AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಬಾ ರಾಮದೇವ್ ಪತಂಜಲಿ ಕಂಪನಿ ಈ ವರ್ಷವೂ ಲಾಭದಲ್ಲಿ..

ಯೋಗ ಗುರು ಬಾಬಾ ರಾಮದೇವ್‌ ಅವರ ಪತಂಜಲಿ ಆಯುರ್ವೇದ ಕಂಪನಿಯ ಉತ್ಪನ್ನಗಳು ಮಾರುಕಟ್ಟೆಗೆ ಬಂದು ಹಲವು ವರ್ಷಗಳೇನೂ ಕಳೆದಿಲ್ಲ. ಆದ್ರೆ ಕಡಿಮೆ ಸಮಯದಲ್ಲಿಯೇ ಜನರನ್ನು ಆಕರ್ಷಿಸಿ, ಇದೀಗ ಲಾಭದತ್ತ ಮುಖ ಮಾಡಿದೆ. ನಿಸರ್ಗಪೂರಿತ ಪ್ರೊಡಕ್ಟ್​ಗಳನ್ನು ನೀಡುತ್ತ ಬಂದಿರುವ ಪತಂಜಲಿ ಸಂಸ್ಥೆ ಜನರಿಗೆ ಹೆಚ್ಚು ಪ್ರಿಯವಾಗುತ್ತಿದೆ. ಹೆಚ್ಚು ವಿಶ್ವಾಸಾರ್ಹದೊಂದಿಗೆ ಉತ್ಪನ್ನಗಳನ್ನು ಜನರಿಗೆ ಒದಗಿಸುತ್ತ ಬಂದಿದ್ದು, ಸಂಸ್ಥೆ ಯಶಸ್ಸಿನ ಹಾದಿಯಲ್ಲಿ ನಿಂತಿದೆ. ಹರಿದ್ವಾರ ಮೂಲದ ಪತಂಜಲಿ ಆಯುರ್ವೇದ ಲಿಮಿಟೆಡ್ ಕಂಪನಿ 2018-19ನೇ ಸಾಲಿನಲ್ಲಿ 349.37 ಕೋಟಿ ರೂ ಲಾಭವನ್ನು ಗಳಿಸಿತ್ತು. […]

ಬಾಬಾ ರಾಮದೇವ್ ಪತಂಜಲಿ ಕಂಪನಿ ಈ ವರ್ಷವೂ ಲಾಭದಲ್ಲಿ..
ಬಾಬಾ ರಾಮ್​ದೇವ್
ಸಾಧು ಶ್ರೀನಾಥ್​
|

Updated on: Nov 14, 2020 | 2:36 PM

Share

ಯೋಗ ಗುರು ಬಾಬಾ ರಾಮದೇವ್‌ ಅವರ ಪತಂಜಲಿ ಆಯುರ್ವೇದ ಕಂಪನಿಯ ಉತ್ಪನ್ನಗಳು ಮಾರುಕಟ್ಟೆಗೆ ಬಂದು ಹಲವು ವರ್ಷಗಳೇನೂ ಕಳೆದಿಲ್ಲ. ಆದ್ರೆ ಕಡಿಮೆ ಸಮಯದಲ್ಲಿಯೇ ಜನರನ್ನು ಆಕರ್ಷಿಸಿ, ಇದೀಗ ಲಾಭದತ್ತ ಮುಖ ಮಾಡಿದೆ. ನಿಸರ್ಗಪೂರಿತ ಪ್ರೊಡಕ್ಟ್​ಗಳನ್ನು ನೀಡುತ್ತ ಬಂದಿರುವ ಪತಂಜಲಿ ಸಂಸ್ಥೆ ಜನರಿಗೆ ಹೆಚ್ಚು ಪ್ರಿಯವಾಗುತ್ತಿದೆ. ಹೆಚ್ಚು ವಿಶ್ವಾಸಾರ್ಹದೊಂದಿಗೆ ಉತ್ಪನ್ನಗಳನ್ನು ಜನರಿಗೆ ಒದಗಿಸುತ್ತ ಬಂದಿದ್ದು, ಸಂಸ್ಥೆ ಯಶಸ್ಸಿನ ಹಾದಿಯಲ್ಲಿ ನಿಂತಿದೆ.

ಹರಿದ್ವಾರ ಮೂಲದ ಪತಂಜಲಿ ಆಯುರ್ವೇದ ಲಿಮಿಟೆಡ್ ಕಂಪನಿ 2018-19ನೇ ಸಾಲಿನಲ್ಲಿ 349.37 ಕೋಟಿ ರೂ ಲಾಭವನ್ನು ಗಳಿಸಿತ್ತು. ಆದರೆ ಈ ಬಾರಿ ಶೇಕಡ 21.56 ರಷ್ಟು ಆರ್ಥಿಕ ಹೆಚ್ಚಳವನ್ನು ಕಂಡಿದ್ದು, 424.72 ಕೋಟಿ ರೂ ಲಾಭವನ್ನು ಪಡೆದಿದೆ ಎಂದು ಸ್ಪಷ್ಟಪಡಿಸಿದೆ.

ಪತಂಜಲಿ ಸಂಸ್ಥೆಯು 2020 ಮಾರ್ಚ್ 31ರ ವೇಳೆಯಲ್ಲಿ ಶೇ. 5.86 ರಷ್ಟು ಏರಿಕೆ ಕಂಡು ಒಟ್ಟು 9,022.71 ಕೋಟಿ ರೂ ಹಣ ಲಾಭ ಗಳಿಸಿದೆ. ಇದರ ಹಿಂದಿನ ವರ್ಷದ ಅವಧಿಯಲ್ಲಿ 8,522.68 ಕೋಟಿ ರೂ ಹಣವನ್ನು ತನ್ನದಾಗಿಸಿಕೊಂಡಿತ್ತು. 2019-20ನೇ ಹಣಕಾಸು ವರ್ಷದಲ್ಲಿ ಇದರ ಒಟ್ಟು ಆದಾಯ 9.087.91 ಕೋಟಿ ರೂ ಗಳಾಗಿದ್ದು, 2019 ಮಾರ್ಚ್​ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಕಂಪನಿಯು 8.541.57 ಕೋಟಿ ರೂ ಗಳಿಸಿತ್ತು.

ಒಟ್ಟಾರೆಯಾಗಿ ಕಳೆದ ವರ್ಷಗಳಿಗಿಂತ ಈ ಬಾರಿ ಆದಾಯದಲ್ಲಿ ಮೂರು ಪಟ್ಟು ಏರಿಕೆಯಾಗಿದ್ದು, ಒಟ್ಟು 65.19 ಕೋಟಿ ರೂ ಹಣವನ್ನು ಕಂಪನಿಯು ಜೇಬಿಗಿಳಿಸಿಕೊಂಡಿದೆ.

‘ಉತ್ತಮ ಬೆಳವಣಿಗೆಯನ್ನು ಕಂಡು ಯೋಗ ಗುರು ರಾಮದೇವ್ ಅವರು ಕಳೆದ ವರ್ಷದ ಆದಾಯದಿಂದ ಜನರಿಗೆ ಇನ್ನಷ್ಟು ಉತ್ತಮ ಉತ್ಪನ್ನಗಳನ್ನು ನೀಡಲು ಮುಂದಾದೆವು. ಇದರ ಪ್ರತಿಫಲದಿಂದ ಯಶಸ್ಸಿನ ಹಾದಿಗೆ ತಲುಪಲು ಕಾರಣವಾಯಿತು. ಪತಂಜಲಿ ಉತ್ಪನ್ನಗಳಲ್ಲಿ ಶುದ್ಧ ಮತ್ತು ನಂಬಿಕೆಯ ಜೊತೆಗೆ ಕಡಿಮೆ ದರದಲ್ಲಿ ಲಭ್ಯವಿರುವ ಕಾರಣ ಉತ್ಪನ್ನದ ಮೇಲೆ ಹೆಚ್ಚಿನ ವಿಶ್ವಾಸವನ್ನು ಜನರು ಹೊಂದಿದ್ದಾರೆ’ ಎಂದಿದ್ದಾರೆ.