ಮುಂಬೈ, ಅಕ್ಟೋಬರ್ 13: ಎನ್ಸಿಪಿ ನಾಯಕ, ಮಾಜಿ ಮಿನಿಸ್ಟರ್ ಬಾಬಾ ಸಿದ್ದಿಕಿಯನ್ನ (Baba Siddique) ಮುಂಬೈನಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ 3ನೇ ಆರೋಪಿ ಪ್ರವೀಣ್ ಲೋನಕರ ಎಂಬಾತನನ್ನು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ.
ಮಾಹಿತಿ ಪ್ರಕಾರ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಸುಬು ಲೋನಕರ ಪ್ರಮುಖ ಆರೋಪಿ ಎನ್ನಲಾಗುತ್ತಿದ್ದು, ಸದ್ಯ ತಲೆಮರೆಸಿಕೊಂಡಿದ್ದಾರೆ. ಸದ್ಯ ಈಗಾಗಲೇ ಬಂಧಿನಕೊಳ್ಳಗಾಗಿರುವ ಧರ್ಮರಾಜ್ ಕಶ್ಯಪ್ ಮತ್ತು ಶಿವ ಗೌತಮ್ ಕೆಲಸ ಮಾಡುತ್ತಿದ್ದ ಸ್ಕ್ರ್ಯಾಪ್ ಅಂಗಡಿಯ ಪಕ್ಕದಲ್ಲೇ ಪ್ರವೀಣ್ ಲೋನಕರ ಕೂಡ ಸ್ವಂತ ಕಿರಾಣಿ ಅಂಗಡಿ ಹೊಂದಿದ್ದರು.
ಇದನ್ನೂ ಓದಿ: Baba Siddique: ಬಾಬಾ ಸಿದ್ದಿಕಿ ಕೊಲೆ ಹಿಂದಿದೆಯಾ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ?
ಪ್ರಕರಣದಲ್ಲಿ ಇನ್ನು ಮೂರನೇ ಆರೋಪಿಯ ಗುರುತು ಪತ್ತೆ ಮಾಡಲಾಗಿದ್ದು, ನಾಲ್ಕನೇ ಆರೋಪಿಗಾಗಿಯೂ ಹುಡುಕಾಟ ನಡೆಸಲಾಗುತ್ತಿದೆ. ಇನ್ನು ಪೊಲೀಸರ ತನಿಖೆಯಲ್ಲಿ, ಆರೋಪಿಗಳು ಸುಪಾರಿ ಪಡೆದೇ ಹತ್ಯೆ ಮಾಡಿರುವುದು ಬಯಲಾಗಿದೆ.
ಇದನ್ನೂ ಓದಿ: Baba Siddique: ಅಜಿತ್ ಪವಾರ್ ಬಣದ ಹಿರಿಯ ನಾಯಕ ಬಾಬಾ ಸಿದ್ದಿಕಿಗೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ: ಹತ್ಯೆ
ಬಾಬಾ ಸಿದ್ದಿಕಿಯ ಕೊಲೆಗೆ ಇದೀಗ ದೊಡ್ಡ ಟ್ವಿಸ್ಟೇ ಸಿಕ್ಕಿದೆ. ನಾವೇ ಕೊಲೆ ಮಾಡಿರೋದು ಅಂತಾ ಲಾರೆನ್ಸ್ ಬಿಣ್ಣೋಯ್ ಗ್ಯಾಂಗ್ ಹೊಣೆ ಹೊತ್ತುಕೊಂಡಿದೆ. ಬಾಬಾ ಸಿದ್ದಿಕಿಯ ಕೊಲೆಯಲ್ಲಿ ಭಾಗಿಯಾಗಿರೋದಾಗಿ ಬಿಷ್ಣೋಯ್ ಗ್ಯಾಂಗ್ ಒಪ್ಪಿಕೊಂಡಿದೆ. ಯಾಕಂದ್ರೆ 15 ದಿನಗಳ ಹಿಂದೆ ಸಿದ್ದಿಕೆಗೆ ಬೆದರಿಕೆಯೊಂದು ಬಂದಿತ್ತು ಅಂತಾ ಪೊಲೀಸ್ ಮೂಲಗಳು ತಿಳಿಸಿವೆ. ಅಲ್ದೇ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ತುಂಬಾ ಆಪ್ತರಾಗಿದ್ದರು. ಹೀಗಾಗಿ ಸಲ್ಮಾನ್ ಖಾನ್ಗೆ ಪದೇಪದೆ ಜೀವ ಬೆದರಿಕೆ ಹಾಕ್ತಿರೋ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದಲೇ ಹತ್ಯೆ ಮಾಡಿರೋದು ಬಯಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:58 pm, Sun, 13 October 24