ಭಾರತ್ ಬಯೋಟೆಕ್, ಸೆರಮ್ ಇನ್​ಸ್ಟಿಟ್ಯೂಟ್ ಲಸಿಕೆಗೆ ಅನುಮತಿ ಇಲ್ಲ ಎಂಬ ಸುದ್ದಿ ನಿಜವೇ?

ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಸಲ್ಲಿಸಿದ್ದ ಮನವಿ ತಿರಸ್ಕೃತಗೊಂಡಿದೆ ಎಂಬ ಸುದ್ದಿ ನಿಜವಲ್ಲ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ.

ಭಾರತ್ ಬಯೋಟೆಕ್, ಸೆರಮ್ ಇನ್​ಸ್ಟಿಟ್ಯೂಟ್ ಲಸಿಕೆಗೆ ಅನುಮತಿ ಇಲ್ಲ ಎಂಬ ಸುದ್ದಿ ನಿಜವೇ?
ಸಾಂದರ್ಭಿಕ ಚಿತ್ರ
Follow us
Skanda
|

Updated on:Dec 10, 2020 | 10:16 AM

ದೆಹಲಿ: ಎರಡು ಭಾರತೀಯ ಸಂಸ್ಥೆಗಳು ಕೊವಿಡ್​ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಸಲ್ಲಿಸಿದ್ದ ಮನವಿ ತಿರಸ್ಕೃತಗೊಂಡಿದೆ ಎಂಬ ಸುದ್ದಿ ನಿಜವಲ್ಲ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ. ಭಾರತ್ ಬರೋಟೆಕ್ ಮತ್ತು ಸೆರಮ್​ ಇನ್​ಸ್ಟಿಟ್ಯೂಟ್ ಸಂಸ್ಥೆಗಳು ಲಸಿಕೆಯ ತುರ್ತು ವಿತರಣೆಗೆ ಅನುಮತಿ ಕೇಳಿದ್ದವು.

ಪರೀಕ್ಷೆಯ ವೇಳೆ ಮಾಹಿತಿಯ ಕೊರತೆ ಮತ್ತು ಸುರಕ್ಷತೆಯ ಬಗ್ಗೆ ಅನುಮಾನ ಮೂಡಿದ ಕಾರಣ ಅವುಗಳನ್ನು ತಿರಸ್ಕರಿಸಲಾಗಿದೆ ಎಂದು ತಜ್ಞರು ಹೇಳಿದ್ದಾರೆ ಎಂಬುದಾಗಿ ಬುಧವಾರ ಸಂಜೆ ಕೆಲ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು. ಇದು ನಿಜವಲ್ಲ ಎಂದು ಆರೋಗ್ಯ ಸಚಿವಾಲಯ ಟ್ವೀಟ್ ಮಾಡಿದೆ. ಬದಲಾಗಿ ಬಳಕೆಗೆ ಅನುಮತಿ ನೀಡಲು ಹೆಚ್ಚಿನ ಮಾಹಿತಿ ಕೇಳಿದ್ದು ಈ ಕೂಡಲೇ ವಿತರಣೆಗೆ ಅನುಮತಿಸಲು ಸಾಧ್ಯವಿಲ್ಲ ಎಂದಷ್ಟೇ ಹೇಳಿರುವುದಾಗಿ ಮೂಲಗಳು ಸ್ಪಷ್ಟಪಡಿಸಿವೆ.

ಡಿಸೆಂಬರ್​ 6ರಂದು ಕೋವಿಶೀಲ್ಡ್​ ಲಸಿಕೆಗೆ ಅನುಮತಿ ನೀಡುವಂತೆ ಸೆರಮ್​ ಸಂಸ್ಥೆ ಮನವಿ ಮಾಡಿತ್ತು. ಅದಾದ ನಂತರ ಬ್ರಿಟನ್ ಮತ್ತು ಬಹ್ರೈನ್​ನಲ್ಲಿ ಅನುಮತಿ ಗಿಟ್ಟಿಸಿಕೊಂಡಿರುವ ಫೈಜರ್​ ಸಹ ಭಾರತದಲ್ಲಿ ಲಸಿಕೆ ಬಳಸಲು ಅನುಮತಿ ನೀಡುವಂತೆ ಬೇಡಿಕೆ ಇಟ್ಟಿತ್ತು. ಅಂತೆಯೇ ಕಳೆದ ಸೋಮವಾರ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯೂ ತುರ್ತು ಬಳಕೆಗೆ ಅನುಮತಿಸುವಂತೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಬಳಿ ಮನವಿ ಸಲ್ಲಿಸಿತ್ತು.

Corona Vaccine Trial: ಎರಡನೇ ಹಂತದ ಪ್ರಯೋಗಕ್ಕೆ ಆರು ಸ್ವಯಂಸೇವಕರು ಗೈರು

Published On - 5:51 pm, Wed, 9 December 20