ಅಯೋಧ್ಯೆ: ರಾಮಪಥ, ಭಕ್ತಿಪಥದಲ್ಲಿದ್ದ 50 ಲಕ್ಷ ರೂ. ಮೌಲ್ಯದ ಬೀದಿ ದೀಪಗಳ ಕಳವು

ಅಯೋಧ್ಯೆಯಲ್ಲಿ 50 ಲಕ್ಷ ರೂಪಾಯಿ ಮೌಲ್ಯದ ಬೀದಿ ದೀಪಗಳು ಕಳ್ಳತನವಾಗಿವೆ. ರಾಮ ಪಥದಲ್ಲಿ ಮರಗಳಿಗೆ ಅಳವಡಿಸಿದ್ದ 3,800 ಬಿದಿರಿನ ದೀಪಗಳು ಮತ್ತು ಭಕ್ತಿಪಥದಲ್ಲಿ ಅಳವಡಿಸಿದ್ದ 36 ಗೊಬೊ ಪ್ರಾಜೆಕ್ಟರ್​ ದೀಪಗಳು ನಾಪತ್ತೆಯಾಗಿವೆ.

ಅಯೋಧ್ಯೆ: ರಾಮಪಥ, ಭಕ್ತಿಪಥದಲ್ಲಿದ್ದ 50 ಲಕ್ಷ ರೂ. ಮೌಲ್ಯದ ಬೀದಿ ದೀಪಗಳ ಕಳವು
ದೀಪಗಳು

Updated on: Aug 14, 2024 | 8:58 AM

ಅಯೋಧ್ಯೆಯ ರಾಮಪಥ ಹಾಗೂ ಭಕ್ತಿಪಥದಲ್ಲಿದ್ದ 50 ಲಕ್ಷ ರೂ. ಮೌಲ್ಯದ ಬೀದಿ ದೀಪಗಳನ್ನು ಕಳವು ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. 3,800ಕ್ಕೂ ಅಧಿಕ ಬೀದಿ ದೀಪಗಳು ಹಾಗೂ 36 ಪ್ರೊಜೆಕ್ಟರ್​ ದೀಪಗಳನ್ನು ಕಳವು ಮಾಡಲಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ.

ಅಯೋಧ್ಯೆಯಲ್ಲಿ ಹೆಚ್ಚಿನ ಭದ್ರತಾ ಪ್ರದೇಶದಲ್ಲಿರುವ ಭಕ್ತಿ ಪಥ ಮತ್ತು ರಾಮ ಪಥ ಮೇಲೆ ದೀಪಗಳನ್ನು ಅಳವಡಿಸಲಾಗಿತ್ತು ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಆಗಸ್ಟ್ 9 ರಂದು ದೂರು ದಾಖಲಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ. ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ನೀಡಿದ ಗುತ್ತಿಗೆಯಡಿಯಲ್ಲಿ ದೀಪಗಳನ್ನು ಸ್ಥಾಪಿಸಿದ ಯಶ್ ಎಂಟರ್‌ಪ್ರೈಸಸ್ ಮತ್ತು ಕೃಷ್ಣ ಆಟೋಮೊಬೈಲ್ಸ್ ಸಂಸ್ಥೆಯ ಪ್ರತಿನಿಧಿಯಿಂದ ದೂರು ದಾಖಲಾಗಿದೆ.

ರಾಮಪಥದಲ್ಲಿ 6,400 ಬಿದಿರಿನ ದೀಪಗಳು ಮತ್ತು ಭಕ್ತಿ ಪಥದಲ್ಲಿ 96 ಪ್ರೊಜೆಕ್ಟರ್ ದೀಪಗಳನ್ನು ಅಳವಡಿಸಲಾಗಿದೆ. ಮಾರ್ಚ್ 19 ರವರೆಗೆ ಎಲ್ಲಾ ದೀಪಗಳು ಇದ್ದವು ಆದರೆ ಮೇ 9 ರಂದು ಪರಿಶೀಲನೆಯ ನಂತರ ಕೆಲವು ದೀಪಗಳು ಕಾಣೆಯಾಗಿರುವುದು ಕಂಡುಬಂದಿದೆ. ಇದುವರೆಗೆ ಸುಮಾರು 3,800 ದೀಪಗಳು ಬಿದಿರಿನ ದೀಪಗಳು ಮತ್ತು 36 ಪ್ರೊಜೆಕ್ಟರ್ ದೀಪಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಶೇಖರ್ ಶರ್ಮಾ ದೂರಿನಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಅಯೋಧ್ಯೆ ರಾಮ ಮಂದಿರದ ಅರ್ಚಕರಿಗೆ ಹೊಸ ಡ್ರೆಸ್​ ಕೋಡ್​, ಮೊಬೈಲ್​ ಬಳಕೆ ನಿಷೇಧ

ಎಫ್‌ಐಆರ್ ಪ್ರಕಾರ, ಸಂಸ್ಥೆಯು ಮೇ ತಿಂಗಳಲ್ಲಿ ಕಳ್ಳತನದ ಬಗ್ಗೆ ತಿಳಿದಿತ್ತು ಆದರೆ ಆಗಸ್ಟ್ 9 ರಂದು ದೂರು ದಾಖಲಿಸಿದೆ.
ಈ ಸಂಬಂಧ ಎಫ್‌ಐಆರ್‌ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 22 ರಂದು ಪವಿತ್ರ ನಗರದಲ್ಲಿ ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭದ ಮೊದಲು ಅಯೋಧ್ಯೆಯನ್ನು ಪ್ರಮುಖ ಯೋಜನೆಯಡಿ ನವೀಕರಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ