ಶ್ರೀಲಂಕಾಗೆ ಹೋಗುತ್ತಿದ್ದ 120ಕ್ಕಿಂತಲೂ ಹೆಚ್ಚು ವಿಮಾನಗಳು ಕೇರಳದಲ್ಲಿ ಲ್ಯಾಂಡಿಂಗ್

ಕೇಂದ್ರ ವಾಯುಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಶ್ರೀಲಂಕಾಕ್ಕೆ ಸಹಾಯ ಮಾಡಿದ್ದಕ್ಕೆ ತ್ರಿವೇಂಡ್ರಂ ಮತ್ತು ಕೊಚ್ಚಿ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಶ್ಲಾಘಿಸಿದ್ದಾರೆ. ಈ ವಿಮಾನ ನಿಲ್ದಾಣಗಳು ಶ್ರೀಲಂಕಾಕ್ಕೆ ಹೋಗುತ್ತಿದ್ದ...

ಶ್ರೀಲಂಕಾಗೆ ಹೋಗುತ್ತಿದ್ದ 120ಕ್ಕಿಂತಲೂ ಹೆಚ್ಚು ವಿಮಾನಗಳು ಕೇರಳದಲ್ಲಿ ಲ್ಯಾಂಡಿಂಗ್
ತ್ರಿವೇಂಡ್ರಂ ವಿಮಾನ ನಿಲ್ದಾಣ
Edited By:

Updated on: Jul 13, 2022 | 6:13 PM

ತಿರುವನಂತಪುರಂ: ಶ್ರೀಲಂಕಾ (Sri Lanka) ಅಧ್ಯಕ್ಷ ಗೊಟಬಯ ರಾಜಪಕ್ಸ ಮಾಲ್ಡೀವ್ಸ್​​ಗೆ ಪಲಾಯನ ಮಾಡಿದ್ದಾರೆ. ಇತ್ತ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ  ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಶ್ರೀಲಂಕಾದಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದ್ದು, ಅಗತ್ಯ ಸಮಯಗಳಲ್ಲಿ ನಾನು ದ್ವೀಪ ರಾಷ್ಟ್ರಕ್ಕೆ ಸಹಾಯ ಮಾಡುವುದಾಗಿ ಭಾರತ ಹೇಳಿದೆ. ಕೇಂದ್ರ ವಾಯುಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia )ಅವರು ಶ್ರೀಲಂಕಾಕ್ಕೆ ಸಹಾಯ ಮಾಡಿದ್ದಕ್ಕೆ ತ್ರಿವೇಂಡ್ರಂ (Trivandrum) ಮತ್ತು ಕೊಚ್ಚಿ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಶ್ಲಾಘಿಸಿದ್ದಾರೆ. ಈ ವಿಮಾನ ನಿಲ್ದಾಣಗಳು ಶ್ರೀಲಂಕಾಕ್ಕೆ ಹೋಗುತ್ತಿದ್ದ 120ಕ್ಕಿಂತಲೂ ಹೆಚ್ಚು ವಿಮಾನಗಳಿಗೆ ತಾಂತ್ರಿಕ ಲ್ಯಾಂಡಿಂಗ್ ಮಾಡಲು ಅನುಮತಿಸಿವೆ. ಈ ಸಹಾಯವು ನೆರೆರಾಷ್ಟ್ರದೊಂದಿಗಿನ ನಮ್ಮ ಸಂಬಂಧವನ್ನು ಮತ್ತಷ್ಟು ಗಾಢಗೊಳಿಸುತ್ತದೆ ಎಂದು ಸಿಂಧಿಯಾ ಟ್ವೀಟ್ ಮಾಡಿದ್ದಾರೆ.


ಶ್ರೀಲಂಕಾ ಫೆಬ್ರುವರಿಯಿಂದ ಡೀಸೆಲ್ ಕೊರತೆ ಅನುಭವಿಸುತ್ತಿದೆ. ಇದರಿಂದಾಗಿ ಪ್ರತಿದಿನ ಪವರ್ ಕಟ್ ಇರುತ್ತಿತ್ತು. ಪ್ರಸ್ತುತ ಶ್ರೀಲಂಕಾ ಆಹಾರ ಮತ್ತು ವಿದ್ಯುತ್ ಕೊರತೆ ಅನುಭವಿಸುತ್ತಿದ್ದು,ನೆರೆ ರಾಷ್ಟ್ರಗಳಿಂದ ಸಹಾಯ ಯಾಚಿಸುವಂತಾಗಿದೆ.

Published On - 6:08 pm, Wed, 13 July 22