Video: ನಕಲಿ ಚಾಕಲೋಟ್, ನಕಲಿ ಸಾಸ್ ಅಂತೆಲ್ಲಾ ಆದ ಮೇಲೆ ಈಗ ಮಾರುಕಟ್ಟೆಗೆ ನಕಲಿ ಐಸ್ ಕ್ರೀಮ್ ಸಹ ಬಂದಿದೆ! ಹುಷಾರು
Beware of fake food: ಮನೆಯಲ್ಲಿ ಮಕ್ಕಳು ಐಸ್ ಕ್ರೀಂ.. ಐಸ್ ಕ್ರೀಂ ಹೆಸರು ಜಪಿಸುತ್ತಿದ್ದಾರಾ..? ನೀವು ಸೀದಾ ಹೋಗಿ ಅಂಗಡಿಯಲ್ಲಿ ರೆಡಿಯಾಗಿ ಇಟ್ಟಿರುವ ಸುಂದರವಾದ ಪ್ಯಾಕೇಜಿಂಗ್‌ನಲ್ಲಿ ಐಸ್ ಕ್ರೀಮ್ ಖರೀದಿಸಿ ತಂದುಬಿಡುತ್ತೀರಿ.. ನೀವು ಮಗುವಿಗೆ ಕೊಟ್ಟಿದ್ದು ಐಸ್ ಕ್ರೀಮ್ ಅಲ್ಲ.. ಅದು ವಿಷ ಅಷ್ಟೇ!
ಐಸ್ ಕ್ರೀಮ್ ಅಂದ್ರೆ ಪರಿಶುದ್ಧವಾದ, ಗಟ್ಟಿ ಹಾಲಿನಿಂದ (Milk) ಮಾಡಿದ ತಂಪಾದ ಸಿಹಿ ಪದಾರ್ಥ ಅಂತಾ ಭಾವಿಸಿ ಮುದುಕರಾದಿಯಾಗಿ ಮಕ್ಕಳು ತಿನ್ನುತ್ತಾರೆ. ಆದರೆ ಇನ್ನು ಹುಷಾರು! ನಕಲಿ ಚಾಕಲೋಟ್, ನಕಲಿ ಸಾಸ್ ಅಂತೆಲ್ಲಾ ನಕಲಿಗಳದ್ದೇ ಸಾಮ್ರಾಜ್ಯ ಆಗಿರುವಾಗ ಈಗ ನಕಲಿ ಐಸ್ಕ್ರೀಮ್ ಸಹ ಮಾರುಕಟ್ಟೆಗೆ ಬಂದುಬಿಟ್ಟಿದೆ. ಕೆಮಿಕಲ್ಸ್ನಿಂದ ತಯಾರಿಸಿದ ನಕಲಿ ಐಸ್ ಕ್ರೀಮ್ ಈಗ ಮಾರುಕಟ್ಟೆಯಲ್ಲಿ ಹೇರಳವಾಗಿ ಸಿಗುತ್ತಿದೆ, ಎಚ್ಚರಾ! ಮಕ್ಕಳು ಐಸ್ ಕ್ರೀಂ ಕೇಳಿದರೆ ಹಿಂದೆಮುಂದೆ ನೋಡದೆ ಖರೀದಿಸಿ ಕೊಡುತ್ತಿದ್ದೀರಾ? ಆದರೆ ಎಚ್ಚರ, ಅದು ವಿಷವೂ ಆಗಬಹುದು! ಇದು ಬೇಸಿಗೆ, ರಣ ಬಿಸಿಲು ಕಾಡುತ್ತಿದೆ.. ಮಕ್ಕಳು ಐಸ್ ಕ್ರೀಂ ಕೇಳಿದ ತಕ್ಷಣ ಖರೀದಿಸಿ ಕೊಡುತ್ತಿದ್ದೀರಿ? ಆದರೆ ಆತುರ ಬೇಡ. ಹಾಗೆ ಮಾಡಬೇಡಿ. ಈ ಸುದ್ದಿ ನಿಮ್ಮನ್ನು ಚಿಂತೆಗೀಡುಮಾಡುವುದು ಖಚಿತ. ಎಕೆಂದರೆ ಮಕ್ಕಳು ತಿನ್ನುವ ಐಸ್ ಕ್ರೀಮ್ ಕೂಡ ಕಲಬೆರಕೆಯಾಗಿದೆ (Adulteration In Ice Cream). ಇತ್ತೀಚೆಗಷ್ಟೇ ಆಂಧ್ರ ಪೊಲೀಸರು ಇಂತಹ ಐಸ್ ಕ್ರೀಮ್ ತಯಾರಿಕಾ ಘಟಕದ ಮೇಲೆ ದಾಳಿ ಮಾಡಿದಾಗ ಈ ಆಘಾತಕಾರಿ ಸಂಗತಿ ಬಹಿರಂಗವಾಗಿದೆ (Duplicate Food).
ನಿಮ್ಮ ಮಕ್ಕಳ ಬಗ್ಗೆ ನೀವು ಸ್ವಲ್ಪ ಗಮನ ಕೊಡಬೇಕಾದ ಸಮಯ ಈಗ ಬಂದಿದೆ.. ಮನೆಯಲ್ಲಿ ಮಕ್ಕಳು ಐಸ್ ಕ್ರೀಂ.. ಐಸ್ ಕ್ರೀಂ ಹೆಸರು ಜಪಿಸುತ್ತಿದ್ದಾರಾ..? ನೀವು ಸೀದಾ ಹೋಗಿ ಅಂಗಡಿಯಲ್ಲಿ ರೆಡಿಯಾಗಿ ಇಟ್ಟಿರುವ ಸುಂದರವಾದ ಪ್ಯಾಕೇಜಿಂಗ್‌ನಲ್ಲಿ ಐಸ್ ಕ್ರೀಮ್ ಖರೀದಿಸಿ ತಂದುಬಿಡುತ್ತೀರಿ.. ಆ ಕ್ಷಣಕ್ಕೆ ನಿಮ್ಮ ಜವಾಬ್ದಾರಿ ಮುಗಿಯಿತು ಅಂತಾ ನಿಟ್ಟುಸಿರುಬಿಡ್ತೀರಾ! ಅದು ಆ ಕ್ಷಣಕ್ಕೆ ನಿಮಗೆ ಸಿಕ್ಕಿದ ಕ್ಷಣಿಕ ಪರಿಹಾರ ಇಬಹುದು. ಆದರೆ.. ನೀವು ಮಗುವಿಗೆ ಕೊಟ್ಟಿದ್ದು ಐಸ್ ಕ್ರೀಮ್ ಅಲ್ಲ.. ಅದು ವಿಷ ಅಷ್ಟೇ!
ಹೈದರಾಬಾದ್ ನಲ್ಲಿ ಇತ್ತೀಚೆಗಷ್ಟೇ ನಕಲಿ ಚಾಕಲೇಟ್ ಪ್ರಕರಣ ಕೇಳಿದ್ದಿರಿ. ಇದೀಗ ನಕಲಿ ಐಸ್ ಕ್ರೀಮ್ ಗಳು ಬಯಲಿಗೆ ಬಂದಿವೆ. ನಕಲಿ ಐಸ್ ಕ್ರೀಂ ತಯಾರಿಕಾ ಕೇಂದ್ರದ ಮೇಲೆ ಎಸ್ ಒಟಿ ಮಾದಾಪುರ ಪೊಲೀಸರು ದಾಳಿ ನಡೆಸಿ ಶ್ರೀನಿವಾಸ್ ರೆಡ್ಡಿ ಎಂಬಾತನನ್ನು ಬಂಧಿಸಿದ್ದಾರೆ. ಆತಂಕಕಾರಿ ಸಂಗತಿ ಎಂದರೆ ಈ ಶ್ರೀನಿವಾಸ ರೆಡ್ಡಿ ಐದು ವರ್ಷಗಳಿಂದ ಯಾವುದೇ ಪರವಾನಗಿ ಇಲ್ಲದೆ ಐಸ್ ಕ್ರೀಮ್ ತಯಾರಿಸುತ್ತಿದ್ದಾನಂತೆ.
ಎಸ್‌ಒಟಿ ಪೊಲೀಸರು ಐಸ್‌ಕ್ರೀಂ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ ಹತ್ತು ಲಕ್ಷ ರೂಪಾಯಿ ಮೌಲ್ಯದ ನಕಲಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಹಲವಾರು ಲೀಟರ್ ರಾಸಾಯನಿಕ ಬಾಟಲಿಗಳು ಮತ್ತು ಬಣ್ಣದ ಕ್ಯಾನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಗ್ಲೂಕೋಸ್ ಲಿಕ್ವಿಡ್, ಸಿಟ್ರಿಕ್ ಆಸಿಡ್ ಪೌಡರ್, ಆರೆಂಜ್ ಲಿಕ್ವಿಡ್ ಫ್ಲೇವರ್, ಪಾಲಿಶ್ ಪೌಡರ್ ಮತ್ತು ಸ್ವೀಟ್ ಆಯಿಲ್ ಮುಂತಾದ ರಾಸಾಯನಿಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿ ತಯಾರಾಗುವ ಐಸ್ ಕ್ರೀಂ, ಚಾಕಲೇಟ್‌ಗಳನ್ನು ಬೇಗಂಬಜಾರ್‌ನಲ್ಲಿರುವ ಸಗಟು ವ್ಯಾಪಾರಿಗಳಿಗೆ ಮಾರಾಟ ಮಾಡಲಾಗುತ್ತದೆ. ಅಲ್ಲಿಂದ ನಗರದ ಹಲವು ಸಣ್ಣ ಅಂಗಡಿಗಳಿಗೆ ಇದು ಸರಬರಾಜು ಆಗುತ್ತದೆ. ಜೊತೆಗೆ ನೆರೆಯ ರಾಜ್ಯಗಳಿಗೂ ಪೂರೈಕೆಯಾಗುತ್ತಿದೆ.
ಮೊನ್ನೆ ನಕಲಿ ಚಾಕಲೇಟುಗಳು.. ಇಂದು ನಕಲಿ ಐಸ್ ಕ್ರೀಂಗಳು. ನಾಗರಿಕ ಸಮಾಜದಲ್ಲಿ ಏನಾಗುತ್ತಿದೆ? ಜನರ ಪ್ರಾಣವನ್ನು ಪಣಕ್ಕಿಡುವುದು ವ್ಯಾಪಾರವೇ? ವರ್ಷಗಳಿಂದ ನಡೆಯುತ್ತಿರುವ ದಂಧೆ ಅಧಿಕಾರಿಗಳಿಗೆ ಕಾಣುತ್ತಿಲ್ಲವೇ? ಸೈಲೆಂಟ್ ಕಿಲ್ಲರ್ಗಳ ಜಾಲ ಇನ್ನೂ ವ್ಯಾಪಕವಾಗಿ ಬೆಳೆಯುತ್ತಿದೆಯೇ?
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:30 pm, Fri, 14 April 23