ಕೇರಳ: ದೇಶದ ಬಗ್ಗೆ ಅಭಿಮಾನವಿಲ್ಲದವರು, ಭಾರತ್ ಮಾತಾ ಕಿ ಜೈ ಎಂದು ಹೇಳದವರ ವಿರುದ್ಧ ಕೇಂದ್ರ ಸಚಿವೆ ಲೇಖಿ ಕಿಡಿ

ದೇಶದ ಬಗ್ಗೆ ಅಭಿಮಾನವಿಲ್ಲದವರು ಯುವ ಸಮಾವೇಶದಲ್ಲಿ ಭಾಗವಹಿಸುವುದರಿಂದ ಯಾವುದೇ ಪ್ರಯೋಜನವಿಲ್ಲ, ಭಾರತಾಂಬೆ ಯಾರೊಬ್ಬಳ ಅಥವಾ ಯಾವುದೇ ಒಂದು ನಿರ್ದಿಷ್ಟ ಸಮುದಾಯದ ತಾಯಿಯಲ್ಲ ಆಕೆ ಎಲ್ಲರಿಗೂ ತಾಯಿಯೇ, ಆದರೆ ಭಾರತ್ ಮಾತಾ ಕಿ ಜೈ ಎಂದು ಹೇಳಲು ಹಿಂಜರಿಯುವವರು ದೇಶದ ಬಗ್ಗೆ ಅಭಿಮಾನವಿಲ್ಲದವರು ಎಂದು ಸಚಿವೆ ಮೀನಾಕ್ಷಿ ಲೇಖಿ ಹೇಳಿದ್ದಾರೆ.

ಕೇರಳ: ದೇಶದ ಬಗ್ಗೆ ಅಭಿಮಾನವಿಲ್ಲದವರು, ಭಾರತ್ ಮಾತಾ ಕಿ ಜೈ ಎಂದು ಹೇಳದವರ ವಿರುದ್ಧ ಕೇಂದ್ರ ಸಚಿವೆ ಲೇಖಿ ಕಿಡಿ
ಮೀನಾಕ್ಷಿ ಲೇಖಿImage Credit source: India Today
Follow us
ನಯನಾ ರಾಜೀವ್
|

Updated on: Feb 04, 2024 | 8:31 AM

ಭಾರತ್ ಮಾತಾ ಕಿ ಜೈ(Bharat Mata Ki Jai) ಎಂದು ಹೇಳದವರ ವಿರುದ್ಧ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ(Meenakshi Lekhi) ಕಿಡಿಕಾರಿದ್ದಾರೆ. ಇವರೆಲ್ಲರೂ ದೇಶಾಭಿಮಾನ ಇಲ್ಲದವರು ಎಂದು ಹೇಳಿದ್ದಾರೆ. ಕೇರಳದಲ್ಲಿ ಯುವ ಸಮಾವೇಶ ನಡೆದಿತ್ತು, ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಯುವಕರನ್ನುದ್ದೇಶಿಸಿ ಮಾತನಾಡಿದ್ದರು. ಭಾಷಣದ ಬಳಿಕ ಭಾರತ್ ಮಾತಾಕಿ ಜೈ ಎಂದು ಉದ್ಘರಿಸಿದ್ದಾರೆ ಆದರೆ ಅಲ್ಲಿದ್ದವರು ಯಾರೂ ಕೂಡ ಹೇಳಲಿಲ್ಲ ಅದಕ್ಕೆ ಲೇಖಿ ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತವು ನಮ್ಮ ತಾಯಿ ಮಾತ್ರವಲ್ಲ ಅಥವಾ ನಿಮ್ಮ ತಾಯಿ ಮಾತ್ರವಲ್ಲ ಭಾರದಾಂಬೆ ಎಲ್ಲರಿಗೂ ಸೇರಿದವಳು, ಭಾರತ್ ಮಾತಾ ಕಿ ಜೈ ಎಂದರೆ ಏನಾಗಿಬಿಡುತ್ತದೆ ಎಂದು ಪ್ರಶ್ನಿಸಿದ್ದಾರೆ. ಈ ಸಮಾವೇಶವನ್ನು ಕೆಲವು ಹಿಂದೂ ಸಂಘಟನೆಗಳು ಆಯೋಜಿಸಿದ್ದವು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಬಿಜೆಪಿ ನಾಯಕರು ಭಾರತ್ ಮಾತಾ ಕಿ ಜೈ ಎಂಬ ಘೋಷಣೆಯನ್ನು ಎತ್ತಿದರು ಮತ್ತು ಅದನ್ನು ಪುನರಾವರ್ತಿಸಲು ಸಭಿಕರನ್ನು ಕೇಳಿದರು.

ಪ್ರೇಕ್ಷಕರ ಪ್ರತಿಕ್ರಿಯೆ ನಿರೀಕ್ಷಿತ ಮಟ್ಟದಲ್ಲಿಲ್ಲದ ಕಾರಣ, ಭಾರತ ತನ್ನ ಮನೆಯಲ್ಲವೇ ಎಂದು ಕೇಳಿದರು. ಹಳದಿ ಸೀರೆ ಧರಿಸಿದ ಒಬ್ಬರನ್ನು ನಿಲ್ಲುವಂತೆ ಕೇಳಿ, ಆ ಕಡೆ ಈ ಕಡೆ ನೋಡಬೇಡಿ ಒಮ್ಮೆ ಭಾರತ್ ಮಾತಾಕಿ ಜೈ ಎಂದು ಹೇಳಿ ಎಂದು ಕೇಳಿದ್ದಾರೆ ಆದರೆ ಆ ಮಹಿಳೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಮತ್ತಷ್ಟು ಓದಿ: ಸಂಸತ್​​ನಲ್ಲಿ ಹಮಾಸ್ ಕುರಿತ ಪ್ರಶ್ನೆಯ ಉತ್ತರಕ್ಕೆ ಸಹಿ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದ ಮೀನಾಕ್ಷಿ ಲೇಖಿ

ಅದರಿಂದ ಬೇಸರಗೊಂಡ ಸಚಿವೆ ಲೇಖಿ, ನೀವು ಇಲ್ಲಿಂದ ಇನ್ನು ಹೋಗಬಹುದು, ರಾಷ್ಟ್ರದ ಬಗ್ಗೆ ಹೆಮ್ಮೆ ಇಲ್ಲದವರು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ