ವೈದ್ಯಕೀಯ ತುರ್ತು ಪರಿಸ್ಥಿತಿ ಇರುವವರಿಗೆ ಉಚಿತ ಸೇವೆ ನೀಡುತ್ತಿರುವ ಆಟೋ ಡ್ರೈವರ್
ರಾಂಚಿ ನಿವಾಸಿ ರವಿ ಅಗರ್ವಾಲ್ಎಂಬಾತ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಗೆ ಹೋಗಬೇಕಾದ ಜನರಿಂದ ಒಂದು ರೂಪಾಯಿ ಹಣವನ್ನು ಪಡೆಯದೆ ಉಚಿತವಾಗಿ ಆಸ್ಪತ್ರೆಯತ್ತ ಕರೆದೊಯ್ಯುತ್ತಾರೆ. ಜೊತೆಗೆ ರವಿ ಅಗರ್ವಾಲ್ ಆಟೋ ಹಿಂಬದಿಯಲ್ಲಿ ತುರ್ತು ಸೇವೆಯಲ್ಲಿ ಉಚಿತ ಸೇವೆ ಎಂಬ ಪೋಸ್ಟ್ ಅಂಟಿಸಿ ತಮ್ಮ ಮೊಬೈಲ್ ಸಂಖ್ಯೆಯನ್ನು ಅಂಟಿಸಿದ್ದಾರೆ.
ಜಾರ್ಖಂಡ್: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಸೇರಿದಂತೆ ವೀಕೆಂಡ್ ಕರ್ಫ್ಯೂನ ಜಾರಿಗೊಳಿಸಲಾಗಿದೆ. ಈ ನಡುವೆ ಜಾರ್ಖಂಡ್ನ ರಾಂಚಿಯಲ್ಲಿ ಆಟೋ ಚಾಲಕರೊಬ್ಬರು ತನ್ನದೇ ಆದ ವಿಶಿಷ್ಟ ಸಹಾಯದಿಂದ ಎಲ್ಲರ ಗಮನ ಸೆಳೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ರಾಂಚಿ ನಿವಾಸಿ ರವಿ ಅಗರ್ವಾಲ್ಎಂಬಾತ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಗೆ ಹೋಗಬೇಕಾದ ಜನರಿಂದ ಒಂದು ರೂಪಾಯಿ ಹಣವನ್ನು ಪಡೆಯದೆ ಉಚಿತವಾಗಿ ಆಸ್ಪತ್ರೆಯತ್ತ ಕರೆದೊಯ್ಯುತ್ತಾರೆ. ಜೊತೆಗೆ ರವಿ ಅಗರ್ವಾಲ್ ಆಟೋ ಹಿಂಬದಿಯಲ್ಲಿ ತುರ್ತು ಸೇವೆಯಲ್ಲಿ ಉಚಿತ ಸೇವೆ ಎಂಬ ಪೋಸ್ಟ್ ಅಂಟಿಸಿ ತಮ್ಮ ಮೊಬೈಲ್ ಸಂಖ್ಯೆಯನ್ನು ಅಂಟಿಸಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಿಂಜರಿಯುವ ಆಟೋ ಚಾಲಕರ ಮಧ್ಯೆ ರವಿ ಅಗರ್ವಾಲ್ರವರ ಈ ಸೇವೆಗೆ ನಿಜಕ್ಕೂ ಮೆಚ್ಚುಗೆ ವ್ಯಕ್ತಪಡಿಸುವ ವಿಷಯ.
ಆಟೋ ಚಾಲಕ ರವಿ ಅಗರ್ವಾಲ್ ಏಪ್ರಿಲ್ 15ರಿಂದ ಈ ಉಚಿತ ಸೇವೆಯನ್ನು ಮಾಡುತ್ತಿದ್ದಾರೆ. ಇಲ್ಲಿವರೆಗೆ ಸುಮಾರು 16 ಜನರಿಗೆ ಈ ಸೇವೆಯನ್ನು ನೀಡಿದ್ದೇನೆ ಎಂದು ಮಾತನಾಡಿದ ರವಿ ಅಗರ್ವಾಲ್ , ಮಹಿಳೆಯೊಬ್ಬರು ರಿಮ್ಸ್ (ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ಗೆ ಹೋಗಬೇಕಿತ್ತು. ಆದರೆ ಯಾರೊಬ್ಬ ಆಟೋ ಡ್ರೈವರ್ ಆಕೆಯನ್ನು ಕರೆದುಕೊಂಡು ಹೋಗಲು ಒಪ್ಪಲಿಲ್ಲ. ನೀವು ಕೇಳುವಷ್ಟು ಹಣವನ್ನು ನೀಡುತ್ತೇನೆ ಎಂದು ಮಹಿಳೆ ಆಟೋ ಡ್ರೈವರ್ಗಳಿಗೆ ಹೇಳಿದರೂ ಯಾರು ಸಿದ್ಧರಾಗಿರಲಿಲ್ಲ. ಆ ಮಹಿಳೆ ಕೊರೊನಾ ಸೋಂಕಿತಳಾ ಎಂದು ನನಗೆ ತಿಳಿದಿಲ್ಲ. ಆದರೆ ಆಕೆ ಹೋಗಬೇಕಾದ ಕಡೆ ಉಚಿತವಾಗಿ ಕರೆದುಕೊಂಡು ಹೋಗಿದ್ದೇನೆ ಎಂದು ತಿಳಿಸಿದರು.
Jharkhand: An auto driver in Ranchi offers free ride to people who need to go to hospitals, amid #COVID19 pandemic. Ravi, the driver says, “Doing this since 15th April when I dopped a woman at RIMS after everyone else refused. My number’s on social media so people can contact me” pic.twitter.com/HkL49rzUni
— ANI (@ANI) April 23, 2021
ಅಲ್ಲದೇ ನನ್ನ ಪೋನ್ ನಂಬರ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ. ಉಚಿತವಾಗಿ ಸೇವೆ ಮಾಡಲು ಸಿದ್ದನಾಗಿದ್ದೇನೆ. ಆಸ್ಪತ್ರೆಗೆ ಹೋಗಬೇಕಾದವರಿಗೆ ಆಟೋ ಅಗತ್ಯವಿದ್ದರೆ ನನ್ನನ್ನು ಸುಲಭವಾಗಿ ಸಂಪರ್ಕಿಸಬಹುದೆಂದು ಹೇಳಿದ್ದಾರೆ.
ಇದನ್ನೂ ಓದಿ
ಗರ್ಭಾವಸ್ಥೆಯಲ್ಲೂ ರಸ್ತೆಗಿಳಿದು ಕಾರ್ಯ ನಿರ್ವಹಿಸಿದ ಡಿಎಸ್ಪಿ ಶಿಲ್ಪಾ ಸಾಹುಗೆ ಎಲ್ಲೆಡೆ ಮೆಚ್ಚುಗೆ
(Auto driver is providing free service for those with medical emergencies at Ranchi)