಜಿ ರಶೀದಿ ಸಂಖ್ಯೆಯನ್ನು (ARN) ಸಲ್ಲಿಸಬೇಕು ಎಂದು ನಾವು ನಿರ್ಧರಿಸಿದ್ದೇವೆ” ಎಂದು ಶರ್ಮಾ ಹೇಳಿರುವುದಾಗಿ ಪಿಟಿಐ ಉಲ್ಲೇಖಿಸಿದೆ.
ಈ ಕ್ರಮವು “ಅಕ್ರಮ ವಿದೇಶಿಗರ ಒಳಹರಿವನ್ನು ತಡೆಯುತ್ತದೆ” ಮತ್ತು ಆಧಾರ್ ಕಾರ್ಡ್‌ಗಳನ್ನು ನೀಡುವಲ್ಲಿ ರಾಜ್ಯ ಸರ್ಕಾರವು “ಅತ್ಯಂತ ಕಟ್ಟುನಿಟ್ಟಾಗಿ” ಇರುತ್ತದೆ. ಅಸ್ಸಾಂನಲ್ಲಿ ಆಧಾರ್ ಪಡೆಯುವುದು ಸುಲಭವಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
“ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆಯಲ್ಲಿ ಬಯೋಮೆಟ್ರಿಕ್ಸ್ ಲಾಕ್ ಆಗಿರುವ 9.55 ಲಕ್ಷ ಜನರಿಗೆ ಎನ್‌ಆರ್‌ಸಿ ಅರ್ಜಿ ರಶೀದಿ ಸಂಖ್ಯೆಯನ್ನು ಸಲ್ಲಿಸುವುದು ಅನ್ವಯಿಸುವುದಿಲ್ಲ ಮತ್ತು ಅವರು ತಮ್ಮ ಕಾರ್ಡ್‌ಗಳನ್ನು ಪಡೆಯುತ್ತಾರೆ ಎಂದಿದ್ದಾರೆ ಶರ್ಮಾ.
ಕಳೆದ ಎರಡು ತಿಂಗಳಲ್ಲಿ ಹಲವಾರು ಬಾಂಗ್ಲಾದೇಶೀಯರನ್ನು ಬಂಧಿಸಿ ನೆರೆಯ ದೇಶದ ಅಧಿಕಾರಿಗಳಿಗೆ ಹಸ್ತಾಂತರಿಸಿರುವುದರಿಂದ ಅಕ್ರಮ ವಿದೇಶಿಯರನ್ನು ಗುರುತಿಸುವ ಪ್ರಕ್ರಿಯೆಯನ್ನು ತಮ್ಮ ಸರ್ಕಾರ ತೀವ್ರಗೊಳಿಸಲಿದೆ ಎಂದು ಅಸ್ಸಾಂ ಸಿಎಂ ಹೇಳಿದ್ದಾರೆ.
‘ಅಸ್ಸಾಂನಲ್ಲಿ ಜನಸಂಖ್ಯಾಶಾಸ್ತ್ರ ಬದಲಾವಣೆ’ ಕುರಿತು ಹಿಮಂತ ಶರ್ಮಾ
ಈ ಹಿಂದೆ ಅಸ್ಸಾಂ ಮುಖ್ಯಮಂತ್ರಿ ರಾಜ್ಯದಲ್ಲಿನ ‘ಜನಸಂಖ್ಯಾಶಾಸ್ತ್ರ ಬದಲಾವಣೆ’ಯ ವಿಷಯವನ್ನು ಎತ್ತಿದ್ದರು. ಆಗಸ್ಟ್ 28 ರಂದು, ಶರ್ಮಾ ಈ ವಿಷಯದ ಬಗ್ಗೆ ಶ್ವೇತಪತ್ರದ ಭರವಸೆ ನೀಡಿದರು.
ಇದನ್ನೂ ಓದಿ: ಉತ್ತರ ಪ್ರದೇಶ: ಲಕ್ನೋದಲ್ಲಿ 3 ಅಂತಸ್ತಿನ ಕಟ್ಟಡ ಕುಸಿದು ಓರ್ವ ಸಾವು; ಹಲವರು ಸಿಲುಕಿರುವ ಶಂಕೆ
ಹಿಂದೂಗಳು ಬಹುಸಂಖ್ಯಾತರಾಗಿರುವ ಪ್ರದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೇಗೆ ಹೆಚ್ಚುತ್ತಿದೆ ಎಂಬುದರ ಕುರಿತು ಸರ್ಕಾರ ಶ್ವೇತಪತ್ರವನ್ನು ಹೊರತರಲಿದೆ. ಯಾವುದೇ ಕೋಮುಗಲಭೆಯ ವರದಿಯಾಗಿಲ್ಲ ಮತ್ತು ಎರಡು ಸಮುದಾಯಗಳು ಶಾಂತಿಯುತವಾಗಿ ಬದುಕುತ್ತಿವೆ. ಆದರೆ ಇನ್ನೊಂದು ಕಡೆ ಪರಿಸ್ಥಿತಿ ವ್ಯತಿರಿಕ್ತವಾಗಿದೆ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ‘ಮಿಯಾ’ ಮುಸ್ಲಿಮರು ರಾಜ್ಯವನ್ನು “ಆಕ್ರಮಿಸಿಕೊಳ್ಳಲು” ಬಿಡುವುದಿಲ್ಲ ಎಂದು ಸಿಎಂ ಹೇಳಿದ್ದರು. “ಕೆಳ ಅಸ್ಸಾಂನ ಜನರು ಮೇಲಿನ ಅಸ್ಸಾಂಗೆ ಏಕೆ ಹೋಗುತ್ತಾರೆ? ಹಾಗಾದರೆ ಮಿಯಾ ಮುಸ್ಲಿಮರು ಅಸ್ಸಾಂ ಅನ್ನು ವಶಪಡಿಸಿಕೊಳ್ಳಬಹುದೇ? ನಾವು ಅದನ್ನು ಆಗಲು ಬಿಡುವುದಿಲ್ಲ, ”ಎಂದು ಶರ್ಮಾ ಹೇಳಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:45 pm, Sat, 7 September 24