ಭಾರತ್ ಬಯೋಟೆಕ್​ಗೆ ವಿದೇಶಿ ಪ್ರತಿನಿಧಿಗಳ ಭೇಟಿ.. ಲಸಿಕೆ ತುರ್ತು ಬಳಕೆ, ಅನುಮತಿ ನಿರಾಕರಿಸಿದ ಕೇಂದ್ರ ಸರ್ಕಾರ

ಇನ್ನೇನು ಭಾರತದಲ್ಲೂ ಕೊರೊನಾ ಲಸಿಕೆ ಸಿಗುವ ನಿರೀಕ್ಷೆಗಳು ಹೆಚ್ಚಾಗಿವೆ. ಈಗಾಗ್ಲೇ ರಷ್ಯಾ ಹಾಗೂ ಇಂಗ್ಲೆಂಡ್​ನಲ್ಲಿ ಸಾಮೂಹಿಕ ಲಸಿಕೆ ವಿತರಣೆ ಕಾರ್ಯ ಜಾರಿಯಾಗಿದ್ದು, ಭಾರತದಲ್ಲೂ ಯೋಜನೆ ಘೋಷಣೆಯಾಗುವ ಟೈಂ ಹತ್ತಿರ ಬಂದಿದೆ. ಈ ಹೊತ್ತಲ್ಲೇ ವಿದೇಶದಿಂದ ಆಗಮಿಸಿದ 60 ಸದಸ್ಯರ ನಿಯೋಗ, ಹೈದರಾಬಾದ್ನ ಭಾರತ್ ಬಯೋಟೆಕ್​ಗೆ ಭೇಟಿ ನೀಡಿರುವುದು ಕುತೂಹಲ ಹೆಚ್ಚುವಂತೆ ಮಾಡಿದೆ.

ಭಾರತ್ ಬಯೋಟೆಕ್​ಗೆ ವಿದೇಶಿ ಪ್ರತಿನಿಧಿಗಳ ಭೇಟಿ.. ಲಸಿಕೆ ತುರ್ತು ಬಳಕೆ, ಅನುಮತಿ ನಿರಾಕರಿಸಿದ ಕೇಂದ್ರ ಸರ್ಕಾರ
Follow us
ಆಯೇಷಾ ಬಾನು
|

Updated on:Dec 10, 2020 | 7:51 AM

ಕ್ರೂರಿ ಕೊರೊನಾಗೆ ದೇಶೀ ಮಟ್ಟದಲ್ಲೇ ವ್ಯಾಕ್ಸಿನ್ ಡೆವಲಪ್ ಮಾಡ್ತಾ ಇರೋ ತೆಲಂಗಾಣ ರಾಜ್ಯದ ಭಾರತ್ ಬಯೋಟೆಕ್ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ವ್ಯಾಕ್ಸಿನ್ ಕೂಡ ಇನ್ನೇನು ಅಪ್ರೂವ್ ಆಗುವ ಹಂತದಲ್ಲಿದ್ದು, ಭಾರಿ ಕುತೂಹಲ ಕೆರಳಿಸಿದೆ. ಈ ಹೊತ್ತಲ್ಲೇ ವಿದೇಶಿ ನಿಯೋಗ ನಿನ್ನೆ ಭಾರತ್ ಬಯೋಟೆಕ್​ಗೆ ವಿಸಿಟ್ ಕೊಟ್ಟು ಪರಿಶೀಲಿಸಿದೆ.

ಭಾರತ್ ಬಯೋಟೆಕ್​ಗೆ ಭೇಟಿ ನೀಡಿದ ನಂತರ ವಿದೇಶಿ ಪ್ರತಿನಿಧಿಗಳು ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಕಮೀಷನರ್ ಸೇರಿದಂತೆ ಇನ್ನಿತರರ ಜೊತೆಗೆ ಚರ್ಚಿಸಿದ್ರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ ಕುಮಾರ್ ಫಾರ್ಮಾ ಕಂಪನಿಗಳು ಅಭಿವೃದ್ಧಿಪಡಿಸಿದ ವ್ಯಾಕ್ಸಿನ್ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ನೀಡಿದ್ರು.

ಒಂದ್ಕಡೆ ಸಂಭ್ರಮ, ಮತ್ತೊಂದ್ಕಡೆ ಶಾಕ್! ಭಾರತ್ ಬಯೋಟೆಕ್​ಗೆ ಭೇಟಿ ನೀಡಿ ಚರ್ಚಿಸಿದ ವಿದೇಶಿ ಪ್ರತಿನಿಧಿಗಳು ಕೊರೊನಾ ವ್ಯಾಕ್ಸಿನ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ರು. ನಂತರ ಸರ್ಕಾರದಿಂದ ಸಹ ಲಸಿಕೆ ತಯಾರಿಕೆ ಕುರಿತಂತೆ ಮಾಹಿತಿ ಸಂಗ್ರಹಿಸಿದ್ರು. ಈ ಮಧ್ಯೆ ಕೇಂದ್ರ ಸರ್ಕಾರ ಭಾರತ್ ಬಯೋಟೆಕ್​ಗೆ ಶಾಕ್ ನೀಡಿದೆ. ಭಾರತ್ ಬಯೋಟೆಕ್ ಲಸಿಕೆ ತುರ್ತು ಬಳಕೆ ಸಂಬಂಧ ಸುರಕ್ಷತೆ ಹಾಗೂ ಸರಿಯಾದ ಮಾಹಿತಿ ಇಲ್ಲ ಎಂಬ ಕಾರಣಕ್ಕೆ ಅನುಮತಿ ನಿರಾಕರಿಸಿದ್ದು, ಸಂಭ್ರಮದ ಜೊತೆ ಶಾಕ್ ನೀಡಿದೆ.

ಒಟ್ನಲ್ಲಿ ವ್ಯಾಕ್ಸಿನ್ ಸಿಗುವ ಭರವಸೆಯಲ್ಲಿರುವ ದೇಶದ ನಾಗರಿಕರಿಗೆ ಒಂದಷ್ಟು ನಿರಾಸೆಯಾಗಿದೆ. ಸದ್ಯಕ್ಕೆ ಕೇಂದ್ರ ದೇಶೀ ವ್ಯಾಕ್ಸಿನ್​ಗಳಿಗೆ ಅಪ್ರೂವ್ ನೀಡಿಲ್ಲವಾದರೂ, ಅವುಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದೆ. ಹೀಗಾಗಿ ಸದ್ಯ ಪರಿಶೀಲನೆಗಳು ಸಾಗಿದ್ದು, ಸದ್ಯದಲ್ಲೇ ವ್ಯಾಕ್ಸಿನ್ ಬಳಕೆಗೆ ಅನುಮತಿ ಸಿಗುವ ಸಾಧ್ಯತೆ ದಟ್ಟವಾಗಿದೆ.

Corona Vaccine Trial: ಎರಡನೇ ಹಂತದ ಪ್ರಯೋಗಕ್ಕೆ ಆರು ಸ್ವಯಂಸೇವಕರು ಗೈರು

Published On - 7:50 am, Thu, 10 December 20

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ