AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆಯ ಶ್ರೀರಾಮನ ವಿಗ್ರಹಕ್ಕೆ ರೇಷ್ಮೆ, ಉಣ್ಣೆ ವಸ್ತ್ರ ಸಿದ್ಧಪಡಿಸುತ್ತಿರುವ ಆಗ್ರಾ ಮಹಿಳೆ

ಅಯೋಧ್ಯೆ(Ayodhya)ಯ ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಇಡೀ ದೇಶವೇ ಸಜ್ಜುಗೊಂಡಿದೆ. ಆಗ್ರಾದ ಮಹಿಳೆಯೊಬ್ಬರು ಶ್ರೀರಾಮನ ವಿಗ್ರಹಕ್ಕೆ ರೇಷ್ಮೆಯ ವಸ್ತ್ರವನ್ನು ಸಿದ್ಧಪಡಿಸುತ್ತಿದ್ದಾರೆ. ಅಯೋಧ್ಯೆಯಲ್ಲಿ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ರಾಮಮಂದಿರವನ್ನು ಉದ್ಘಾಟಿಸಲಿದ್ದಾರೆ. ಆಗ್ರಾದ ದಯಾಲ್‌ಬಾಗ್ ಪ್ರದೇಶದ ನಿವಾಸಿ ಏಕ್ತಾ ಅವರು ಪ್ರಾಣ ಪ್ರತಿಷ್ಠಾ ಅಥವಾ ರಾಮ ಮಂದಿರದ ಪ್ರತಿಷ್ಠಾಪನೆಯ ದಿನಾಂಕ ಘೋಷಿಸಿದ ದಿನದಿಂದಲೇ ರಾಮ ಲಲ್ಲಾನಿಗಾಗಿ ರೇಷ್ಮೆ ಮತ್ತು ಉಣ್ಣೆಯ ವಸ್ತ್ರಗಳನ್ನು ತಯಾರಿಸಲು ಆರಂಭಿಸಿದ್ದಾರೆ.

ಅಯೋಧ್ಯೆಯ ಶ್ರೀರಾಮನ ವಿಗ್ರಹಕ್ಕೆ ರೇಷ್ಮೆ, ಉಣ್ಣೆ ವಸ್ತ್ರ ಸಿದ್ಧಪಡಿಸುತ್ತಿರುವ ಆಗ್ರಾ ಮಹಿಳೆ
ಶ್ರೀರಾಮ ವಿಗ್ರಹImage Credit source: Timesnow
ನಯನಾ ರಾಜೀವ್
|

Updated on: Jan 01, 2024 | 10:37 AM

Share

ಅಯೋಧ್ಯೆ(Ayodhya)ಯ ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಇಡೀ ದೇಶವೇ ಸಜ್ಜುಗೊಂಡಿದೆ. ಆಗ್ರಾದ ಮಹಿಳೆಯೊಬ್ಬರು ಶ್ರೀರಾಮನ ವಿಗ್ರಹಕ್ಕೆ ರೇಷ್ಮೆಯ ವಸ್ತ್ರವನ್ನು ಸಿದ್ಧಪಡಿಸುತ್ತಿದ್ದಾರೆ. ಅಯೋಧ್ಯೆಯಲ್ಲಿ ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ(Narendra Modi) ರಾಮಮಂದಿರವನ್ನು ಉದ್ಘಾಟಿಸಲಿದ್ದಾರೆ. ಆಗ್ರಾದ ದಯಾಲ್‌ಬಾಗ್ ಪ್ರದೇಶದ ನಿವಾಸಿ ಏಕ್ತಾ ಅವರು ಪ್ರಾಣ ಪ್ರತಿಷ್ಠಾ ಅಥವಾ ರಾಮ ಮಂದಿರದ ಪ್ರತಿಷ್ಠಾಪನೆಯ ದಿನಾಂಕ ಘೋಷಿಸಿದ ದಿನದಿಂದಲೇ ರಾಮ ಲಲ್ಲಾನಿಗಾಗಿ ರೇಷ್ಮೆ ಮತ್ತು ಉಣ್ಣೆಯ ವಸ್ತ್ರಗಳನ್ನು ತಯಾರಿಸಲು ಆರಂಭಿಸಿದ್ದಾರೆ.

ಉದ್ಘಾಟನೆಯ ಸಮಯದಲ್ಲಿ ತಾನು ಸಿದ್ಧಪಡಿಸಿದ ವಸ್ತ್ರವನ್ನು ದೇವರಿಗೆ ಆಯ್ಕೆ ಮಾಡಲಾಗುವುದು ಎಂಬ ಭರವಸೆ ಇದೆ ಎಂದಿದ್ದಾರೆ. ರಾಮ ಲಲ್ಲಾ ವಿಗ್ರಹ ಗಾತ್ರದ ಬಗ್ಗೆ ಆರಂಭದಲ್ಲಿ ನನಗೆ ತಿಳಿದಿರಲಿಲ್ಲ, ಆದ್ದರಿಂದ ಅವರು ಎಲ್ಲಾ ಗಾತ್ರದ ಉಡುಪುಗಳನ್ನು ತಯಾರಿಸಲು ಆರಂಭಿಸಿದೆ ಎಂದು ಏಕ್ತಾ ಹೇಳಿದ್ದಾರೆ.

ಯಾರಾದರೂ ಅಯೋಧ್ಯೆಗೆ ಭೇಟಿ ನೀಡಿ ಬಂದರೆ ಅವರನ್ನು ಮೊದಲು ಭೇಟಿಯಾಗಿ ಪ್ರತಿಮೆಯ ಗಾತ್ರದ ಬಗ್ಗೆ ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸಿದ್ದರು.

ಮತ್ತಷ್ಟು ಓದಿ: ಅಯೋಧ್ಯೆ ರಾಮಮಂದಿರಕ್ಕೆ ಕಾಶಿ ಮತ್ತು ಪ್ರಯಾಗ್ ರಾಜ್ ಭಿಕ್ಷುಕರಿಂದ 4 ಲಕ್ಷ ದೇಣಿಗೆ

ಇಲ್ಲಿಯವರೆಗೆ, ಅವರು ದೇವರ ವಿಗ್ರಹಕ್ಕಾಗಿ ಸುಮಾರು 12 ರೇಷ್ಮೆ ಮತ್ತು ಉಣ್ಣೆಯ ವಸ್ತ್ರಗಳನ್ನು ಸಿದ್ಧಪಡಿಸಿದ್ದಾರೆ ಮತ್ತು ಈ ಉಡುಪುಗಳನ್ನು ಜನವರಿ 22 ರಂದು ದೇವಾಲಯದ ಟ್ರಸ್ಟ್‌ಗೆ ಉಡುಗೊರೆಯಾಗಿ ನೀಡಲು ಉದ್ದೇಶಿಸಿದ್ದಾರೆ.

ಪವಿತ್ರಾಭಿಷೇಕದಲ್ಲಿ ಪಾಲ್ಗೊಳ್ಳಲು ಅವರು ತಮ್ಮ ಕುಟುಂಬದೊಂದಿಗೆ ಉತ್ತರ ಪ್ರದೇಶದ ದೇವಾಲಯ ಪಟ್ಟಣಕ್ಕೆ ಭೇಟಿ ನೀಡಲು ಸಿದ್ಧರಾಗಿದ್ದಾರೆ. ಜನವರಿ 23ರಿಂದ ಭಕ್ತರಿಗೆ ದರ್ಶನ ಭಗವಾನ್ ರಾಮನ ವಿಗ್ರಹವು ಐದು-ಆರು ಅಡಿ ಎತ್ತರದಲ್ಲಿದೆ. ಜನವರಿ 17 ರಂದು ಮೆರವಣಿಗೆಯಲ್ಲಿ ಸರಯು ನದಿಗೆ ಕೊಂಡೊಯ್ಯಲಾಗುತ್ತದೆ.

ಮಹಾಮಸ್ತಕಾಭಿಷೇಕದ ನಂತರ ಮೂರ್ತಿಯನ್ನು ದೇವಸ್ಥಾನಕ್ಕೆ ತರಲಾಗುವುದು. ಜನವರಿ 18 ರಂದು ದೇವಸ್ಥಾನದ ಗರ್ಭಗುಡಿಯಲ್ಲಿ ಇಡಲಾಗುವುದು. ಇದೇ ದಿನದಿಂದ ಮುಂದಿನ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಜ.21ರಂದು ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆ ನಡೆಸಲಾಗುವುದು ಎಂದು ಧಾರ್ಮಿಕ ಮುಖಂಡರು ತಿಳಿಸಿದ್ದಾರೆ.

ಮುಂದಿನ 48 ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳು ಮುಂದುವರಿಯಲಿದ್ದು, ಈ ಸಂದರ್ಭದಲ್ಲಿ ಭಕ್ತರು ಅಯೋಧ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ