ಮಂಗಳಮುಖಿಯರಂತೆ ವೇಷ ಹಾಕಿ, ಭಿಕ್ಷಾಟನೆಗೆ ಇಳಿದ ಯುವಕರ ತಂಡ ಕೋಟ್ಯಂತರ ಬೆಲೆ ಬಾಳುವ ವಿಲ್ಲಾ ಖರೀದಿಸಿದರು, ಆ ಮೇಲೆ?
Transgender Begging Mafia: ಮಂಗಳಮುಖಿಯರು ನಿರುದ್ಯೋಗಿ ಮಹಿಳೆಯರು ಮತ್ತು ಯುವತಿಯರನ್ನು ಟಾರ್ಗೆಟ್ ಮಾಡಿ ಭಿಕ್ಷಾಟನೆ ಮೂಲಕ ದುಡಿಯಲು ಮುಂದಾದರು. ಕಮಿಷನ್ ಆಸೆ/ ಭರವಸೆಯೊಂದಿಗೆ ಅವರನ್ನು ಈ ಕ್ಷೇತ್ರಕ್ಕೆ ತರುತ್ತಿದ್ದರು. ಪ್ರತಿದಿನ ಬೆಳಗ್ಗೆ 9 ಗಂಟೆಗೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಭಿಕ್ಷಾಟನೆ ಕರ್ತವ್ಯಕ್ಕೆ ಹಾಜರಾಗಬೇಕು. ಹೀಗೆ ವಿಕಲಾಂಗರಿಗಾಗಿ ‘ನಿಧಿ ಸಂಗ್ರಹ‘ ಮಾಡಲು ಅವರಿಗೆ ಗುರುತಿನ ಚೀಟಿ, ಕಲೆಕ್ಷನ್ ಬಾಕ್ಸ್, ವಿಸಿಟಿಂಗ್ ಕಾರ್ಡ್ ನೀಡಿ ಜನರಿಂದ ಹಣ ಎತ್ತುವಂತೆ ಪ್ರಲೋಭೆಯೊಡ್ಡುತ್ತಿದ್ದರು.
ಹೈದರಾಬಾದ್, ಆಗಸ್ಟ್ 22: ಮುತ್ತಿನನಗರಿ ಹೈದರಾಬಾದ್ ನಲ್ಲಿ ಭಿಕ್ಷಾಟನೆ ಮಾಫಿಯಾವನ್ನು ಪೊಲೀಸರು ಅಳಿಸಿ ಹಾಕುತ್ತಿದ್ದಾರೆ. ಹೈದರಾಬಾದಿನ ಟ್ರಾಫಿಕ್ ಸಿಗ್ನಲ್ ಬಳಿ ಸ್ವಲ್ಪ ಹೊತ್ತು ನಿಂತರೆ ಮಂಗಳಮುಖಿಯರು ( Transgender), ಮಾಮೂಲಿ ಭಿಕ್ಷುಕರ ದಂಡು ಮೈತಾಗಿಸಿಕೊಂಡು, ಕಣ್ಣಿಗೆ ರಾಚುತ್ತಾರೆ… ಟ್ರಾಫಿಕ್ ಸಿಗ್ನಲ್ ನಲ್ಲಿ ಹೀಗೆ ಬಂದ ಹಣದಿಂದಲೇ ಸಹೋದರರಿಬ್ಬರು ಸಿಮಾರು 1 ಕೋಟಿ ರೂಪಾಯಿ ಬೆಲೆ ಬಾಳುವ ಜಮೀನು ಮನೆ ಖರೀದಿಸಿದ್ದಾರೆ. ಕೇತಾವತ್ ರವಿ ಮತ್ತು ಕೇತಾವತ್ ಮಂಗು ನಲ್ಗೊಂಡ ಜಿಲ್ಲೆಯ ಇಬ್ಬರು ಸಹೋದರರು. 2020ರಲ್ಲಿ ಗಡ್ಡಿ ಗಣೇಶ್ ಎಂಬ ಮತ್ತೊಬ್ಬ ವ್ಯಕ್ತಿಯ ಪರಿಚಯವಾಗಿ ಮೂವರೂ ದರೋಡೆ ಮಾಡಲು ದೊಡ್ಡ ಸ್ಕೆಚ್ ರೂಪಿಸಿದ್ದರು (Begging Mafia). ಮೂವರೂ ಸೇರಿಕೊಂಡು ಅಂಗವಿಕಲರ ರಕ್ಷಣೆ ನಿಧಿ ಸಂಗ್ರಹಕ್ಕಾಗಿ “ಅಮ್ಮ ಚೆಯಿತೊ ಫೌಂಡೇಶನ್” ಎಂಬ ಸಂಸ್ಥೆಯನ್ನು ಆರಂಭಿಸಿದರು.
ಇದಕ್ಕಾಗಿ ನಿರುದ್ಯೋಗಿ ಮಹಿಳೆಯರು ಮತ್ತು ಯುವತಿಯರನ್ನು ಟಾರ್ಗೆಟ್ ಮಾಡಿ ಭಿಕ್ಷಾಟನೆ ಮೂಲಕ ದುಡಿಯಲು ಮುಂದಾದರು. ಕಮಿಷನ್ ಆಸೆ/ ಭರವಸೆಯೊಂದಿಗೆ ಅವರನ್ನು ಈ ಕ್ಷೇತ್ರಕ್ಕೆ ತರುತ್ತಿದ್ದರು. ಪ್ರತಿದಿನ ಬೆಳಗ್ಗೆ 9 ಗಂಟೆಗೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಭಿಕ್ಷಾಟನೆ ಕರ್ತವ್ಯಕ್ಕೆ ಹಾಜರಾಗಬೇಕು. ಹೀಗೆ ವಿಕಲಾಂಗರಿಗಾಗಿ ‘ನಿಧಿ ಸಂಗ್ರಹ‘ ಮಾಡಲು ಅವರಿಗೆ ಗುರುತಿನ ಚೀಟಿ, ಕಲೆಕ್ಷನ್ ಬಾಕ್ಸ್, ವಿಸಿಟಿಂಗ್ ಕಾರ್ಡ್ ನೀಡಿ ಜನರಿಂದ ಹಣ ಎತ್ತುವಂತೆ ಪ್ರಲೋಭೆಯೊಡ್ಡುತ್ತಿದ್ದರು. ಕಾಲಾಂತರದಲ್ಲಿ ಶೇ. 35ರಷ್ಟು ಸಂಗ್ರಹವನ್ನು ಅವರಿಗೆ ನೀಡಿ, ಉಳಿದ ಹಣದಲ್ಲಿ ಐಷಾರಾಮಿ ಜಮೀನು ಖರೀದಿಸಿ ಜೀವನ ಕಳೆಯಲು ಆರಂಭಿಸಿದರು. ಆದರೆ ಎನ್ಜಿಒ ಸಂಘಟಕರು ಮತ್ತು ಪೊಲೀಸರು ಸೇರಿಕೊಂಡು ಈ ಏಜೆಂಟರನ್ನು ಬಂಧಿಸಿದರು. ಇವರೆಲ್ಲರೂ ಕೂಡ ನಲ್ಗೊಂಡ ಜಿಲ್ಲೆಗೆ ಸೇರಿದವರು ಎಂಬುದು ಈಗ ತಿಳಿದುಬಂದಿದೆ.
ಭಿಕ್ಷಾಟನೆಗಾಗಿ ಲಿಂಗ ಪರಿವರ್ತನೆ!
ಹೈದರಾಬಾದಿನ ಹಲವು ಸಿಗ್ನಲ್ ಗಳಲ್ಲಿ ಇದೇ ಪರಿಸ್ಥಿತಿ ಕಂಡು ಬರುತ್ತಿದೆ. ಅದರಲ್ಲೂ ಸಿಕಂದರಾಬಾದ್‌ನಂತಹ ಪ್ರದೇಶಗಳಲ್ಲಿ ಭಿಕ್ಷಾಟನೆ ಮಾಫಿಯಾ ಹಾವಳಿ ಹೆಚ್ಚಾಗಿದೆ. ಯಾವುದೇ ಫಂಕ್ಷನ್ ನಡೆದರೆ ತಕ್ಷಣ ಫಂಕ್ಷನ್ ಹಾಲ್ ಬಳಿ ಬಂದು ಗಲಾಟೆ ಮಾಡಿ ಲಕ್ಷಾಂತರ ರೂಪಾಯಿಗೆ ಬೇಡಿಕೆ ಇಡುತ್ತಾರೆ ಈ ತೃತೀಯಲಿಂಗಿಗಳು.. ಟ್ರಾಫಿಕ್ ಜಾಮ್, ಸಾರ್ವಜನಿಕ ಸ್ಥಳಗಳು ಅವರ ಬಂಡವಾಳ ಕಮಾಯಿ ಸ್ಥಳಗಳು…ಇದಕ್ಕಾಗಿ ಕೆಲವು ಹುಡುಗರು ತೃತೀಯಲಿಂಗಿಗಳಾಗುತ್ತಿದ್ದಾರೆ. ಮುಂದೆ ಅವರು ಜನರ ದರೋಡೆ ಮಾಡುತ್ತಾರೆ. ಟ್ರಾಫಿಕ್ ಸಿಗ್ನಲ್‌ನಲ್ಲಿ ಇವರು ಕೇಳಿದಷ್ಟು ಹಣ ನೀಡದಿದ್ದರೆ, ಅನೇಕ ಟ್ರಾನ್ಸ್‌ಜೆಂಡರ್‌ಗಳು ವಾಹನಗಳ ಮೇಲೆ ಹೋಗುವುದು, ನಿಂದನೆ ಮಾಡುವುದು, ಹಲ್ಲೆ ಮಾಡುವುದು ಇತ್ಯಾದಿ ಕುಕೃತ್ಯಗಳನ್ನು ಎಸಗುತ್ತಾರೆ.
ಇನ್ನು ಮದುವೆ ಸಮಾರಂಭದ ವೇಳೆ… ಇತ್ತೀಚೆಗೆ ಸಿಕಂದರಾಬಾದ್ ನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ತೆರಳಿ ಒಂದು ಲಕ್ಷ ರೂ. ಆಗ್ರಹಿಸಿದ್ದಾರೆ. ಮದುವೆ ಮೊನೆಯವರು 1 ಲಕ್ಷ ರೂಪಾಯಿ ನೀಡಲು ನಿರಾಕರಿಸಿದಾಗ, ಈ ಮಾಫಿಯಾ ಅಲ್ಲಿಗೆ ಹೋಗಿ ಗಲಾಟೆ ಸೃಷ್ಟಿಸಿತು. ಇವರ ಕಿರುಕುಳ ಸಹಿಸಲಾಗದೆ ಮದುವೆ ಮನೆಯವರು ಪೊಲೀಸರಿಗೆ ದೂರು ನೀಡಬೇಕಾಯಿತು. ಅನಿತಾ ಎಂಬ ಮಹಿಳೆ ರಾಜೇಶ್ ಯಾದವ್ ಜೊತೆಗೆ ಸಿಕಂದರಾಬಾದ್ ಸೈಡ್ ಬೆಗ್ಗಿಂಗ್ ಮಾಫಿಯಾವನ್ನು ಮುನ್ನಡೆಸುತ್ತಿದ್ದಳು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಇವರ ವಿರುದ್ಧ ಗೋಪಾಲಪುರಂ ಮತ್ತು ರಾಮಗೋಪಾಲ್ ಪೇಟ್ ಮಹಾಕಾಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಣ ನೀಡುವಂತೆ ಕೇಳಿದರೆ ಹಂಡ್ರೆಡ್ಗೆ ಕರೆ ಮಾಡಿ
ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸರು ಬೆಗ್ಗಿಂಗ್ ಮಾಫಿಯಾದ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ. ದಕ್ಷಿಣ ವಲಯ ಟಾಸ್ಕ್ ಫೋರ್ಸ್ ಪೊಲೀಸರು 10 ಜನರನ್ನು ಬಂಧಿಸಿದರೆ, ಉತ್ತರ ವಲಯ ಪೊಲೀಸರು ಸಿಕಂದರಾಬಾದ್‌ನಲ್ಲಿ 19 ಭಿಕ್ಷಾಟನೆ ಮಾಫಿಯಾದವರನ್ನು ಬಂಧಿಸಿದ್ದಾರೆ… ಬೆಗ್ಗಿಂಗ್ ಮಾಫಿಯಾ ವಿರುದ್ಧ ಭಾರೀ ಪ್ರಮಾಣದ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಗ್ಯಾಂಗ್ ಸದಸ್ಯರನ್ನು ವಿಶೇಷ ಡ್ರೈವ್ ಮೂಲಕ ಬಂಧಿಸಲಾಗುತ್ತಿದೆ. ಯಾರಿಗಾದರೂ ಹಣಕ್ಕಾಗಿ ಕಿರುಕುಳ ನೀಡಿದರೆ ಕೂಡಲೇ 100ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಘೋಷಿಸಿದ್ದಾರೆ. ತೃತೀಯಲಿಂಗಿಗಳು ನೇರವಾಗಿ ಮನೆಗಳಿಗೇ ಬಂದು, ಅಥವಾ ಫಂಕ್ಷನ್‌ಗಳಲ್ಲಿ ಅಥವಾ ಟ್ರಾಫಿಕ್ ಸಿಗ್ನಲ್ಗಳಲ್ಲಿ ಕಿರುಕುಳ ನೀಡಿದರೆ ತಕ್ಷಣ ತಮಗೆ ಮಾಹಿತಿ ನೀಡುವಂತೆ ಎಂದು ಸಿವಿ ಆನಂದ್ ಟ್ವೀಟ್ ಮಾಡಿ ಸೂಚಿಸಿದ್ದಾರೆ. ಇಂತಹ ಘಟನೆಗಳು ಕಂಡು ಬಂದರೆ ಕೂಡಲೇ ಸ್ಥಳೀಯ ಪೊಲೀಸರಿಗೆ 100ಕ್ಕೆ ಡಯಲ್ ಮಾಡಿ ಮಾಹಿತಿ ನೀಡಬೇಕು ಎಂದೂ ಸಿ.ವಿ.ಆನಂದ್ ತಿಳಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ