Video: ವರ್ಚ್ಯುವಲ್​ ಸಭೆಗೂ ಮುನ್ನ ಭಾರತಕ್ಕೆ 29 ಪ್ರಾಚೀನ ಶಿಲ್ಪಗಳು, ವರ್ಣಚಿತ್ರಗಳನ್ನು ಹಿಂದಿರುಗಿಸಿದ ಆಸ್ಟ್ರೇಲಿಯಾ; ಪ್ರಧಾನಿ ಮೋದಿಯಿಂದ ಪರಿಶೀಲನೆ

| Updated By: Lakshmi Hegde

Updated on: Mar 21, 2022 | 1:05 PM

ಭಾರತದಿಂದ ಕಳವಾದ ಹಲವು ಪ್ರಾಚೀನ ವಿಗ್ರಹಗಳನ್ನು ಈಗಾಗಲೇ ಭಾರತಕ್ಕೆ ವಾಪಸ್​ ತರಲಾಗಿದೆ. ಅದರಲ್ಲೂ ಆಸ್ಟ್ರೇಲಿಯಾದಿಂದಲೇ ಹೆಚ್ಚು ಶಿಲ್ಪಗಳು, ವರ್ಣಚಿತ್ರಗಳು ಮರಳಿಸಲ್ಪಟ್ಟಿವೆ.

Video: ವರ್ಚ್ಯುವಲ್​ ಸಭೆಗೂ ಮುನ್ನ ಭಾರತಕ್ಕೆ 29 ಪ್ರಾಚೀನ ಶಿಲ್ಪಗಳು, ವರ್ಣಚಿತ್ರಗಳನ್ನು ಹಿಂದಿರುಗಿಸಿದ ಆಸ್ಟ್ರೇಲಿಯಾ; ಪ್ರಧಾನಿ ಮೋದಿಯಿಂದ ಪರಿಶೀಲನೆ
ಪ್ರಾಚೀನ ವಿಗ್ರಹಗಳನ್ನು ಪರಿಶೀಲನೆ ನಡೆಸಿದ ಪ್ರಧಾನಿ ಮೋದಿ
Follow us on

ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್​ ನಡುವೆ ವರ್ಚ್ಯುವಲ್​ ಶೃಂಗಸಭೆ ಆಯೋಜನೆ ಗೊಂಡಿದೆ. ಈ ಸಭೆಗೂ ಪೂರ್ವ ಆಸ್ಟ್ರೇಲಿಯಾದಿಂದ ಭಾರತಕ್ಕೆ ಸುಮಾರು 29 ಪುರಾತನ ವಸ್ತುಗಳನ್ನು ಹಿಂದಿರುಗಿಸಲಾಗಿದೆ. ಇವೆಲ್ಲ ಹಲವು ವರ್ಷಗಳ ಹಿಂದೆ ಭಾರತದಿಂದ ಕದ್ದು ಆಸ್ಟ್ರೇಲಿಯಾಕ್ಕೆ ಸಾಗಿಸಲ್ಪಟ್ಟಿದ್ದವು. ಇದರಲ್ಲಿ ಶಿವ, ಪೂಜನೀಯ ಶಕ್ತಿ, ಭಗವಾನ್ ವಿಷ್ಣು ಮತ್ತು ಅವನ ಅವತಾರಗಳು, ಜೈನ ಸಂಪ್ರದಾಯಕ್ಕೆ ಸಂಬಂಧಿತ ಮೂರ್ತಿಗಳು, ವಿವಿಧ ದೇವರ ಭಾವಚಿತ್ರಗಳು, ಭಾರತೀಯ ಸಂಸ್ಕೃತಿಯ ಅಲಂಕಾರಿಕ ವಸ್ತುಗಳು ಸೇರಿಕೊಂಡಿವೆ. ರಾಜಸ್ಥಾನ, ಗುಜರಾತ್​, ಮಧ್ಯಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಮೂಲದ ವರ್ಣಚಿತ್ರಗಳು, ಕಲಾಕೃತಿಗಳು, ಶಿಲ್ಪಗಳು  ಇದ್ದರಲ್ಲಿದ್ದು, ಬಹುತೇಕ 9-10ನೇ ಶತಮಾನಕ್ಕೆ ಸೇರಿದವು ಎಂದು ಹೇಳಲಾಗಿದೆ.

ಹೀಗೆ ಆಸ್ಟ್ರೇಲಿಯಾದಿಂದ ವಾಪಸ್​ ಬಂದ ಭಾರತ ಮೂಲದ ಪ್ರಾಚೀನ ಶಿಲ್ಪಗಳು, ವರ್ಣಚಿತ್ರಗಳು, ಕಲಾಕೃತಿಗಳನ್ನೆಲ್ಲ ಇಂದು ಪ್ರಧಾನಿ ಮೋದಿಯವರು ಪರಿಶೀಲನೆ ನಡೆಸಿದ್ದಾರೆ. ಈ ಫೋಟೊವನ್ನು ಕೇಂದ್ರ  ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಶೇರ್​ ಮಾಡಿಕೊಂಡಿದೆ. ಭಾರತದಿಂದ ಕಳವಾದ ಹಲವು ಪ್ರಾಚೀನ ವಿಗ್ರಹಗಳನ್ನು ಈಗಾಗಲೇ ಭಾರತಕ್ಕೆ ವಾಪಸ್​ ತರಲಾಗಿದೆ. ಅದರಲ್ಲೂ ಆಸ್ಟ್ರೇಲಿಯಾದಿಂದಲೇ ಹೆಚ್ಚು ಶಿಲ್ಪಗಳು, ವರ್ಣಚಿತ್ರಗಳು ಮರಳಿಸಲ್ಪಟ್ಟಿವೆ. ಇಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್​ ಮತ್ತು ಪ್ರಧಾನಿ ಮೋದಿ ವರ್ಚ್ಯುವಲ್​ ಆಗಿ ಶೃಂಗಸಭೆ ನಡೆಸಲಿದ್ದು, ಈ ವೇಳೆ ಭಾರತದಲ್ಲಿ ಸುಮಾರು 1500 ಕೋಟಿ ರೂಪಾಯಿ ಮೌಲ್ಯದ ಹೂಡಿಕೆಯನ್ನು ಆಸ್ಟ್ರೇಲಿಯಾ ಪ್ರಕಟಿಸಲಿದೆ ಎನ್ನಲಾಗಿದೆ.

 

ಇದನ್ನೂ ಓದಿ: Smartphone Tips: ಎಚ್ಚರ: ಹಳೆಯ ಸ್ಮಾರ್ಟ್​ಫೋನ್ ಮಾರುವ ಮುನ್ನ ತಪ್ಪದೆ ಈ ಕೆಲಸ ಮಾಡಿ

Published On - 1:04 pm, Mon, 21 March 22