Assembly Elections 2023: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಿದ ಕೇಂದ್ರ ಚುನಾವಣಾ ಆಯೋಗ

|

Updated on: Oct 09, 2023 | 12:52 PM

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ನಿಗದಿಪಡಿಸಿದೆ.

Assembly Elections 2023: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಿದ ಕೇಂದ್ರ ಚುನಾವಣಾ ಆಯೋಗ
ರಾಜೀವ್ ಕುಮಾರ್
Follow us on

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ(Election Commission Of India) ದಿನಾಂಕವನ್ನು ನಿಗದಿಪಡಿಸಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ಚುನಾವಣಾ ದಿನಾಂಕವನ್ನು ಘೋಷಿಸಿದ್ದಾರೆ. ತೆಲಂಗಾಣ, ಛತ್ತೀಸ್​ಗಢ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಿಜೋರಾಂ ಈ ಐದು ರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಮಧ್ಯಪ್ರದೇಶ ಹಾಗೂ ಮಿಜೋರಾಂನಲ್ಲಿ ನವೆಂಬರ್ 7 ರಂದು ಮತದಾನ ನಡೆಯಲಿದೆ, ಛತ್ತೀಸ್​ಗಢದಲ್ಲಿ ನವೆಂಬರ್ 7 ಹಾಗೂ 17ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ, ರಾಜಸ್ಥಾನದಲ್ಲಿ ನವೆಂಬರ್ 23ರಂದು ಹಾಗೂ ತೆಲಂಗಾಣದಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ.  ಡಿಸೆಂಬರ್ 3ಕ್ಕೆ ಫಲಿತಾಂಶ ಹೊರಬರಲಿದೆ.

ಐದು ಚುನಾವಣೆಗೆ ಒಳಪಟ್ಟಿರುವ ರಾಜ್ಯಗಳಲ್ಲಿ ಪುರುಷ ಮತದಾರರ ಸಂಖ್ಯೆ 8.24 ಕೋಟಿ ಮಹಿಳಾ ಮತದಾರರ ಸಂಖ್ಯೆ 7.88 ಕೋಟಿಯಷ್ಟಿದೆ.  ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರ ಸಂಖ್ಯೆ 60 ಲಕ್ಷವಿದೆ. ಅವರ ವಯಸ್ಸು 18 ರಿಂದ 19 ವರ್ಷಗಳು. 18 ವರ್ಷ ಪೂರ್ಣಗೊಳ್ಳಲಿರುವ 15.39 ಲಕ್ಷ ಮತದಾರರಿದ್ದು, ಮುಂಗಡ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ತಿಳಿಸಿದ್ದಾರೆ.

ಮತ್ತಷ್ಟು ಓದಿ: Assembly Elections 2023: ಇಂದು ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ

ಐದು ರಾಜ್ಯಗಳಲ್ಲಿ ಮುಂಬರುವ ಚುನಾವಣೆಗಳ ಬಗ್ಗೆ ವಿವರಗಳನ್ನು ನೀಡುತ್ತಿರುವ ಚುನಾವಣಾ ಆಯೋಗವು ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂನಲ್ಲಿ 1.77 ಲಕ್ಷ ಮತಗಟ್ಟೆಗಳನ್ನು ಹೊಂದಿರಲಿದೆ ಎಂದು ಹೈಲೈಟ್ ಮಾಡಿದೆ, ಈ ಪೈಕಿ 8,192 ಮಹಿಳೆಯರೇ ನಿರ್ವಹಿಸಲಿದ್ದಾರೆ.

 

ಯಾವ ರಾಜ್ಯಗಳಲ್ಲಿ ಎಂದು ಚುನಾವಣೆ?

ಮಧ್ಯಪ್ರದೇಶ-ನವೆಂಬರ್ 17
ರಾಜಸ್ಥಾನ – ನವೆಂಬರ್ 23
ತೆಲಂಗಾಣ -ನವೆಂಬರ್ 30
ಛತ್ತೀಸ್‌ಗಢ – ನವೆಂಬರ್ 7,  ನವೆಂಬರ್ 17
ಮಿಜೋರಾಂ -ನವೆಂಬರ್ 7

ಫಲಿತಾಂಶ-ಡಿಸೆಂಬರ್ 3

 

ಈ ಬಾರಿ ಯಾವ ರಾಜ್ಯದಲ್ಲಿ ಎಷ್ಟು ಮತದಾರರಿದ್ದಾರೆ?
ಮಧ್ಯಪ್ರದೇಶ 5.6 ಕೋಟಿ
ರಾಜಸ್ಥಾನ 5.25 ಕೋಟಿ
ತೆಲಂಗಾಣ 3.17 ಕೋಟಿ
ಛತ್ತೀಸ್‌ಗಢ 2.03 ಕೋಟಿ
ಮಿಜೋರಾಂ 8.52 ಲಕ್ಷ

ದಿವ್ಯಾಂಗರಿಗೆ ಮನೆಯಲ್ಲೇ ಮತದಾನದ ಸೌಲಭ್ಯ ದೊರೆಯಲಿದೆ
ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ಮುಂಬರುವ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ದಿವ್ಯಾಂಗರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ ದಿವ್ಯಾಂಗ ಮತದಾರರು ಒಟ್ಟು 17.34 ಲಕ್ಷ ಇದ್ದಾರೆ ಎಂದು ಹೇಳಿದ್ದಾರೆ.

ಯಾವ ರಾಜ್ಯಗಳಲ್ಲಿ ಎಷ್ಟು ಮತಗಟ್ಟೆಗಳಿವೆ?
ಮಧ್ಯಪ್ರದೇಶ-64,523
ರಾಜಸ್ಥಾನ-51,756
ಛತ್ತೀಸ್‌ಗಢ-24,109
ತೆಲಂಗಾಣ-35,356
ಮಿಜೋರಾಂ-1,276

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:32 pm, Mon, 9 October 23