ಆತ್ಮನಿರ್ಭರ ಭಾರತ್: ಉದ್ಯೋಗ ಅವಕಾಶ ಹೆಚ್ಚಳಕ್ಕೆ ಕೇಂದ್ರದ ಯೋಜನೆ
ಈ ಯೋಜನೆಯ ಮೂಲಕ ಹೊಸ ಉದ್ಯೋಗ ಸೃಷ್ಟಿ ಮತ್ತು ಮತ್ತು ಉದ್ಯೋಗ ಅವಕಾಶ ಹೆಚ್ಚಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯಿಂದ 58.5 ಲಕ್ಷ ಜನರಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ.
ದೆಹಲಿ: ಆತ್ಮನಿರ್ಭರ ಭಾರತ್ ರೋಜಗಾರ್ ಯೋಜನೆಯ(ABRY) ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ ₹1,584 ಕೋಟಿ ವೆಚ್ಚ ಮಾಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಈ ಮೂಲಕ, ಕೊವಿಡ್ ಕಡಿಮೆಯಾಗುತ್ತಿರುವ ಹಂತದಲ್ಲಿ ಹೊಸ ಉದ್ಯೋಗ ಸೃಷ್ಟಿ ಮತ್ತು ಮತ್ತು ಉದ್ಯೋಗ ಅವಕಾಶ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ. ಈ ಯೋಜನೆಯಿಂದ 58.5 ಲಕ್ಷ ಜನರಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು, 2020-23ನೇ ವರ್ಷದವರೆಗೆ 22,810 ಕೋಟಿ ರೂಪಾಯಿ ವೆಚ್ಚ ಮಾಡಲು ಒಪ್ಪಿಗೆ ಸೂಚಿಸಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ 1,584 ಕೋಟಿ ರೂಪಾಯಿ ವೆಚ್ಚಕ್ಕೆ ಅನುಮತಿ ನೀಡಿದೆ.
Union Cabinet has approved Atmanirbhar Bharat Rojgar Yojana at an expenditure of Rs. 1,584 crores for the current financial year and Rs.22,810 crores for the entire Scheme period i.e. 2020-2023; scheme to benefit around 58.5 lakh employees
— ANI (@ANI) December 9, 2020
ಲಕ್ಷದ್ವೀಪದಲ್ಲಿ ನೆಲದಡಿ ಕೇಬಲ್ ಸಂಪರ್ಕ ನೀಡಲು ₹ 1,072 ಕೋಟಿ ರೂಪಾಯಿ ವೆಚ್ಚಕ್ಕೆ ಅನುಮತಿ ನೀಡಿರುವ ಸರ್ಕಾರ, ಕೊಚ್ಚಿ- ಲಕ್ಷದ್ವೀಪದ ನಡುವೆ ಸಮುದ್ರದಡಿ ಫೈಬರ್ ಕೇಬಲ್ ಸಂಪರ್ಕ ನೀಡಲು ಒಪ್ಪಿಗೆ ಸೂಚಿಸಿದೆ. ಅಸ್ಸಾಂ- ಅರುಣಾಚಲ ಪ್ರದೇಶದಲ್ಲಿ 1,533 ಮೊಬೈಲ್ ಟವರ್ ಹಾಕಲು ಯೋಜನೆ ಹಾಕಿಕೊಂಡಿದೆ. ಈ ಮೂಲಕ ಡಿಜಿಟಲ್ ಇಂಡಿಯಾಕ್ಕೆ ಒತ್ತು ನೀಡಲು ತೀರ್ಮಾನಿಸಲಾಗಿದೆ.
Cabinet approved Submarine Optical Fibre Cable Connectivity project between mainland (Kochi) and 11 Islands of Lakshadweep which will be implemented at a cost of Rs.1072 Crore within 1000 days. This shows our commitment to connect islands of India. pic.twitter.com/nsTKPg0in9
— Ravi Shankar Prasad (@rsprasad) December 9, 2020
Published On - 7:43 pm, Wed, 9 December 20