AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಸಂಶೋಧನೆ: ನಿಮ್ಮ ಮೊಬೈಲ್​ ಮೂಲಕ ಐದೇ ನಿಮಿಷದಲ್ಲಿ ಕೊರೊನಾ ಸೋಂಕು ಪತ್ತೆ ಸಾಧ್ಯ

ಎಲೆಕ್ಟ್ರೋ ಕೆಮಿಕಲ್ ಸಂವೇದಕಗಳ ಮೂಲಕ ದೇಹದಲ್ಲಿ ಕೊರೊನಾ ಸೋಂಕನ್ನು ಇದು ಶೀಘ್ರ ಪತ್ತೆಹಚ್ಚಲಿದೆ.

ಹೊಸ ಸಂಶೋಧನೆ: ನಿಮ್ಮ ಮೊಬೈಲ್​ ಮೂಲಕ ಐದೇ ನಿಮಿಷದಲ್ಲಿ ಕೊರೊನಾ ಸೋಂಕು ಪತ್ತೆ ಸಾಧ್ಯ
ಪ್ರಾತಿನಿಧಿಕ ಚಿತ್ರ
sandhya thejappa
sandhya thejappa| Edited By: |

Updated on:Dec 09, 2020 | 10:09 PM

Share

ವಾಷಿಂಗ್​ಟನ್: ಭಾರತೀಯ ಮೂಲದ ವಿಜ್ಞಾನಿ ನೇತೃತ್ವದ ತಂಡ ಕೇವಲ ಐದೇ ನಿಮಿಷಗಳಲ್ಲಿ ಕೋವಿಡ್-19 ಪತ್ತೆಹಚ್ಚುವ ವಿಧಾನವೊಂದನ್ನು ಆವಿಷ್ಕರಿಸಿದೆ. ಎಲೆಕ್ಟ್ರೋ ಕೆಮಿಕಲ್ ಸಂವೇದಕಗಳ ಮೂಲಕ ದೇಹದಲ್ಲಿ ಕೊರೊನಾ ಸೋಂಕನ್ನು ಇದು ಶೀಘ್ರ ಪತ್ತೆಹಚ್ಚಲಿದೆ.

ಅಮೆರಿಕದ ಇಲಿನೊಯಿಸ್ ವಿಶ್ವವಿದ್ಯಾಲಯಗಳ ಸಂಶೋಧಕರು ಗ್ರಾಫೀನ್ ಧಾತುವಿನ ಎಲೆಕ್ಟ್ರೋಕೆಮಿಕಲ್ ಬಯೋಸೆನ್ಸಾರ್​ಗಳನ್ನ ಅಭಿವೃದ್ಧಿಪಡಿಸಿದ್ದಾರೆ. ಈ ಸಂವೇದಕಗಳು ಕೋವಿಡ್-19 ರೋಗ ತರುವ SARS-CoV-2 ವೈರಾಣು ಉಪಸ್ಥಿತಿಯನ್ನು ಪತ್ತೆಹಚ್ಚುತ್ತದೆ.

ಈ ಸಂಶೋಧನಾ ಪ್ರಬಂಧವು ಅಮೆರಿಕದ ಪ್ರತಿಷ್ಠಿತ ನಿಯತಕಾಲಿಕೆ ಎಸಿಎಸ್ ನ್ಯಾನೊದಲ್ಲಿ ಪ್ರಕಟವಾಗಿದೆ. ಈ ಬಯೊಸೆನ್ಸಾರ್​ನಲ್ಲಿ ಎಲೆಕ್ಟ್ರಿಕಲ್ ದತ್ತಾಂಶಗಳನ್ನು ಅಳೆಯುವ ತಳಹದಿ ಮತ್ತು ಅದರ ಮೂಲಕ ವೈರಾಣುವಿನ ಉಪಸ್ಥಿತಿಯನ್ನು ವಿಶ್ಲೇಷಿಸಬಲ್ಲ ಕೋಡ್​ ಈ ಸೆನ್ಸಾರ್​ನಲ್ಲಿವೆ.

ಪ್ರಾಧ್ಯಾಪಕ ದಿಪಾನ್​ಜನ್ ಪಾನ್ ರೂಪಿಸಿರುವ ಈ ತಂತ್ರಜ್ಞಾನ ಹಲವರ ಗಮನ ಸೆಳೆದಿದೆ. ಫಿಲ್ಟರ್​ ಪೇಪರ್​ ಮೇಲೆ ಗ್ರಾಫೀನ್​ನ ಅತಿಸೂಕ್ಷ್ಮ ಕಣಗಳನ್ನು (nanoplatelets) ಲೇಪಿಸಿ, ಕಂಡಕ್ಟೀವ್ ಫಿಲ್ಮ್​ ಮಾದರಿಯ ತಳಹದಿ ರೂಪಿಸಿಕೊಳ್ಳುವುದು ಈ ಬಯೋಸೆನ್ಸಾರ್ ನಿರ್ಮಾಣದ ಮೊದಲ ಹಂತ. ಇದರ ಮೇಲೆ ಚಿನ್ನದ ಎಲೆಕ್ಟ್ರೋಡ್​ಗಳನ್ನು ಕೂರಿಸಲಾಗುತ್ತದೆ.

ವಿಜ್ಞಾನಿ ದಿಪಾನ್​ಜನ್ ಪಾನ್

ಚಿನ್ನ ಮತ್ತು ಗ್ರಾಫೀನ್​ಗಳ ಅತಿಸೂಕ್ಷ್ಮ ಸಂವೇದನಾ ಸಾಮರ್ಥ್ಯ ಹೊಂದಿವೆ. ಹೀಗಾಗಿ ಕೊರೊನಾ ಸೋಂಕು ಹರಡುವ SARS-CoV-2 ವೈರಾಣುವಿನಲ್ಲಿರುವ ಎನ್​-ಜೀನ್​ ಪ್ರೋಟೀನ್​ಗಳಿಗೆ ಇವು ಸ್ಪಂದಿಸುತ್ತವೆ. ಅವುಗಳ ಉಪಸ್ಥಿತಿಯನ್ನು ಸಾರಿಹೇಳುತ್ತವೆ. ಕೋವಿಡ್-19 ಪಾಸಿಟಿವ್ ಮತ್ತು ನೆಗೆಟಿವ್ ಮಾದರಿಗಳ ಮೇಲೆ ಈ ಸೆನ್ಸಾರ್​ಗಳನ್ನು ತಂಡ ಪ್ರಯೋಗಿಸಿ ಯಶಸ್ವಿಯಾಗಿದೆ.

ಪಾಸಿಟಿವ್ ಮಾದರಿಗಳ ತಪಾಸಣೆ ವೇಳೆ ವೋಲ್ಟೇಜ್​ನಲ್ಲಿ ಗಮನಾರ್ಹ ಪ್ರಮಾಣದ ಏರಿಕೆ ದಾಖಲಾಗಿದೆ. ಕೇವಲ 5 ನಿಮಿಷಗಳಲ್ಲಿ ಫಲಿತಾಂಶ ಸಿಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅತ್ಯಂತ ಸುಲಭವಾಗಿ ಸಾಗಿಸಬಹುದಾದ ಮತ್ತು ಅತಿಕಡಿಮೆ ವೆಚ್ಚದ ಈ ಸೆನ್ಸಾರ್​​ಗಳನ್ನು ಬ್ಲೂಟೂತ್​ ಅಥವಾ ವೈಫೈ ಮೂಲಕ ಸ್ಮಾರ್ಟ್​ಫೋನ್​ಗಳಿಗೆ ಸಂಪರ್ಕಿಸಬಹುದು. ವೈದ್ಯರ ಕ್ಲಿನಿಕ್​ಗಳು ಅಥವಾ ಮನೆಯಲ್ಲಿಯೂ ಬಳಸಬಹುದು. ಕೋವಿಡ್-19ರ ಜೊತೆಗೆ ಇತರ ರೋಗಗಳನ್ನು ಪತ್ತೆಹಚ್ಚುವ ಸಾಧ್ಯತೆಯನ್ನೂ ವೈದ್ಯರ ತಂಡ ಪರಿಶೀಲಿಸುತ್ತಿದೆ.

Explainer | ಫೈಝರ್ ಲಸಿಕೆ ಹಾಕಿಸಿಕೊಂಡವರು ಕೊರೊನಾ ಸೋಂಕಿನಿಂದ ಎಷ್ಟು ಸೇಫ್?

Published On - 10:01 pm, Wed, 9 December 20

Follow Us
sandhya thejappa
sandhya thejappa
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ