ಬದರಿನಾಥಕ್ಕೆ ದಾಖಲೆ ಸಂಖ್ಯೆಯಲ್ಲಿ ಯಾತ್ರಿಕರ ಆಗಮನ, ಒಂದು ತಿಂಗಳಲ್ಲಿ 5 ಲಕ್ಷ ಮಂದಿ ಭೇಟಿ

|

Updated on: Jun 11, 2024 | 11:07 AM

ಚಾರ್​ ಧಾಮ್ ಯಾತ್ರೆ ಆರಂಭಗೊಂಡಿದೆ, ಬದರಿನಾಥಕ್ಕೆ ದಾಖಲೆ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ. ಒಂದು ತಿಂಗಳಲ್ಲಿ ಬರೋಬ್ಬರು 5 ಲಕ್ಷ ಮಂದಿ ಆಗಮಿಸಿದ್ದಾರೆ.

ಬದರಿನಾಥಕ್ಕೆ ದಾಖಲೆ ಸಂಖ್ಯೆಯಲ್ಲಿ ಯಾತ್ರಿಕರ ಆಗಮನ, ಒಂದು ತಿಂಗಳಲ್ಲಿ 5 ಲಕ್ಷ ಮಂದಿ ಭೇಟಿ
ಬದರಿನಾಥ
Follow us on

ಬದರಿನಾಥ(Badrinath)ಕ್ಕೆ ದಾಖಲೆ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ. ಒಂದೇ ತಿಂಗಳಲ್ಲಿ 5 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಕಳೆದ ವರ್ಷ ಮೊದಲ ತಿಂಗಳಲ್ಲಿ ಧಾಮಕ್ಕೆ ಭೇಟಿ ನೀಡಿದ 4.5 ಲಕ್ಷ ಭಕ್ತರಿಗೆ ಹೋಲಿಸಿದರೆ ಈ ವರ್ಷ ಬದರಿನಾಥ ಧಾಮವು 50,000 ಭಕ್ತರ ಹೆಚ್ಚಳಕ್ಕೆ ಸಾಕ್ಷಿಯಾಗಿದೆ.

55,000 ಕ್ಕೂ ಹೆಚ್ಚು ಭಕ್ತರು ಸಿಖ್ಖರ ಪವಿತ್ರ ಯಾತ್ರಾಸ್ಥಳವಾದ ಹೇಮಕುಂಡ್ ಸಾಹಿಬ್‌ಗೆ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ.
ಈ ವರ್ಷ, ಬದರಿನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಯನ್ನು ಒಳಗೊಂಡಿರುವ ಚಾರ್ ಧಾಮ್ ಯಾತ್ರಾ ಸರ್ಕ್ಯೂಟ್‌ನಲ್ಲಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಬದರಿನಾಥದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದು, ಈ ಬಾರಿ ಯಾತ್ರೆಯ ಹಿಂದಿನ ಎಲ್ಲ ದಾಖಲೆಗಳು ಮುರಿಯುವ ನಿರೀಕ್ಷೆ ಇದೆ.

ಮೇ 10ರಂದು ಚಾರ್​ ಧಾಮ್ ಯಾತ್ರೆ ಶುರುವಾಗಿತ್ತು, ಚಾರ್ ಧಾಮ್ ಯಾತ್ರೆಗೆ ಆನ್‌ಲೈನ್ ನೋಂದಣಿಯನ್ನು ಏಪ್ರಿಲ್ 15 ರಿಂದ ಮೇ 3 ರವರೆಗೆ ನಡೆಸಲಾಗಿತ್ತು. ಬಳಿಕ ಮೇ 8 ರಿಂದ ಆಫ್​ಲೈನ್ ನೋಂದಣಿ ಶುರು ಮಾಡಲಾಗಿತ್ತು.

ಬದರಿನಾಥವನ್ನು ವಿಶಾಲಪುರಿ ಎಂದೂ ಕರೆಯುತ್ತಾರೆ. ಬದರಿನಾಥ ಧಾಮದಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತದೆ, ಆದ್ದರಿಂದ ಇದನ್ನು ವಿಷ್ಣುಧಾಮ ಎಂದೂ ಕರೆಯುತ್ತಾರೆ. ಬದರಿನಾಥ್ ಸುಮಾರು 3,100 ಮೀಟರ್ ಎತ್ತರದಲ್ಲಿದೆ. ಗರ್ವಾಲ್ ಹಿಮಾಲಯದ ಅಲಕನಂದಾ ನದಿಯ ದಡದಲ್ಲಿ ನೆಲೆಗೊಂಡಿರುವ ಈ ನಗರವು ನಾರ್ ಮತ್ತು ನಾರಾಯಣ ಪರ್ವತ ಶ್ರೇಣಿಗಳ ನಡುವೆ ನೆಲೆಗೊಂಡಿದೆ.

ಮತ್ತಷ್ಟು ಓದಿ: Chardham Yatra 2024: ಇಂದಿನಿಂದ ಚಾರ್​ಧಾಮ್ ಯಾತ್ರೆ ಇಂದಿನಿಂದ ಶುರು

ಬದರಿನಾಥಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಡೆಹ್ರಾಡೂನ್‌ನಲ್ಲಿರುವ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ, ಇದು ಬದರಿನಾಥದಿಂದ ಸುಮಾರು 317 ಕಿ.ಮೀ. ದೂರದಲ್ಲಿದೆ. ಡೆಹ್ರಾಡೂನ್ ವಿಮಾನ ನಿಲ್ದಾಣದಿಂದ ಬದರಿನಾಥಕ್ಕೆ ಟ್ಯಾಕ್ಸಿ ಮತ್ತು ಬಸ್ ಸೇವೆಗಳು ಲಭ್ಯವಿದೆ.

ರಿಷಿಕೇಶ, ಹರಿದ್ವಾರ ಮತ್ತು ಡೆಹ್ರಾಡೂನ್ ಎಲ್ಲಾ ರೈಲು ನಿಲ್ದಾಣಗಳನ್ನು ಹೊಂದಿದೆ. ಬದರಿನಾಥಕ್ಕೆ ಹತ್ತಿರದ ರೈಲು ನಿಲ್ದಾಣವೆಂದರೆ ಋಷಿಕೇಶ. ರಿಷಿಕೇಶದಿಂದ ಬಸ್ ಮತ್ತು ಟ್ಯಾಕ್ಸಿ ಮೂಲಕ ಬದರಿನಾಥ ತಲುಪಬಹುದು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:01 am, Tue, 11 June 24