Ram Mandir VIP Entry: ರಾಮಮಂದಿರಕ್ಕೆ ಉಚಿತವಾಗಿ ವಿಐಪಿ ಪ್ರವೇಶ ನೀಡುವ ವಾಟ್ಸ್​ಆ್ಯಪ್ ಸಂದೇಶ ಎಷ್ಟು ಸತ್ಯ?

|

Updated on: Jan 12, 2024 | 10:34 AM

ಅಯೋಧ್ಯೆAyodhya)ಯ ರಾಮ ಮಂದಿರ(Ram Mandir)ದ ಹೆಸರಿನಲ್ಲಿ ಸೈಬರ್ ವಂಚಕರು(Cyber Criminals) ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದೆ. ಈ ಸಮಯದಲ್ಲಿ ಪ್ರತಿಯೊಬ್ಬರಿಗೂ ಪಾಲ್ಗೊಳ್ಳುವ ಆಸೆ ಇದ್ದೇ ಇರುತ್ತದೆ ಅದನ್ನು ಟಾರ್ಗೆಟ್​ ಮಾಡಿರುವ ಸೈಬರ್ ವಂಚಕರು ಸುಳ್ಳು ಸಂದೇಶಗಳನ್ನು ಕಳುಹಿಸಿ ದುಡ್ಡು ದೋಚುವ ಸಾಹಸಕ್ಕೆ ಕೈಹಾಕಿದ್ದಾರೆ.

Ram Mandir VIP Entry: ರಾಮಮಂದಿರಕ್ಕೆ ಉಚಿತವಾಗಿ ವಿಐಪಿ ಪ್ರವೇಶ ನೀಡುವ ವಾಟ್ಸ್​ಆ್ಯಪ್ ಸಂದೇಶ ಎಷ್ಟು ಸತ್ಯ?
ಅಯೋಧ್ಯೆ
Image Credit source: Timesnow
Follow us on

ಅಯೋಧ್ಯೆ(Ayodhya)ಯ ರಾಮ ಮಂದಿರ(Ram Mandir)ದ ಹೆಸರಿನಲ್ಲಿ ಸೈಬರ್ ವಂಚಕರು(Cyber Criminals) ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದೆ. ಈ ಸಮಯದಲ್ಲಿ ಪ್ರತಿಯೊಬ್ಬರಿಗೂ ಪಾಲ್ಗೊಳ್ಳುವ ಆಸೆ ಇದ್ದೇ ಇರುತ್ತದೆ ಅದನ್ನು ಟಾರ್ಗೆಟ್​ ಮಾಡಿರುವ ಸೈಬರ್ ವಂಚಕರು ಸುಳ್ಳು ಸಂದೇಶಗಳನ್ನು ಕಳುಹಿಸಿ ದುಡ್ಡು ದೋಚುವ ಸಾಹಸಕ್ಕೆ ಕೈಹಾಕಿದ್ದಾರೆ.

ವಾಟ್ಸ್​ಆ್ಯಪ್​ನಲ್ಲಿ ಸಂದೇಶವೊಂದು ಹರಿದಾಡುತ್ತಿದ್ದು, ಅದರಲ್ಲಿ ಅಯೋಧ್ಯೆಗೆ ಉಚಿತ ವಿಐಪಿ ಪ್ರವೇಶ ನೀಡುತ್ತೇವೆ ಎಂದು ಹುಸಿ ಭರವಸೆಯನ್ನು ನೀಡಲಾಗುತ್ತಿದೆ. Ram Janmabhoomi Grihspark Abhiyan.APK ಹೆಸರಿನ APK (Android ಅಪ್ಲಿಕೇಶನ್ ಪ್ಯಾಕೇಜ್) ಫೈಲ್ ಅನ್ನು ಒಳಗೊಂಡಿವೆ.

ದೇವಸ್ಥಾನಕ್ಕೆ ತೆರಳಲು ಉತ್ಸುಕರಾಗಿರುವ ಭಕ್ತರ ಭಾವನೆಗಳಿಗೆ ಧಕ್ಕೆ ತರವು ನಿಟ್ಟಿನಲ್ಲಿ ಇಂತಹ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಈ ಹಿಂದೆಯೂ ದೇವಸ್ಥಾನಕ್ಕೆ ದೇಣಿಗೆಯ ಹೆಸರಿನಲ್ಲಿ ಭಕ್ತರನ್ನು ಲೂಟಿ ಮಾಡುವ ದಂಧೆ ನಡೆದಿತ್ತು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಹೆಸರಿನಲ್ಲಿ ನಕಲಿ ಐಡಿ ಮಾಡಿ ವಂಚಿಸಲು ಯತ್ನಿಸುತ್ತಿರುವ ಸೈಬರ್ ಕ್ರಿಮಿನಲ್‌ಗಳಿಗೆ ಬಲಿಯಾಗಬೇಡಿ ಎಂದು ವಿಶ್ವ ಹಿಂದೂ ಪರಿಷತ್ತಿನ ವಿನೋದ್ ಬನ್ಸಾಲ್ ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ಓದಿ: ರಾಮಲಲ್ಲಾ ಪ್ರಾಣಪ್ರತಿಷ್ಠೆಗೂ ಮುನ್ನ 11 ದಿನಗಳ ವಿಶೇಷ ಆಚರಣೆ, ಮೋದಿ ವಿಡಿಯೋ ಸಂದೇಶ

Shri Ram Janmabhoomi Teerth Chhetra Ayodhya, Uttar Pradesh(ಶ್ರೀ ರಾಮ ಜನ್ಮಭೂಮಿ ತೀರ್ಥ, ಛೇತ್ರ ಅಯೋಧ್ಯೆ, ಉತ್ತರಪ್ರದೇಶ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪುಟವೊಂದನ್ನು ತೆರೆಯಲಾಗಿದೆ. ಕ್ಯೂ ಆರ್​ ಕೋಡ್ ಹೊಂದಿರುವ ಪುಟವು ರಾಮ ಮಂದಿರ ನಿರ್ಮಾಣ ಹೆಸರಿನಲ್ಲಿ ಹಣವನ್ನು ನೀಡುವಂತೆ ಬಳಕೆದಾರರನ್ನು ಕೇಳುತ್ತದೆ.

ಅನುಮಾನಾಸ್ಪದವಾಗಿ ತೋರುವ ಅಪರಿಚಿತ ಫೈಲ್​ಗಳು ಅಥವಾ ಅಪ್ಲಿಕೇಷನ್​ಗಳನ್ನು ಡೌನ್​ಲೋಡ್ ಮಾಡದಂತೆ ಸೂಚಿಸಲಾಗಿದೆ. ರಾಮ ಮಂದಿರ ಉದ್ಘಾಟನೆಗೆ ಸಂಬಂಧಿಸಿದ ಯಾವುದೇ ಸುದ್ದಿ ಬಂದಾಗ,ವಿಶ್ವಾಸಾರ್ಹ ಮೂಲದ ಮೂಲಕ ಪರಿಶೀಲಿಸುವುದು ಉತ್ತಮ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 10:33 am, Fri, 12 January 24