ಅಸ್ಸಾಂ ಬೋಟ್​​ಗಳ ಡಿಕ್ಕಿ; ಕ್ರಿಮಿನಲ್​ ಕೇಸ್​ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ

| Updated By: Lakshmi Hegde

Updated on: Sep 09, 2021 | 5:36 PM

ಬ್ರಹ್ಮಪುತ್ರ ನದಿಯ ದಕ್ಷಿಣ ದಡದಲ್ಲಿರುವ ಜೊರಹತ್​ನ ನಿಮಾತಿ ಘಾಟ್​ನಿಂದ ಮಜುಲಿಗೆ ಏನಿಲ್ಲವೆಂದರೂ ಸುಮಾರು 10 ಖಾಸಗಿ ಮಶಿನ್​ ಬೋಟ್​ಗಳು ಸಂಚರಿಸುತ್ತಿವೆ.

ಅಸ್ಸಾಂ ಬೋಟ್​​ಗಳ ಡಿಕ್ಕಿ; ಕ್ರಿಮಿನಲ್​ ಕೇಸ್​ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ
ಅಸ್ಸಾಂ ಮುಖ್ಯಮಂತ್ರಿ
Follow us on

ಅಸ್ಸಾಂನ ಜೊರಹತ್​ ಜಿಲ್ಲೆಯ ಬ್ರಹ್ಮಪುತ್ರ ನದಿಯಲ್ಲಿ ಎರಡು ಬೋಟುಗಳು (Assam Boat Capsize)Him  ಡಿಕ್ಕಿಯಾಗಿ ಒಬ್ಬರು ಮೃತಪಟ್ಟಿರುವ ಘಟನೆಗೆ ಸಂಬಂಧಪಟ್ಟಂತೆ ಕ್ರಿಮಿನಲ್​ ಕೇಸ್​ ದಾಖಲಿಸುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Assam Chief Minister Himanta Biswa Sarma), ಜೊರಹತ್​ ಪೊಲೀಸರಿಗೆ ಆದೇಶಿಸಿದ್ದಾರೆ. ನಿನ್ನೆ ಈ ದುರಂತ ನಡೆದಿತ್ತು. ಎರಡೂ ಬೋಟ್​​ನಿಂದ ಸುಮಾರು 90 ಪ್ರಯಾಣಿಕರಿದ್ದು, ಅದರಲ್ಲೀಗ ಇಬ್ಬರು ಇನ್ನೂ ಪತ್ತೆಯಾಗಿಲ್ಲ.  ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಎರಡೂ ಬೋಟ್​ಗಳು ಡಿಕ್ಕಿಯಾಗಲು ಕೆಟ್ಟದಾದ ನಿರ್ವಹಣೆಯೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲೇ ಗೊತ್ತಾಗಿದೆ. ನಾವು ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.  

ಏಕ ಎಂಜಿನ್​ ಬೋಟ್​ಗಳು ಬಂದ್​
ಬ್ರಹ್ಮಪುತ್ರ ನದಿಯ ದಕ್ಷಿಣ ದಡದಲ್ಲಿರುವ ಜೊರಹತ್​ನ ನಿಮಾತಿ ಘಾಟ್​ನಿಂದ ಮಜುಲಿಗೆ ಏನಿಲ್ಲವೆಂದರೂ ಸುಮಾರು 10 ಖಾಸಗಿ ಮಶಿನ್​ ಬೋಟ್​ಗಳು ಸಂಚರಿಸುತ್ತಿವೆ. ಇವೆಲ್ಲವೂ ಸಿಂಗಲ್​ ಎಂಜಿನ್​ನ ಬೋಟ್​ಗಳಾಗಿವೆ. ಆದರೆ ಇನ್ನು ಮುಂದೆ ಅಂಥ ಏಕ ಎಂಜಿನ್​ ಬೋಟ್​ಗಳ ಸಂಚಾರವನ್ನು ನಿಷೇಧಿಸಲಾಗುವುದು. ಯಾಕೆಂದರೆ ಆ ಎಂಜಿನ್​ಗಳು ಮರಿನ್​ ಎಂಜಿನ್​ಗಳಲ್ಲ. ಇದರಿಂದ ಖಂಡಿತ ಅಪಾಯವಾಗಲಿದೆ. ಹಾಗೊಮ್ಮೆ, ಈ ದೋಣಿಗಳ ಮಾಲೀಕರು ಯಾರಾದರೂ ತಮ್ಮ ಬೋಟ್​ನ ಎಂಜಿನ್​ನ್ನು ಸಾಗರ ಎಂಜಿನ್ ಆಗಿ ಬದಲಿಸಲು ಮುಂದೆ ಬಂದರೆ ಅದಕ್ಕೆ ನಮ್ಮ ಒಪ್ಪಿಗೆಯೂ ಇದೆ. ನಂತರ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ತಿಳಿಸಿದ್ದಾರೆ.  ಈ ಮರಿನ್​ ಎಂಜಿನ್​ಗೆ ಏನಿಲ್ಲವೆಂದರೂ 10 ಲಕ್ಷ ರೂಪಾಯಿ ಇರುತ್ತದೆ. ಯಾವುದೇ ದೋಣಿ ಮಾಲೀಕರು ಅರ್ಜಿ ಸಲ್ಲಿಸಿದರೆ ಸರ್ಕಾರದಿಂದ ನೆರವು ನೀಡಲಾಗುವುದು ಎಂದೂ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಪ್ರತಿಭಟಿಸುತ್ತಿರುವ ಆಫ್ಘನ್ ಮಹಿಳೆಯರ ವಿರುದ್ಧ ತಾಲಿಬಾನ್-ಪರ ಮಹಿಳೆಯರನ್ನೇ ಛೂಬಿಟ್ಟ ತಾಲಿಬಾನಿಗಳು!

Bhabanipur Bypoll ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಲಿದ್ದಾರೆಯೇ ಬಿಜೆಪಿಯ ಪ್ರಿಯಾಂಕಾ ಟಿಬರೆವಾಲ್?