‘ಭಾರತಕ್ಕಾಗಿ ನನ್ನ ಹೃದಯ ಮಿಡಿಯುತ್ತಿದೆ’ , ಕೊವಿಡ್ ಪರಿಸ್ಥಿತಿ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಭಾವುಕ ಬರಹ

Matthew Hayden: ನಾನು ಒಂದು ದಶಕದಿಂದ ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ ಮತ್ತು ದೇಶಾದ್ಯಂತ ಪ್ರವಾಸ ಮಾಡಿದ್ದೇನೆ. ವಿಶೇಷವಾಗಿ ತಮಿಳುನಾಡು ನನ್ನ ಆಧ್ಯಾತ್ಮಿಕ ನೆಲೆ ಎಂದು ನಾನು ಪರಿಗಣಿಸುತ್ತೇನೆ. ಅಂತಹ ವೈವಿಧ್ಯಮಯ ಮತ್ತು ವಿಶಾಲವಾದ ದೇಶವನ್ನು ನಡೆಸುವ ಕಾರ್ಯವನ್ನು ವಹಿಸಿಕೊಂಡಿರುವ ನಾಯಕರು ಮತ್ತು ಸಾರ್ವಜನಿಕ ಅಧಿಕಾರಿಗಳ ಬಗ್ಗೆ ನನಗೆ ಯಾವಾಗಲೂ ಹೆಚ್ಚಿನ ಗೌರವವಿದೆ.

‘ಭಾರತಕ್ಕಾಗಿ ನನ್ನ ಹೃದಯ ಮಿಡಿಯುತ್ತಿದೆ’ , ಕೊವಿಡ್ ಪರಿಸ್ಥಿತಿ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಭಾವುಕ ಬರಹ
ಮ್ಯಾಥ್ಯೂ ಹೇಡನ್
Follow us
ರಶ್ಮಿ ಕಲ್ಲಕಟ್ಟ
|

Updated on:May 19, 2021 | 5:41 PM

ದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕದ ಎರಡನೇ ಅಲೆಯಿಂದ ಭಾರತ ತೀವ್ರ ಸಂಕಷ್ಟದಲ್ಲಿದೆ. ಇದರ ಪರಿಣಾಮವಾಗಿ, ದೇಶವು ದಿನಕ್ಕೆ ಸರಾಸರಿ 3ಲಕ್ಷಕ್ಕಿಂತ ಹೆಚ್ಚಿನ ಕೊವಿಡ್ ಪ್ರಕರಣಗಳು ವರದಿಯಾಗುತ್ತಿದೆ. ಹೀಗಾಗಿ ಶಾರೀರಿಕ ಅಂತರ ಕಾಪಾಡುವುದು,ಮಾಸ್ಕ್ ಧರಿಸುವುದು ಮತ್ತು ಕೊವಿಡ್ ಲಸಿಕೆ ಪಡೆಯುವುದು ಭಾರತದ ನಾಗರಿಕರಿಗೆ ಈ ಸಮಯದ ಅಗತ್ಯವಾಗಿ ಉಳಿದಿದೆ. ಈ ಎಲ್ಲದರ ಮಧ್ಯೆ, ಐಪಿಎಲ್ 2021 ನಡೆಯತ್ತಿದ್ದಾಗ ವಿವಿಧ ಪ್ರಾಂಚೈಸಿಗಳು ಬಯೋ ಬಬಲ್ ನಿಯಮ ಉಲ್ಲಂಘಿಸಿದ್ದರಿಂದ ಐಪಿಎಲ್​ನ್ನು  ಮೇ 4 ರಂದು ರದ್ದುಗೊಳಿಸಲಾಯಿತು. ಟಿಮ್ ಸೀಫರ್ಟ್ ಅವರನ್ನು ಹೊರತುಪಡಿಸಿ ಕಾಮೆಂಟೇಟರ್ಸ್ ಮತ್ತು ಮಾಜಿ ಆಟಗಾರರು ಸೇರಿದಂತೆ ಎಲ್ಲಾ ವಿದೇಶಿ ಕ್ರಿಕೆಟಿಗರು ಭಾರತವನ್ನು ತೊರೆದಿದ್ದರೂ ಭಾರತದ ಪರವಾಗಿ ಅವರು ಯೋಚಿಸುತ್ತಿದ್ದಾರೆ.

ಪ್ರಸ್ತುತ ಭಾರತವು ಅನುಭವಿಸುತ್ತಿರುವ ಈ ಸವಾಲಿನ ಸಮಯದಲ್ಲಿ ಆಸ್ಚ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಕೂಡ ತಮ್ಮ ಬ್ಲಾಗ್‌ನಲ್ಲಿ ಭಾರತದ ಬಗ್ಗೆ ಭಾವುಕವಾಗಿ ಬರೆದಿದ್ದಾರೆ.

ಹೇಡನ್ ಬರಹದ ಆಯ್ದ ಭಾಗ ಇಲ್ಲಿದೆ. ಹಿಂದೆಂದೂ ನೋಡಿರದಂತೆ ಭಾರತವು ಸಾಂಕ್ರಾಮಿಕ ಎರಡನೇ ಅಲೆಯ ಹೊಡೆತದ ಮಧ್ಯದಲ್ಲಿದೆ. 140 ಕೋಟಿ ಜನರಿರುವ ಈ ದೇಶ ವೈರಸ್ ಸೋಂಕು ವಿರುದ್ಧ ಹೋರಾಡುತ್ತಿರುವಾಗ, ವಿಶ್ವ ಮಾಧ್ಯಮಗಳು ದೇಶದ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸಿಲ್ಲ. ಅಲ್ಲಿ ಯಾವುದೇ ಸಾರ್ವಜನಿಕ ಯೋಜನೆಯ ಅನುಷ್ಠಾನ ಮತ್ತು ಅದರ ಯಶಸ್ಸು ದೊಡ್ಡ ಸವಾಲಾಗಿರುತ್ತದೆ.

ನಾನು ಒಂದು ದಶಕದಿಂದ ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ ಮತ್ತು ದೇಶಾದ್ಯಂತ ಪ್ರವಾಸ ಮಾಡಿದ್ದೇನೆ. ವಿಶೇಷವಾಗಿ ತಮಿಳುನಾಡು ನನ್ನ ಆಧ್ಯಾತ್ಮಿಕ ನೆಲೆ ಎಂದು ನಾನು ಪರಿಗಣಿಸುತ್ತೇನೆ. ಅಂತಹ ವೈವಿಧ್ಯಮಯ ಮತ್ತು ವಿಶಾಲವಾದ ದೇಶವನ್ನು ನಡೆಸುವ ಕಾರ್ಯವನ್ನು ವಹಿಸಿಕೊಂಡಿರುವ ನಾಯಕರು ಮತ್ತು ಸಾರ್ವಜನಿಕ ಅಧಿಕಾರಿಗಳ ಬಗ್ಗೆ ನನಗೆ ಯಾವಾಗಲೂ ಹೆಚ್ಚಿನ ಗೌರವವಿದೆ.

ನಾನು ಹೋದಲ್ಲೆಲ್ಲಾ ಜನರು ನನ್ನನ್ನು ಪ್ರೀತಿಯಿಂದ ಮತ್ತು ವಾತ್ಸಲ್ಯದಿದ ಸ್ವಾಗತಿಸಿದರು, ಅದಕ್ಕಾಗಿ ನಾನು ಅವರಿಗೆ ಆಭಾರಿ. ನಾನು ಹಲವಾರು ವರ್ಷಗಳಿಂದ ಭಾರತನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಆದ್ದರಿಂದಲೇ ಈ ಕ್ಷಣದಲ್ಲಿ ನೋವಿಗೆ ನನ್ನ ಹೃದಯ ಮಿಡಿಯುತ್ತಿದೆ. ಈ ಹೊತ್ತಲ್ಲಿ ಕೆಟ್ಟ ಮಾಧ್ಯಮಗಳು ಸಹ ಭಾರತದ ಜನರ ಮತ್ತು ಅವರ ಅಸಂಖ್ಯಾತ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿಲ್ಲ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವ್ಯಾಪ್ತಿಗೆ ಭಾರತಕ್ಕೆ ಬರಲು ಅವಕಾಶ ಮಾಡಿಕೊಟ್ಟ ಕ್ರಿಕೆಟಿಗ ಮತ್ತು ಕ್ರೀಡಾ ಪ್ರೇಮಿಯಾಗಿ ನಾನು ಕ್ರೀಡೆಯೊಂದಿಗಿನ ನನ್ನ ಒಡನಾಟವನ್ನು ಉಳಿಸಿಕೊಂಡಿದ್ದೇನೆ. ನನ್ನ ಸಹವರ್ತಿ ದೇಶವಾಸಿಗಳು ಅನೇಕ ವರ್ಷಗಳಿಂದ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರಪಂಚವು ಭಾರತದತ್ತ ಬಾಗಿಲು ಮುಚ್ಚುವ ಮತ್ತು ಸರ್ಕಾರವನ್ನು ದೂಷಿಸುತ್ತಿರುವಾಗ ಸಾವಿರಾರು ಮೈಲುಗಳಷ್ಟು ದೂರದಲ್ಲಿರುವವರಿಗೆ ಲಭ್ಯವಿಲ್ಲದ ದೃಷ್ಟಿಕೋನವನ್ನು ನೀಡುವುದಕ್ಕಾಗಿ ಭಾರತದಲ್ಲಿದ್ದಾಗ ನನ್ನ ಆಲೋಚನೆಗಳನ್ನು ಹಂಚಿಕೊಳ್ಳಲು ಯೋಚಿಸಿದೆ ಎಂದು ಹೇಡನ್ ಬರೆದಿದ್ದಾರೆ.

ಮಹೀಂದ್ರಾ ಸಮೂಹದ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರು ಭಾರತದ ಪರವಾಗಿ ಹೇಡನ್ ಅವರ ಭಾವನಾತ್ಮಕ ಪೋಸ್ಟ್ ಟ್ವೀಟ್ ಮಾಡಿದ್ದು ಕ್ರಿಕೆಟಿಗನ ಹೃದಯವು ಅವನ ದೇಹಕ್ಕಿಂತ ದೊಡ್ಡದಾಗಿದೆ. ಸಹಾನುಭೂತಿ ಮತ್ತು ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದು ಬರೆದಿದ್ದಾರೆ.

ಹೇಡನ್ ಅವರಿಗೆ ಭಾರತದ ಮೇಲಿನ ಪ್ರೀತಿಯ ಬಗ್ಗೆ ಹೇಳುವುದಾದರೆ ಆಸ್ಟ್ರೇಲಿಯಾದ ಈ ಕ್ರಿಕೆಟಿಗ ತನ್ನ ಆಟದ ದಿನಗಳಿಂದ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಮೈದಾನದಲ್ಲಿ ಅವರ ರನ್ ​ಹಸಿವು ಮತ್ತು ಸ್ಪರ್ಧಾತ್ಮಕತೆಗಾಗಿ ಅವರು ಗೌರವಿಸಲ್ಪಡುತ್ತಿದ್ದರು. ಮೃದು ಸ್ವಭಾವದ ವ್ಯಕ್ತಿತ್ವ ಹೇಡನ್ ಅವರದ್ದು.

ಎಂ.ಎಸ್. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ಅವರೊಂದಿಗಿನ ಒಪ್ಪಂದದ ನಂತರ ಹೇಡನ್ ಅವರಿಗೆ ಭಾರತದ ಮೇಲಿನ ಪ್ರೀತಿ ಮತ್ತು ಗೌರವವು ಹೆಚ್ಚಾಯಿತು. ತಮಿಳುನಾಡು ಅವರ ಎರಡನೇ ಮನೆಯೂ ಆಯ್ತು. ಈಗ ಮುಂದೂಡಲ್ಪಟ್ಟ ಐಪಿಎಲ್ 14 ಆವೃತ್ತಿಯ ಹೊತ್ತಲ್ಲಿ 49 ವರ್ಷದ ಹೇಡನ್ ಸ್ಟಾರ್ ಸ್ಪೋರ್ಟ್ಸ್​​ನ ಡಗೌಟ್ ಶೋ ನಲ್ಲಿ ಸಕ್ರಿಯರಾಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ದುಡಿದ ಅಷ್ಟೂ ಹಣವನ್ನು ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ನೀಡುತ್ತಿದ್ದೇನೆ; ಲಕ್ಷ್ಮೀರತನ್ ಶುಕ್ಲಾ

(Australian cricketer Matthew Hayden penned down an emotional post for Covid 19 stricken India)

Published On - 11:05 am, Sun, 16 May 21