ಮಲಪ್ಪುರಂ ಫೆಬ್ರುವರಿ 05: ಅಯೋಧ್ಯೆಯಲ್ಲಿ (Ayodhya) ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದ ಎರಡು ದಿನಗಳ ನಂತರ ಜನವರಿ 24 ರಂದು ಮಲಪ್ಪುರಂನಲ್ಲಿ (malappuram) ಕೇರಳದ ಪ್ರಭಾವಿ ಪಾಣಕ್ಕಾಡ್ (Panakkad )ಕುಟುಂಬದ ಹಿರಿಯ ಸದಸ್ಯರಾದ ಸಾದಿಕ್ ಅಲಿ ಶಿಹಾಬ್ ತಂಙಳ್ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ್ದರು. ಈ ಭಾಷಣ ಇದೀಗ ವೈರಲ್ ಆಗಿದ್ದು ರಾಜಕೀಯ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ನ ಮಿತ್ರ ಪಕ್ಷವಾದ ಐಯುಎಂಎಲ್, ತಂಙಳ್ ಅವರ ಹೇಳಿಕೆಗಳು ಸಹಿಷ್ಣುತೆ ಮತ್ತು ಸಾಮರಸ್ಯದ ನಿಲುವನ್ನು ಪುನರುಚ್ಚರಿಸುತ್ತವೆ ಎಂದು ಹೇಳಿದರೆ, ಸಮುದಾಯದ ರಾಜಕೀಯ ಪ್ರತಿಸ್ಪರ್ಧಿಗಳು ಐಯುಎಂಎಲ್ ನಾಯಕ ಆರ್‌ಎಸ್‌ಎಸ್ ಭಾಷೆಯನ್ನೇ ಮಾತನಾಡುತ್ತಿದ್ದಾರೆ. ಈ ಹೇಳಿಕೆ ನೀಡಿದ ತಂಙಳ್ ಅವರ ವಿರುದ್ಧವೇ ಪಕ್ಷದ ಸಹಾನುಭೂತಿಗಳು ಬೀದಿಗಿಳಿಯುವ ಸಮಯ ಬರಲಿದೆ ಎಂದು ಹೇಳಿದರು.
ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಉಲ್ಲೇಖಿಸಿ ಮಾತನಾಡಿದ ತಂಙಳ್ , “ನಮ್ಮ ದೇಶದಲ್ಲಿ ಒಂದು ಪ್ರಮುಖ ಬೆಳವಣಿಗೆ ನಡೆದಿದೆ. ದೇಶದ ಬಹುಸಂಖ್ಯಾತ ಸಮುದಾಯ ಬಯಸಿದ್ದ ರಾಮ ಮಂದಿರ ಸಾಕಾರಗೊಂಡಿದೆ. ದೇಶ ಈಗ ಹಿಂದಕ್ಕೆ ಹೋಗಲು ಸಾಧ್ಯವಿಲ್ಲ. ಅದು ದೇಶದ ಬಹುಸಂಖ್ಯಾತ ಸಮುದಾಯದ ಅಗತ್ಯವಾಗಿತ್ತು. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಿದೆ ಎಂದು ಪ್ರತಿಭಟಿಸುವ ಅಗತ್ಯವಿಲ್ಲ. ಬಹುತ್ವ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಅವರವರ ನಂಬಿಕೆಯಂತೆ ಮುಂದುವರಿಯಲು ಸ್ವಾತಂತ್ರ್ಯವಿದೆ ಎಂದಿದ್ದರು.
ನ್ಯಾಯಾಲಯದ ತೀರ್ಪಿನ ನಂತರ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರ ಮತ್ತು ಬಾಬರಿ ಮಸೀದಿಯು ಜಾತ್ಯತೀತತೆಯ ಅತ್ಯುತ್ತಮ ಉದಾಹರಣೆಗಳಾಗಿವೆ. ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು. ಇವೆರಡೂ ಜಾತ್ಯತೀತತೆಯ ಅತ್ಯುತ್ತಮ ಸಂಕೇತಗಳಾಗಿವೆ. ಕರಸೇವಕರು ಮಸೀದಿಯನ್ನು ಧ್ವಂಸಗೊಳಿಸಿದ್ದರು ಮತ್ತು ನಾವು ಆ ದಿನಗಳಲ್ಲಿ ಅದರ ವಿರುದ್ಧ ಪ್ರತಿಭಟನೆ ನಡೆಸಿದ್ದೆವು ನಿಜ. ಆದರೆ ದೇಶದ ಮುಸ್ಲಿಮರು, ವಿಶೇಷವಾಗಿ ಮುಸ್ಲಿಂ ಸಮುದಾಯವು ಅತ್ಯಂತ ಸೂಕ್ಷ್ಮ ಮತ್ತು ಸಕ್ರಿಯವಾಗಿರುವ ಕೇರಳದಲ್ಲಿ ಆ ಪರಿಸ್ಥಿತಿಯನ್ನು ಸಹಿಷ್ಣುತೆಯಿಂದ ಎದುರಿಸಬಹುದು ಎಂದು ಅವರು ಹೇಳಿದರು.
ಮಸೀದಿಯನ್ನು ಕೆಡವಿದಾಗ ಕೇರಳದ ಮುಸ್ಲಿಮರು ದೇಶಕ್ಕೆ ಮಾದರಿ ಆಗಿತ್ತು. ನಂತರ, ಇಡೀ ದೇಶ ಮತ್ತು ಅದರ ರಾಜಕೀಯ ನಾಯಕತ್ವವು ದಕ್ಷಿಣದ ಕೇರಳದತ್ತ ನೋಡಿತು. ಕೇರಳದಲ್ಲಿ ಶಾಂತಿ ನೆಲೆಸಿದೆಯೇ ಎಂದು ತಿಳಿಯಲು ಅವರು ಉತ್ಸುಕರಾಗಿದ್ದರು. ನಾವು ಪ್ರಚೋದನೆಗಳು ಮತ್ತು ಪ್ರಲೋಭನೆಗಳಿಗೆ ಎಂದಿಗೂ ಬೀಳುವುದಿಲ್ಲ ಎಂದು ಅವರು ಹೇಳಿದರು.
1992 ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡಾಗ, ಐಯುಎಂಎಲ್ ಅನ್ನು ಸಾದಿಕ್ ಅಲಿಯ ಹಿರಿಯ ಸಹೋದರ ಪಾಣಕ್ಕಾಡ್ ಸೈಯದ್ ಮುಹಮ್ಮದಲಿ ಶಿಹಾಬ್ ತಂಙಳ್ ನೇತೃತ್ವ ವಹಿಸಿದ್ದರು. ಆಗ ಹಿರಿಯ ತಂಙಳ್ ಅವರು ಹಿಂದೂ ಮನೆಯ ಮೇಲೆ ಒಂದೇ ಒಂದು ಕಲ್ಲು ಬೀಳಬಾರದು. ಅಗತ್ಯವಿದ್ದರೆ ಮುಸ್ಲಿಮರು ಹಿಂದೂ ದೇವಾಲಯಗಳಿಗೆ ಕಾವಲು ಕಾಯಬೇಕು ಎಂದು ಸಮುದಾಯಕ್ಕೆ ಮನವಿ ಮಾಡಿದ್ದರು
ಬಾಬರಿ ಮಸೀದಿ ಧ್ವಂಸದ ಹಿನ್ನೆಲೆಯಲ್ಲಿ ಪಾಣಕ್ಕಾಡ್ ಕುಟುಂಬ ಮತ್ತು ಐಯುಎಂಎಲ್ ನ ಮಧ್ಯಮ ಮಾರ್ಗವು ಪಕ್ಷದಲ್ಲಿ ವಿಭಜನೆಗೆ ಕಾರಣವಾಯಿತು, ಬಹು ಅವಧಿಯ ಸಂಸದರಾಗಿದ್ದ ದಿವಂಗತ ಇಬ್ರಾಹಿಂ ಸುಲೈಮಾನ್ ಸೇಟ್ ಅವರು ಪಕ್ಷದಿಂದ ಹೊರನಡೆದು ಇಂಡಿಯನ್ ನ್ಯಾಷನಲ್ ಲೀಗ್ (INL) ಸ್ಥಾಪಿಸಿದರು. ಅದು ನಂತರ ಕೇರಳದಲ್ಲಿ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ನ ಮಿತ್ರಪಕ್ಷವಾಯಿತು.
1992 ರಲ್ಲಿ ಅವರ ಕುಟುಂಬವು ಅಳವಡಿಸಿಕೊಂಡ ಮಧ್ಯಮ ಮಾರ್ಗವನ್ನು ಉಲ್ಲೇಖಿಸಿ, ತಂಙಳ್ ಹೇಳಿದರು. ಮುಸ್ಲಿಮರ ರಾಜಕೀಯ ಕೇಂದ್ರವು ಆಗ ಪರಿಸ್ಥಿತಿಯನ್ನು ಬುದ್ಧಿವಂತಿಕೆಯಿಂದ ನಿಭಾಯಿಸಿತ್ತು. ಆಗಿನ ನಾಯಕತ್ವ ತಳೆದ ನಿಲುವನ್ನು ಕಾಲವು ಅನುಮೋದಿಸಿದೆ. ನಾಯಕತ್ವ ಭಿನ್ನ ನಿಲುವು ತಳೆದಿದ್ದರೆ ಸಮುದಾಯ ಭಾರೀ ಬೆಲೆ ತೆರಬೇಕಾಗುತ್ತಿತ್ತು. ಇತಿಹಾಸ ಬೇರೆ ಇರುತ್ತಿತ್ತು. ನಿನ್ನೆಯೂ ಪ್ರಚೋದನೆಗಳು ನಡೆದಿದ್ದು, ಹಲವರು ಕಾದಿದ್ದಾರೆ. ಆದರೆ ಐಯುಎಂಎಲ್ ಶಾಂತಿ ಮತ್ತು ಸೌಹಾರ್ದತೆಯ ನಿಲುವನ್ನು ತೆಗೆದುಕೊಂಡಿತು.
ಬಾಬರಿ ಮಸೀದಿಯ ಬಗ್ಗೆ ಹಲವಾರು ಐತಿಹಾಸಿಕ ಸತ್ಯಗಳಿವೆ ಎಂದು ತಂಙಳ್ ಹೇಳಿದರು. “ಆದರೆ ಕೆಲವು ಜನರು ಸಮುದಾಯವನ್ನು ಸಮಸ್ಯೆಯೊಂದಿಗೆ ಜೋಡಿಸಬಹುದು ಮತ್ತು ಅದರ ಸುತ್ತಲೂಸ ಸುತ್ತ ಬಹುದು ಎಂದು ಭಾವಿಸುತ್ತಾರೆ. ಭವಿಷ್ಯ ಮುಖ್ಯ. ನಾವು ಇತಿಹಾಸವನ್ನು ಮರೆಯಬಾರದು. ಆ ಐತಿಹಾಸಿಕ ವಾಸ್ತವವನ್ನು ಅಳವಡಿಸಿಕೊಳ್ಳುವ ಮೂಲಕ, ಸಮುದಾಯ ಮತ್ತು ಅಲ್ಪಸಂಖ್ಯಾತರಿಗೆ ಹೇಗೆ ಪ್ರಯೋಜನಕಾರಿಯಾಗಬಹುದು ಎಂಬುದನ್ನು ನಾವು ಯೋಚಿಸಬೇಕು. ಹಿಂದಿನ ಅನುಭವಗಳ ಹಿನ್ನೆಲೆಯಲ್ಲಿ ಭವಿಷ್ಯವನ್ನು ರೂಪಿಸುವುದು ಐಯುಎಂಎಲ್ ನೀತಿಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಕೇರಳ: ದೇಶದ ಬಗ್ಗೆ ಅಭಿಮಾನವಿಲ್ಲದವರು, ಭಾರತ್ ಮಾತಾ ಕಿ ಜೈ ಎಂದು ಹೇಳದವರ ವಿರುದ್ಧ ಕೇಂದ್ರ ಸಚಿವೆ ಲೇಖಿ ಕಿಡಿ
ಈ ವಿಷಯದಲ್ಲಿ ತಂಙಳ್ ಅವರ ನಿಲುವು ಮುಸ್ಲಿಂ ಸಮುದಾಯದ ಪ್ರತಿಸ್ಪರ್ಧಿಗಳಿಂದ ಟೀಕೆಗೆ ಗುರಿಯಾಯಿತು. ಐಎನ್‌ಎಲ್ ರಾಜ್ಯ ಕಾರ್ಯದರ್ಶಿ ಕಾಸಿಂ ಇರಕ್ಕೂರ್ ಮಾತನಾಡಿ, ಪಕ್ಷದ ಅಧ್ಯಕ್ಷ ತಂಙಳ್ ವಿರುದ್ಧ ಐಯುಎಂಎಲ್ ಕಾರ್ಯಕರ್ತರು ಬೀದಿಗಿಳಿಯುವ ಸಮಯ ದೂರವಿಲ್ಲ. ದೇವಾಲಯವು ಜಾತ್ಯತೀತತೆಯನ್ನು ಬಲಪಡಿಸುತ್ತದೆ ಎಂದು ಹೇಳುವ ಮೂಲಕ ತಂಙಳ್ ಅವರು ಆರ್‌ಎಸ್‌ಎಸ್ ಮತ್ತು ಸಂಘಪರಿವಾರದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಆರ್‌ಎಸ್‌ಎಸ್ ದೇಶದ ಇತರ ಮಸೀದಿಗಳ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸಿದಾಗ, ತಂಙಳ್ ಸಮುದಾಯಕ್ಕೆ ದ್ರೋಹ ಬಗೆದಿದ್ದಾರೆ. ಪ್ರಬುದ್ಧ ಕೇರಳ ತಂಙಳ್ ಗೆ ತಕ್ಕ ಉತ್ತರವನ್ನು ನೀಡುತ್ತದೆ.
ಹಿರಿಯ ಐಯುಎಂಎಲ್ ನಾಯಕ ಮತ್ತು ಪಕ್ಷದ ಶಾಸಕ ಪಿ ಕೆ ಕುಂಞಾಲಿಕುಟ್ಟಿ ತಂಙಳ್ ಅವರ ಹೇಳಿಕೆ ಸದುದ್ದೇಶದಿಂದ ಕೂಡಿದೆ ಎಂದು ಹೇಳಿದ್ದಾರೆ. ಯಾರೂ ಬಿಜೆಪಿಯ ಬಲೆಗೆ ಬೀಳಬಾರದು ಮತ್ತು ಈ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಬಾರದು ಎಂದು ಅವರು ಬಯಸಿದ್ದರು. ಈ ನಿಲುವು ಮಸೀದಿ ವಿಚಾರದಲ್ಲಿ ಪಕ್ಷದ ಹಿಂದಿನ ನಿಲುವಿಗೆ ಹೊಂದಿಕೆಯಾಗುತ್ತದೆ. ಅದನ್ನು ತಿರುಚಬಾರದು ಎಂದರು.
ದ್ವೇಷವನ್ನು ಹುಟ್ಟುಹಾಕುವ ಪ್ರಯತ್ನಗಳು ನಡೆದಾಗ ತಂಙಳ್ ಅವರು ಸೌಹಾರ್ದತೆ ಮತ್ತು ಶಾಂತಿಗಾಗಿ ಮಾತನಾಡುತ್ತಾರೆ ಎಂದು ಹಿರಿಯ ಕಾಂಗ್ರೆಸ್ ಶಾಸಕ ಮತ್ತು ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಹೇಳಿದ್ದಾರೆ. ಸಮಸ್ಯೆಯು ಎರಡೂ ಕಡೆಯ ಜನರ ಕೈಗೆ ಹೋಗುವುದನ್ನು ತಡೆಯುವುದು ಅವರ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:07 pm, Mon, 5 February 24