AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಧಾರರಹಿತ ಹೇಳಿಕೆ; ರಾಹುಲ್ ಗಾಂಧಿಯ ಮತ ಕಳ್ಳತನದ ಆರೋಪಕ್ಕೆ ಚುನಾವಣಾ ಆಯೋಗ ತಿರುಗೇಟು

ಚುನಾವಣಾ ಆಯೋಗದ ವಿರುದ್ಧ ಬಹು ದೊಡ್ಡ ಆರೋಪ ಮಾಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಚುನಾವಣಾ ಆಯೋಗ ಮತ ಕಳ್ಳತನದಲ್ಲಿ ಭಾಗಿಯಾಗಿದೆ ಎಂದಿದ್ದರು. ಚುನಾವಣಾ ಆಯೋಗದ ವಿರುದ್ಧ ತಮ್ಮ ಬಳಿ ಆಟಂ ಬಾಂಬ್ ಇದೆ ಎಂದು ಕೂಡ ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ 'ಆಧಾರರಹಿತ ಮತ್ತು ಬೇಜವಾಬ್ದಾರಿಗಳನ್ನು ನಿರ್ಲಕ್ಷ್ಯಿಸಬೇಕು' ಎಂದು ಹೇಳಿದೆ.

ಆಧಾರರಹಿತ ಹೇಳಿಕೆ; ರಾಹುಲ್ ಗಾಂಧಿಯ ಮತ ಕಳ್ಳತನದ ಆರೋಪಕ್ಕೆ ಚುನಾವಣಾ ಆಯೋಗ ತಿರುಗೇಟು
Election Commissioner Gyanesh Kumar
ಸುಷ್ಮಾ ಚಕ್ರೆ
|

Updated on:Aug 01, 2025 | 8:27 PM

Share

ನವದೆಹಲಿ, ಆಗಸ್ಟ್ 1: ಚುನಾವಣಾ ಆಯೋಗವು ಮತ ಕಳ್ಳತನದಲ್ಲಿ ಭಾಗಿಯಾಗಿದೆ ಎಂಬುದಕ್ಕೆ ನಮ್ಮ ಬಳಿ ಪುರಾವೆಗಳಿವೆ. ಇಂತಹ ಅಕ್ರಮದಲ್ಲಿ ಚುನಾವಣಾ ಆಯೋಗದಲ್ಲಿ ಭಾಗಿಯಾಗಿರುವ ಯಾರನ್ನೂ ನಾವು ಸುಮ್ಮನೆ ಬಿಡುವುದಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಸ್ಫೋಟಕ ಹೇಳಿಕೆ ನೀಡಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, “ಪ್ರತಿದಿನ ಮಾಡಲಾಗುವ ಇಂತಹ ಆಧಾರರಹಿತ ಆರೋಪಗಳನ್ನು ಚುನಾವಣಾ ಆಯೋಗ (Election Commission) ನಿರ್ಲಕ್ಷಿಸುತ್ತದೆ. ಪದೇ ಪದೇ ಬೆದರಿಕೆಗಳ ಹೊರತಾಗಿಯೂ ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ಕೆಲಸ ಮಾಡುತ್ತಿರುವ ಎಲ್ಲಾ ಚುನಾವಣಾ ಅಧಿಕಾರಿಗಳಿಗೆ ಕೂಡ ಇಂತಹ ಹೇಳಿಕೆಯನ್ನು ನಿರ್ಲಕ್ಷಿಸುವಂತೆ ಸೂಚಿಸುತ್ತದೆ” ಎಂದು ತಿಳಿಸಿದೆ.

ಭಾರತೀಯ ಚುನಾವಣಾ ಆಯೋಗ (ECI) ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮತದಾರರ ವಂಚನೆಯ ಗಂಭೀರ ಆರೋಪವನ್ನು ದೃಢವಾಗಿ ತಿರಸ್ಕರಿಸಿದೆ. ಆ ಆರೋಪ “ಆಧಾರರಹಿತ” ಮತ್ತು “ಬೇಜವಾಬ್ದಾರಿಯುವತವಾದುದು” ಎಂದು ಆಯೋಗ ಟೀಕಿಸಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮತ ಕಳ್ಳತನಕ್ಕೆ ಇಸಿಐ ನೇರವಾಗಿ ಸಹಕರಿಸುತ್ತಿದೆ ಎಂದು ಆರೋಪಿಸಿದ್ದರು. ಇತ್ತೀಚೆಗೆ ಬಿಹಾರದಲ್ಲಿ ನಡೆಸಲಾದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಉಲ್ಲೇಖಿಸಿದ ಅವರು, ಚುನಾವಣಾ ಆಯೋಗದ ಕ್ರಮಗಳು ಆಡಳಿತಾರೂಢ ಬಿಜೆಪಿಯ ಪರವಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಚುನಾವಣಾ ಆಯೋಗ ಮತ ಕಳ್ಳತನದಲ್ಲಿ ಭಾಗಿ; ಬಿಹಾರ ಚುನಾವಣೆಗೂ ಮುನ್ನ ಆಟಂ ಬಾಂಬ್ ಹಾಕಿದ ರಾಹುಲ್ ಗಾಂಧಿ!

ವಿರೋಧ ಪಕ್ಷದ ಸ್ವತಂತ್ರ ತನಿಖೆಯು ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ (BJP) ಲಾಭವಾಗುವಂತೆ ಭಾರತದ ಚುನಾವಣಾ ಆಯೋಗವು ಬೃಹತ್ “ಮತ ಕಳ್ಳತನ”ದಲ್ಲಿ ಭಾಗಿಯಾಗಿದೆ ಎಂದು ಬಹಿರಂಗಪಡಿಸಿದೆ ಎಂದು ವಿಶೇಷ ತೀವ್ರ ಪರಿಷ್ಕರಣೆ (SIR) ಬಗ್ಗೆ ಹೆಚ್ಚುತ್ತಿರುವ ಗದ್ದಲದ ನಡುವೆ ಇಂದು ಕಾಂಗ್ರೆಸ್‌ನ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದರು. “ಮತಗಳನ್ನು ಕದಿಯಲಾಗುತ್ತಿದೆ. ಚುನಾವಣಾ ಆಯೋಗವು ಈ ಮತ ಕಳ್ಳತನದಲ್ಲಿ ಭಾಗಿಯಾಗಿದೆ ಎಂಬುದಕ್ಕೆ ನಮ್ಮ ಬಳಿ ಸ್ಪಷ್ಟ ಪುರಾವೆಗಳಿವೆ. ನಾನು ಈ ಹೇಳಿಕೆಯನ್ನು ಸುಮ್ಮನೆ ಹೇಳುತ್ತಿಲ್ಲ. ನಮ್ಮಲ್ಲಿ ಶೇ. 100ರಷ್ಟು ಪುರಾವೆಗಳಿವೆ. ನಾವು ಅದನ್ನು ಸಾರ್ವಜನಿಕಗೊಳಿಸಿದ ನಂತರ ಚುನಾವಣಾ ಆಯೋಗಕ್ಕೆ ಬಚ್ಚಿಟ್ಟುಕೊಳ್ಳಲು ಎಲ್ಲೂ ಸ್ಥಳವಿರುವುದಿಲ್ಲ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:20 pm, Fri, 1 August 25

Follow Us
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!