ನವದೆಹಲಿ: ವಿಮಾನದಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿಗೆ (Bangalore) ತೆರಳಬೇಕಿದ್ದ ಇಂಡಿಗೋ ವಿಮಾನವನ್ನು (Indigo Plane) ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಇಂಜಿನ್ನಲ್ಲಿ ಜ್ವಾಲೆ ಕಾಣಿಸಿಕೊಂಡ ನಂತರ ಇಂಡಿಗೋ ವಿಮಾನ 6E-2131ದಿಂದ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಈ ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಎಲ್ಲಾ 177 ಪ್ರಯಾಣಿಕರು ಮತ್ತು 7 ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ.
ತಮಗಾದ ಈ ಅನುಭವವನ್ನು ಆ ಇಂಡಿಗೋ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ, ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ವಿಮಾನ ಟೇಕಾಫ್ ಆಗುವ ಸಂದರ್ಭದಲ್ಲೇ ಬೆಂಕಿ ಕಾಣಿಸಿಕೊಂಡಿದ್ದರಿಂದ ವಿಮಾನವನ್ನು ಮತ್ತೆ ಕೆಳಗಿಳಿಸಲಾಯಿತು. ನಾನು ಟೇಕಾಫ್ ವಿಡಿಯೋ ಮಾಡಲು ಮೊಬೈಲ್ ಹೊರತೆಗೆದಿದ್ದೆ. ಆದರೆ, ನನ್ನ ಮೊಬೈಲ್ಗೆ ಸೆರೆ ಸಿಕ್ಕ ದೃಶ್ಯ ಇದು ಎಂದು ಪ್ರಯಾಣಿಕರಾದ ಪ್ರಿಯಾಂಕಾ ಕುಮಾರ್ ಟ್ವೀಟ್ ಮಾಡಿದ್ದಾರೆ.
#Breaking:#Emergency declared at Delhi airport after suspected ‘#fire’ on Bengaluru-bound #IndiGo flight #6E2131
दिल्ली से बेंगलुरु जा रही इंडिगो की फ्लाइट (6E-2131) में एक संदिग्ध चिंगारी के बाद उसे दिल्ली हवाई अड्डे पर उतारा गया है।@DCPIGI @CISFHQrs @AAI_Official @IndiGo6E pic.twitter.com/qT79Eg6zkI
— ?????? ????? ??????? (@KapilChauhan352) October 28, 2022
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪ್ರಯಾಣಿಕರು ಸಹಾಯಕ್ಕಾಗಿ ಕೂಗುತ್ತಿರುವಾಗ ವಿಮಾನದ ಇಂಜಿನ್ ಬಳಿಯ ಭಾಗಗಳಿಂದ ಬೆಂಕಿ ಹೊರಬರುವುದನ್ನು ಕಾಣಬಹುದು.
ಇದನ್ನೂ ಓದಿ: ಬೆಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ: ದಿಲ್ಲಿ ನಿಲ್ದಾಣದಲ್ಲಿ ಹೈಅಲರ್ಟ್
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಗಳು ತಕ್ಷಣ ವಿಮಾನ ನಿಲ್ದಾಣದ ನಿಯಂತ್ರಣ ಕೊಠಡಿಗೆ ಫೋನ್ ಮಾಡಿ ದೆಹಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿಸಿವೆ. ಈ ವಿಮಾನದಲ್ಲಿ 177 ಪ್ರಯಾಣಿಕರು ಮತ್ತು 7 ಸಿಬ್ಬಂದಿ ಇದ್ದರು.
An aircraft operating flight 6E-2131 (Delhi-Bangalore) experienced a technical issue while on take-off roll, immediately after which the pilot aborted the takeoff & aircraft returned to the bay. All passengers & crew are safe & an alternate aircraft is being arranged: IndiGo pic.twitter.com/rkNeRXgqbg
— ANI (@ANI) October 28, 2022
ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಈ ಘಟನೆ ನಡೆದ ತಕ್ಷಣ ಇಂಡಿಗೋ ಏರ್‌ಲೈನ್ಸ್ ಹೇಳಿಕೆ ಬಿಡುಗಡೆ ಮಾಡಿದ್ದು, “ದೆಹಲಿಯಿಂದ ಬೆಂಗಳೂರಿಗೆ ಹಾರಾಟ ನಡೆಸುತ್ತಿದ್ದ ವಿಮಾನ 6E2131 ಟೇಕ್-ಆಫ್ ರೋಲ್‌ನಲ್ಲಿದ್ದಾಗ ತಾಂತ್ರಿಕ ದೋಷವನ್ನು ಅನುಭವಿಸಿತು. ತಕ್ಷಣ ಪೈಲಟ್ ಟೇಕ್-ಆಫ್ ಅನ್ನು ಸ್ಥಗಿತಗೊಳಿಸಿದರು. ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಈ ವಿಮಾನದಲ್ಲಿದ್ದ ಪ್ರಯಾಣಿಕರಿಗಾಗಿ ಬೇರೆ ವಿಮಾನವನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ.” ಎಂದು ಹೇಳಿಕೆಯಲ್ಲಿ ತಿಳಿಸಿದೆ.
Published On - 8:24 am, Sat, 29 October 22