ಹರ್ಯಾಣದಲ್ಲಿ ಕಾಂಗ್ರೆಸ್ ಪರ ಅಲೆ ಸೃಷ್ಟಿಸಿದ್ದರು ರೈತರು; ಮೂರ್ಖ ಹೂಡಾರಿಂದ ಕಾಂಗ್ರೆಸ್ ಸೋತಿತು: ಗುರ್ನಾಮ್ ಚರುನಿ
Haryana election results, blame game: ಹರ್ಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲಲು ಭೂಪಿಂದರ್ ಸಿಂಗ್ ಕಾರಣ ಎಂದು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಗುರ್ನಾಮ್ ಸಿಂಗ್ ಚರುನಿ ಆಪಾದಿಸಿದ್ದಾರೆ. ರೈತರ ಪ್ರತಿಭಟನೆಗಳ ಮೂಲಕ ಹರ್ಯಾಣದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ನಿರ್ಮಿಸಿದ್ದು ತಾವು. ಆದರೆ, ಹೂಡಾ ಮೂರ್ಖತನದಿಂದಾಗಿ ಕಾಂಗ್ರೆಸ್ ಸೋಲನುಭವಿಸಿತು ಎಂದು ಗುರ್ನಾಮ್ ಹೇಳಿದ್ದಾರೆ.
ಚಂಡೀಗಡ್, ಅಕ್ಟೋಬರ್ 13: ಹರ್ಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅನಿರೀಕ್ಷಿತ ಸೋಲನುಭವಿಸದ ಬಳಿಕ ವಿಪಕ್ಷ ಪಾಳಯದಲ್ಲೇ ಕೆಸರೆರಚಾಟ ನಡೆಯುತ್ತಿದೆ. ಭಾರೀ ದೊಡ್ಡ ಮಟ್ಟದಲ್ಲಿ ರೈತರಿಂದ ಪ್ರತಿಭಟನೆಗಳನ್ನು ಆಯೋಜಿಸಿದ್ದ ಭಾರತೀಯ ಕಿಸಾನ್ ಯೂನಿಯನ್ ಈ ಚುನಾವಣಾ ಫಲಿತಾಂಶದಿಂದ ಆಘಾತಕ್ಕೊಳಗಾಗಿದೆ. ಈ ರೈತ ಒಕ್ಕೂಟದ ಅಧ್ಯಕ್ಷ ಗುರ್ನಾಮ್ ಸಿಂಗ್ ಈ ಸೋಲಿಗೆ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರನ್ನು ದೂಷಿಸಿದ್ದಾರೆ. ತಮ್ಮ ಸಂಘಟನೆ ವತಿಯಿಂದ ಆಯೋಜಿಸಲಾದ ರೈತರ ಪ್ರತಿಭಟನೆಯಿಂದ ಹರ್ಯಾಣದಲ್ಲಿ ಕಾಂಗ್ರೆಸ್ ಪರ ಅಲೆ ಎದ್ದಿತ್ತು. ಆದರೆ, ಹೂಡಾ ಮೂರ್ಖತನದಿಂದಾಗಿ ಎಲ್ಲಾ ಹಾಳಾಯಿತು ಎಂದಿದ್ದಾರೆ ಗುರ್ನಾಮ್ ಸಿಂಗ್ ಸಿಂಗ್ ಚರುನಿ.
‘ಭೂಪಿಂದರ್ ಹೂಡಾ ಅಪ್ಪಟ ಮೂರ್ಖ ಎನಿಸುತ್ತೆ. ಹರಿಯಾಣದಲ್ಲಿ ಕಾಂಗ್ರೆಸ್ ಪರ ಇದ್ದ ಅಲೆಯನ್ನು ಸೃಷ್ಟಿಸಿದ್ದೇ ನಾವು ಮತ್ತು ರೈತರು. ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸೋಲಲು ಪ್ರಮುಖ ಕಾರಣವೇ ಹೂಡಾ. ಆತ ಯಾವುದಕ್ಕೂ ರಾಜಿ ಮಾಡಿಕೊಳ್ಳಲಿಲ್ಲ. ಪಕ್ಷ ಕೂಡ ಎಲ್ಲವನ್ನೂ ಆತನಿಗೇ ಬಿಟ್ಟುಬಿಟ್ಟಿತ್ತು. ಈಗಲೂ ಕೂಡ ನಾನು ಹೇಳುವುದೇನೆಂದರೆ ಕಾಂಗ್ರೆಸ್ ಹೈಕಮಾಂಡ್ ಹರ್ಯಾಣದಲ್ಲಿ ವಿಪಕ್ಷ ನಾಯಕನನ್ನಾಗಿ ಭೂಪಿಂದರ್ ಹೂಡಾರನ್ನು ಕೂರಿಸಬಾರದು. ಕಳೆದ 10 ವರ್ಷದಲ್ಲಿ ಹೂಡಾ ವಿಪಕ್ಷ ನಾಯಕನ ಜವಾಬ್ದಾರಿಯನ್ನೇ ನಿಭಾಯಿಸಲಿಲ್ಲ. ನಿಜವಾಗಿಯೂ ವಿರೋಧ ಪಕ್ಷವಾಗಿ ಕೆಲಸ ಮಾಡಿದ್ದು ಭಾರತೀಯ ಕಿಸಾನ್ ಯೂನಿಯನ್,’ ಎಂದು ಗುರ್ನಾಮ್ ಸಿಂಗ್ ಹೇಳಿದ್ದಾರೆ.
ಐಎಎನ್ಎಸ್ ವಿಡಿಯೋ
Kurukshetra, Haryana: Bhartiya Kisan Union President, Gurnam Singh Charuni says, “I believe that Bhupinder Hooda is quite foolish. The atmosphere created in Haryana in favor of the Congress was made by us…The biggest reason for the Congress’s defeat, is that he did not make any… pic.twitter.com/WRNHmAr1Tw
— IANS (@ians_india) October 13, 2024
ಇದನ್ನೂ ಓದಿ: Explained: ಹತ್ತು ವರ್ಷಗಳಿಂದ ಜೈಲಿಂದಲೇ ಎಲ್ಲಾ ‘ಆಟ’ ಆಡುತ್ತಿರುವ ಲಾರೆನ್ಸ್ ಬಿಷ್ಣೋಯ್ ಮತ್ತವನ ಗ್ಯಾಂಗ್ನ ಅಸಲಿಯತ್ತೇನು?
ಹರ್ಯಾಣ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷವೇ ಮತ್ತೆ ಜಯಿಸಿದೆ. ಸತತ ಮೂರನೇ ಬಾರಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ. ನಯಬ್ ಸಿಂಗ್ ಸೈನಿ ಸಿಎಂ ಆಗಿದ್ದಾರೆ. ಈ ಚುನಾವಣೆಯಲ್ಲಿ ಬಿಕೆಯು ಕೂಡ ಸ್ಪರ್ಧಿಸಿತ್ತು. ಪೆಹೋವಾ ಕ್ಷೇತ್ರದಲ್ಲಿ ಸ್ವತಃ ಗುರ್ನಾಮ್ ಸಿಂಗ್ ಚರುನಿ ಸ್ಪರ್ಧಿಸಿದ್ದರಾದರೂ ಠೇವಣಿಯೇ ಬರಲಿಲ್ಲ. ಕಾಂಗ್ರೆಸ್ ಪಕ್ಷ ಆ ಕ್ಷೇತ್ರ ಗೆದ್ದಿತು. ಆದರೆ, ರಾಜ್ಯದಲ್ಲಿ ಒಟ್ಟಾರೆಯಾಗಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿತು. ಚುನಾವಣಾ ಪೂರ್ವ ಸಮೀಕ್ಷೆಗಳು ಮತ್ತು ಮತದಾನೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಗೆಲ್ಲಬಹುದು ಎಂದು ಮಾಡಿದ್ದ ಅಂದಾಜು ಉಲ್ಟಾ ಹೊಡೆದಿದೆ.
ವರ್ಕೌಟ್ ಆಗದ ರೈತರ ಪ್ರತಿಭಟನಾ ಫಾರ್ಮುಲಾ
ನಾಲ್ಕೈದು ವರ್ಷಗಳಿಂದಲೂ ದೇಶದಲ್ಲಿ ರೈತರ ಪ್ರತಿಭಟನೆಯ ಪ್ರಯೋಗ ನಡೆಯುತ್ತಿರುವಂತಿದೆ. ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ ಈ ಪ್ರತಿಭಟನೆಗಳು ನಡೆಯುತ್ತಿವೆ ಎನ್ನುವ ಆರೋಪ ದಟ್ಟವಾಗಂತೂ ಕೇಳಿಬರುತ್ತಿದೆ. ಆದರೂ ಕೇಂದ್ರದಲ್ಲಿ ಎನ್ಡಿಎ ಮೈತ್ರಿಕೂಟ ಸತತ ಮೂರನೇ ಬಾರಿ ಅಧಿಕಾರಕ್ಕೆ ಬರಲು ಯಶಸ್ವಿಯಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ಗಾಗಿಯೇ ನಡೆದಿತ್ತಾ ರೈತರ ಪ್ರತಿಭಟನೆ, ಆದರೂ ಹರ್ಯಾಣದಲ್ಲಿ ಸೋತಿದ್ಹೇಗೆ, ಕಾರಣ ಬಿಚ್ಚಿಟ್ಟ ರೈತ ಮುಖಂಡ
ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ ರೈತರ ಪ್ರತಿಭಟನೆಗಳು ನಡೆದಿದ್ದವು. ಆದರೆ, ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಆಗಿರಲಿಲ್ಲ. ಎಡಪಂಥೀಯ ಹೋರಾಟಗಾರ ಯೋಗೇಂದ್ರ ಯಾದವ್ ಆ ಚುನಾವಣೆಯಲ್ಲಿ ರೈತರ ಪ್ರತಿಭಟನೆ ಮೂಲಕ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳ ಪರ ವಾತಾವರಣ ಸೃಷ್ಟಿಸಲಾಗಿತ್ತು. ಇದನ್ನು ಸರಿಯಾಗಿ ಬಳಸಿಕೊಳ್ಳಲು ವಿಫಲರಾದರು ಎಂದು ವಾದಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ