All Party Meeting: ಬಾಂಗ್ಲಾದೇಶದ ಪ್ರಸ್ತುತ ಸ್ಥಿತಿ ಹಿಂದೆ ಬೇರೆ ದೇಶಗಳ ಕೈವಾಡವಿದೆಯೇ? ರಾಹುಲ್ ಗಾಂಧಿ ಪ್ರಶ್ನೆ

|

Updated on: Aug 06, 2024 | 12:27 PM

ಬಾಂಗ್ಲಾದೇಶದಲ್ಲಿ ಉದ್ಭವಾಗಿರುವ ಅಶಾಂತಿ ಹಾಗೂ ಶೇಖ್ ಹಸೀನಾ ಭಾರತಕ್ಕೆ ಬಂದಿರುವ ವಿಚಾರವಾಗಿ ವಿದೇಶಾಂಗ ಸಚಿವ ಎಸ್​ ಜೈಶಂಕರ್​ ಸರ್ವಪಕ್ಷಗಳ ಸಭೆಯನ್ನು ಕರೆದಿದ್ದರು. ಅದರಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.

All Party Meeting: ಬಾಂಗ್ಲಾದೇಶದ ಪ್ರಸ್ತುತ ಸ್ಥಿತಿ ಹಿಂದೆ ಬೇರೆ ದೇಶಗಳ ಕೈವಾಡವಿದೆಯೇ? ರಾಹುಲ್ ಗಾಂಧಿ ಪ್ರಶ್ನೆ
ಸರ್ವಪಕ್ಷಗಳ ಸಭೆ
Follow us on

‘‘ಬಾಂಗ್ಲಾದೇಶದ ಪ್ರಸ್ತುತ ಸ್ಥಿತಿ ಹಿಂದೆ ಬೇರೆ ದೇಶಗಳ ಷಡ್ಯಂತ್ರ್ಯವಿದೆಯೇ?’’ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಶ್ನೆ ಕೇಳಿದ್ದಾರೆ.
ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಂಗಳವಾರ ಸರ್ವಪಕ್ಷ ಸಭೆಯನ್ನು ಕರೆದಿತ್ತು. ಈ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್​ ಜೈಶಂಕರ್​ ಅವರ ಬಳಿ ರಾಹುಲ್ ಗಾಂಧಿ ಈ ಪ್ರಶ್ನೆ ಕೇಳಿದ್ದಾರೆ.

ರಾಹುಲ್ ಗಾಂಧಿ ಅವರು ತಕ್ಷಣದ ಮತ್ತು ದೀರ್ಘಾವಧಿಯ ಕಾರ್ಯತಂತ್ರದ ಬಗ್ಗೆ ಸರ್ಕಾರವನ್ನು ಕೇಳಿದರು, ಬಾಂಗ್ಲಾದೇಶದಲ್ಲಿ ಏನಾಯಿತು ಎಂಬುದರ ಹಿಂದೆ ವಿದೇಶಿ ಕೈವಾಡವಿದೆಯೇ ಎಂದರು.

ಬಾಂಗ್ಲಾದೇಶದಲ್ಲಿ ಬದಲಾಗುತ್ತಿರುವ ಬೆಳವಣಿಗೆಗಳ ಮೇಲೆ ಸರ್ಕಾರ ಕಣ್ಣಿಟ್ಟಿದೆ. ಪಾಕಿಸ್ತಾನದ ರಾಜತಾಂತ್ರಿಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಚಳವಳಿಯ ಚಿತ್ರದೊಂದಿಗೆ ಡಿಪಿಯನ್ನು ಪೋಸ್ಟ್ ಮಾಡಿದ್ದಾರೆ, ಅದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.
ಬಾಂಗ್ಲಾದೇಶದಲ್ಲಿ ಮೀಸಲಾತಿಗಾಗಿ ನಡೆದ ಹಿಂಸಾಚಾರ ಮತ್ತು ಪ್ರತಿಭಟನೆಗಳ ನಂತರ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು.

ಮತ್ತಷ್ಟು ಓದಿ:All Party Meeting: ಹಸೀನಾ ಮೊದಲು ಚೇತರಿಸಿಕೊಳ್ಳಲಿ, ಸರ್ವಪಕ್ಷಗಳ ಸಭೆಯಲ್ಲಿ ಜೈಶಂಕರ್ ಮಾತು

ಹಸೀನಾ ಬ್ರಿಟನ್‌ನಲ್ಲಿ ಆಶ್ರಯ ಪಡೆಯುವವರೆಗೂ ಶೇಖ್ ಹಸೀನಾ ಭಾರತದಲ್ಲಿಯೇ ಇರುತ್ತಾರೆ. ಸೋಮವಾರ ಅವರ ಸರ್ಕಾರ ಪತನದ ನಂತರ ಭಾರತ ಸರ್ಕಾರವು ಮಧ್ಯಂತರ ವಲಸೆ ಅನುಮತಿಯನ್ನು ನೀಡಿದೆ.

ಬಾಂಗ್ಲಾದೇಶದ ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಭಾರತ ಸರ್ಕಾರ ಸರ್ವಪಕ್ಷ ಸಭೆಯಲ್ಲಿ ತಿಳಿಸಿದೆ. ಪ್ರಸ್ತುತ ಬಾಂಗ್ಲಾದೇಶದಲ್ಲಿ 12000 ರಿಂದ 13000 ಭಾರತೀಯರಿದ್ದಾರೆ ಎಂದು ಸರ್ಕಾರ ಹೇಳಿದೆ. ಆದರೆ, ನಮ್ಮ ನಾಗರಿಕರನ್ನು ಅಲ್ಲಿಂದ ಸ್ಥಳಾಂತರಿಸಬೇಕಾದ ಪರಿಸ್ಥಿತಿ ದೇಶದಲ್ಲಿ ಅಷ್ಟೊಂದು ಭೀಕರವಾಗಿಲ್ಲ. ಒಟ್ಟು 20,000 ಜನರು ಸಿಲುಕಿಕೊಂಡಿದ್ದಾರೆ ಎಂದು ಸರ್ಕಾರ ಹೇಳಿದೆ. ಈ ಪೈಕಿ 8000 ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರ ಬಾಂಗ್ಲಾದೇಶ ಸೇನೆಯೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದ್ದಾರೆ. ಸದ್ಯ ಅಲ್ಲಿ ಪರಿಸ್ಥಿತಿ ಅಸ್ಥಿರವಾಗಿದೆ ಎಂದರು.