ವೀರ್ಯ ಅಥವಾ ಅಂಡಾಣು ದಾನಿಗೆ ಮಗುವಿನ ಮೇಲೆ ಯಾವುದೇ ಕಾನೂನಾತ್ಮಕ ಹಕ್ಕಿಲ್ಲ: ಬಾಂಬೆ ಹೈಕೋರ್ಟ್
ಜನಿಸಿದ ಮಗುವಿನ ಮೇಲೆ ವೀರ್ಯ ಅಥವಾ ಅಂಡಾಣು ದಾನಿಗೆ ಕಾನೂನಾತ್ಮಕ ಹಕ್ಕಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಹಾಗೆಯೇ ಮಗುವಿನ ಜೈವಿಕ ತಂದೆ ಅಥವಾ ತಾಯಿ ಎಂಬ ದಾವೆಯನ್ನು ಮಂಡಿಸಲು ಸಾಧ್ಯವಿಲ್ಲವೆಂದು ಕೋರ್ಟ್ ಹೇಳಿದೆ. ಬಾಡಿಗೆ ತಾಯ್ತನದ ಮೂಲಕ ಜನಿಸಿದ ತನ್ನ ಇಬ್ಬರು ಪುತ್ರಿಯರಿಂದ ತನ್ನ ದೂರವಿರಿಸಲಾಗಿದೆ ಎಂದು ಮಹಿಳೆಯೊಬ್ಬಳು ಕೋರ್ಟ್ಗೆ ಮೊರೆ ಹೋಗಿದ್ದರು.
ವೀರ್ಯ ಅಥವಾ ಅಂಡಾಣು ದಾನಿಗಳು ಮಗುವಿನ ಮೇಲೆ ಯಾವುದೇ ಕಾನೂನಾತ್ಮಕ ಹಕ್ಕುಗಳನ್ನು ಹೊಂದಿರುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ. ವೀರ್ಯ ಅಥವಾ ಅಂಡಾಣು ದಾನಿಯು ಮಗುವಿನ ಮೇಲೆ ಯಾವುದೇ ಹಕ್ಕುಗಳನ್ನು ಹೊಂದಿರುವುದಿಲ್ಲ, ಜೈವಿಕ ಪೋಷಕ ಎಂದು ಹೇಳಿಕೊಳ್ಳುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. 42 ವರ್ಷದ ಮಹಿಳೆಗೆ ತನ್ನ 5 ವರ್ಷದ ಅವಳಿ ಹೆಣ್ಣುಮಕ್ಕಳನ್ನು ಭೇಟಿಯಾಗಲು ಹೈಕೋರ್ಟ್ ಅನುಮತಿ ನೀಡಿದೆ.
ಬಾಡಿಗೆ ತಾಯ್ತನದ ಮೂಲಕ ಜನಿಸಿದ ತನ್ನ ಹೆಣ್ಣುಮಕ್ಕಳು ತನ್ನ ಪತಿ ಹಾಗೂ ಅಂಡಾಣು ದಾನ ಮಾಡಿದ ತನ್ನ ತಂಗಿಯೊಂದಿಗೆ ಇದ್ದಾರೆ ಎಂದು ಮಹಿಳೆ ಅರ್ಜಿಯಲ್ಲಿ ತಿಳಿಸಿದ್ದಾರೆ. ಅರ್ಜಿದಾರರ ಪತಿ ತನ್ನ ಅತ್ತಿಗೆ ಅಂಡಾಣು ದಾನ ಮಾಡಿರುವುದರಿಂದ ಅವಳಿಗಳ ಜೈವಕ ತಾಯಿ ಎಂದು ಕಾನೂನಾತ್ಮಕವಾಗಿ ಕರೆಯುವ ಹಕ್ಕಿದೆ, ತನ್ನ ಪತ್ನಿಗೆ ಆ ಹಕ್ಕಿಲ್ಲ ಎಂದು ಪ್ರತಿಪಾದಿಸಿದ್ದರು.
ಆದರೆ ನ್ಯಾಯಮೂರ್ತಿ ಮಿಲಿಂದ್ ಜಾಧವ್ ಅವರಿದ್ದ ಏಕಪೀಠ ಪತಿಯ ಮನವಿಯನ್ನು ತಿರಸ್ಕರಿಸಿತು. ಅರ್ಜಿದಾರರ ಕಿರಿಯ ಸಹೋದರಿ ಅಂಡಾಣು ದಾನಿಯಾಗಿದ್ದಾಳೆ ಆದರೆ ಅವಳಿಗೆ ಜೈವಿಕ ತಾಯಿ ಎಂದು ಹೇಳಲು ಕಾನೂನುಬದ್ಧ ಹಕ್ಕಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮತ್ತಷ್ಟು ಓದಿ: Men Health: ಪುರುಷರಲ್ಲಿ ಲೈಂಗಿಕ ಅಸಮರ್ಥತೆಗೆ ಕಾರಣವೇನು? ವೀರ್ಯದ ಸಂಖ್ಯೆ ಹೆಚ್ಚಿಸಲು ಏನು ತಿನ್ನಬಹುದು?
ನಿಯಮಗಳ ಪ್ರಕಾರ, ದಾನಿ ಅಥವಾ ಬಾಡಿಗೆ ತಾಯಿ ಎಲ್ಲಾ ಪೋಷಕರ ಹಕ್ಕುಗಳನ್ನು ಬಿಟ್ಟುಕೊಡಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ ಪ್ರಸ್ತುತ ಪ್ರಕರಣದಲ್ಲಿ ಅವಳಿ ಹೆಣ್ಣುಮಕ್ಕಳು ಅರ್ಜಿದಾರರ ಮತ್ತು ಅವರ ಪತಿಗೆ ಮಕ್ಕಳಾಗಿರುತ್ತಾರೆ. ದಂಪತಿ ಸಾಮಾನ್ಯ ವಿಧಾನದ ಮೂಲಕ ಗರ್ಭಿಣಿಯಾಗಲು ಸಾಧ್ಯವಿಲ್ಲ, ಅರ್ಜಿದಾರರ ಸಹೋದರಿ ಅಂಡಾಣು ದಾನ ಮಾಡಲು ಸ್ವಯಂ ಪ್ರೇರಿತವಾಗಿ ಮುಂದೆಬಂದಿದ್ದರು.
2019ರಲ್ಲಿ ಅವರಿಗೆ ಅವಳಿ ಮಕ್ಕಳು ಜನಿಸಿದರು. 2021ರವರೆಗೆ ಅವರು ಒಟ್ಟಿಗೆ ಇದ್ದರು, ಸಾಕಷ್ಟು ಭಿನ್ನಾಭಿಪ್ರಾಯಗಳು ಮೂಡಿದ್ದವು ಆಗ ವ್ಯಕ್ತಿ ತನ್ನ ಮಕ್ಕಳನ್ನು ಕರೆದುಕೊಂಡು ಬೇರೆ ಮನೆಯಲ್ಲಿ ವಾಸಿಸಲು ಶುರು ಮಾಡಿದ್ದ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ