ಅಸ್ಸಾಂ: ಅಸ್ಸಾಂನಲ್ಲಿ (Assam Rains) ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಗೃಹ ಸಚಿವ ಅಮಿತ್ ಶಾ (Amit Shah) ಅಸ್ಸಾಂನ ಮುಖ್ಯಮಂತ್ರಿ ಹಿಮಾಂತ್ ಬಿಸ್ವ ಶರ್ಮ (Himanta Biswa Sarma) ಅವರಿಗೆ ಫೋನ್ ಮಾಡಿ ಪ್ರವಾಹದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ನಿರಂತರ ಮಳೆಯ ನಡುವೆ ಕಳೆದ 24 ಗಂಟೆಗಳಲ್ಲಿ ಅಸ್ಸಾಂನಲ್ಲಿ ಪ್ರವಾಹದಿಂದಾಗಿ ಇಬ್ಬರು ಪೊಲೀಸರು ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ಅಸ್ಸಾಂನಲ್ಲಿ ಸಾವಿನ ಸಂಖ್ಯೆ 81ಕ್ಕೆ ಏರಿಕೆಯಾಗಿದೆ.
ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ರಾಜ್ಯದ ಎಲ್ಲಾ 34 ಜಿಲ್ಲೆಗಳು ಪ್ರವಾಹದ ಬಿಕ್ಕಟ್ಟಿಗೆ ಸಿಲುಕಿವೆ. ಕೊಪಿಲಿ ನದಿಯ ಪ್ರವಾಹದಲ್ಲಿ ಸಿಲುಕಿ ನಲುಗಿದ ಜನರನ್ನು ರಕ್ಷಿಸಲು ಯತ್ನಿಸುತ್ತಿದ್ದಾಗ ಒಬ್ಬ ಪೊಲೀಸ್ ಅಧಿಕಾರಿ ಮತ್ತು ಒಬ್ಬ ಕಾನ್‌ಸ್ಟೆಬಲ್ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಅಸ್ಸಾಂನಲ್ಲಿ ನಡೆಯುತ್ತಿರುವ ಪ್ರವಾಹ ಮತ್ತು ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 80 ದಾಟಿದೆ.
This is the main road of #silchar … look at the speed of water rushing in….. #silcharflood #AssamFloods #flooding pic.twitter.com/wbeicyK98h
— Samrat Roy (@samratroy21) June 20, 2022
ಪ್ರವಾಹ ಪೀಡಿತ ಅಸ್ಸಾಂನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇದುವರೆಗೆ 47 ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ. ಸೋಮವಾರ ಏಳು ಮಂದಿ ನಾಪತ್ತೆಯಾಗಿದ್ದು, 2.3 ಲಕ್ಷ ಮಂದಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಒಟ್ಟಾರೆಯಾಗಿ, ಎಲ್ಲಾ ಪೀಡಿತ ಪ್ರದೇಶಗಳಲ್ಲಿ 810 ಪರಿಹಾರ ಶಿಬಿರಗಳು ಮತ್ತು 615 ಪರಿಹಾರ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ.
Stranded travellers in Sonapur, #Meghalaya risk their lives wading through NH 06. Incessant rains and landslides have turned the road into a river of mud and limestone. @TheQuint #AssamFloods #AssamFloods2022 #Meghalaya pic.twitter.com/yUwn2fPVqF
— Tridip K Mandal (@tridipkmandal) June 20, 2022
ಇದನ್ನೂ ಓದಿ: Assam Flood: ಅಸ್ಸಾಂನ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಹೋದ ಇಬ್ಬರು ಪೊಲೀಸರು ನೀರುಪಾಲು; ಮೃತದೇಹಗಳು ಪತ್ತೆ
ಅಸ್ಸಾಂ ಪ್ರವಾಹದಿಂದ ತೊಂದರೆಗೀಡಾಗಿರುವ 47 ಲಕ್ಷ ಜನರಲ್ಲಿ ಅರ್ಧದಷ್ಟು ಜನರು ನಾಲ್ಕು ಪಶ್ಚಿಮ ಜಿಲ್ಲೆಗಳಾದ ಬಾರ್ಪೇಟಾ, ಬಕ್ಸಾ, ಗೋಲ್ಪಾರಾ ಮತ್ತು ಕಾಮ್ರೂಪ್‌ಗೆ ಸೇರಿದವರು. ಬಾರ್ಪೇಟಾದ ಒಟ್ಟು ಪ್ರದೇಶದ ಸುಮಾರು ಶೇ. 21ರಷ್ಟು ಪ್ರದೇಶವು ಪ್ರವಾಹದಲ್ಲಿ ಮುಳುಗಡೆಯಾಗಿದೆ. ಬ್ರಹ್ಮಪುತ್ರ, ಕೊಪಿಲಿ, ಬೇಕಿ, ಪಗ್ಲಾಡಿಯಾ, ಪುತಿಮರಿ ಎಂಬ ಐದು ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
Spoke to CM Assam Shri @himantabiswa and CM Meghalaya Shri @SangmaConrad to discuss the situation in parts of both states in the wake of heavy rainfall & flooding.
Modi government stands firmly with the people of Assam and Meghalaya in this hour of need.— Amit Shah (@AmitShah) June 20, 2022
ಒಟ್ಟು 1,13,485.37 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, 5,000ಕ್ಕೂ ಹೆಚ್ಚು ಹೆಕ್ಟೇರ್ ಜಮೀನು ಕೊಚ್ಚಿಹೋಗಿದೆ. ಅಸ್ಸಾಂ ರಾಜ್ಯದಲ್ಲಿನ ಕಠೋರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಮಾತನಾಡಿದ್ದಾರೆ. ಭಾರೀ ಮಳೆಯಿಂದಾಗಿ ಪ್ರವಾಹಕ್ಕೆ ಸಾಕ್ಷಿಯಾಗಿರುವ ಅಸ್ಸಾಂ ಮತ್ತು ಮೇಘಾಲಯದ ಜನರೊಂದಿಗೆ ಸರ್ಕಾರ ದೃಢವಾಗಿ ನಿಂತಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:33 pm, Tue, 21 June 22