ಕೊವ್ಯಾಕ್ಸಿನ್ ಲಸಿಕೆ ಶೇಕಡಾ 77.6ರಷ್ಟು ಪರಿಣಾಮಕಾರಿ: ವಿಷಯ ತಜ್ಞರ ಸಮಿತಿಗೆ ಭಾರತ್ ಬಯೋಟೆಕ್ ಮಾಹಿತಿ
Covaxin: ವಿಷಯ ತಜ್ಞರ ಸಮಿತಿ ಈಗ ಡೇಟಾವನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗೆ ಪರಿಶೀಲನೆಗೆ ಕಳುಹಿಸಲಿದೆ. ಭಾರತ್ ಬಯೋಟೆಕ್ ಮಂಗಳವಾರ ಒಂದು ಪ್ರಸ್ತುತಿಯನ್ನು ಮಾಡಿತು. ಅದರಲ್ಲಿ ಡೇಟಾವನ್ನು ಸಮಿತಿ ಮುಂದೆ ಪ್ರಸ್ತುತಪಡಿಸಲಾಯಿತು. ಕೊವಾಕ್ಸಿನ್‌ನ 77.8% ಪರಿಣಾಮಕಾರಿತ್ವವನ್ನು ತೋರಿಸುತ್ತದೆ ಎಂದು ಡೇಟಾದಲ್ಲಿದೆ.
ದೆಹಲಿ: ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಲಸಿಕೆಯ 3 ನೇ ಹಂತದ ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶಗಳು ಲಭ್ಯವಾಗಿದೆ. ಲಸಿಕೆಯ 3ನೇ ಹಂತದ ಪ್ರಯೋಗಗಳ ಮಾಹಿತಿಯ ಪ್ರಕಾರ ಈ ಲಸಿಕೆ ಕೊವಿಡ್ -19 ವಿರುದ್ಧ 77.8% ಪರಿಣಾಮಕಾರಿ ಎಂದು ತೋರಿಸುತ್ತದೆ. ಭಾರತದಾದ್ಯಂತ ನಡೆಸಿದ 3 ನೇ ಹಂತದ ಪ್ರಯೋಗಗಳಲ್ಲಿ ಕೊವ್ಯಾ ಕ್ಸಿನ್ 77.8% ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ಮೂಲಗಳು ತಿಳಿಸಿವೆ. ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಭಾರತ್ ಬಯೋಟೆಕ್‌ನ ಡೇಟಾವನ್ನು ಪರಿಶೀಲಿಸಿದೆ, ಆದರೆ ಇನ್ನೂ ಯಾವುದೇ ಅನುಮೋದನೆ ನೀಡಿಲ್ಲ. ಕೊವ್ಯಾಕ್ಸಿನ್ ಪ್ರಯೋಗ ಫಲಿತಾಂಶಗಳನ್ನು ಪರಿಶೀಲಿಸಲು ತಜ್ಞರ ಸಮಿತಿ ಮಂಗಳವಾರ ಮಧ್ಯಾಹ್ನ ಸಭೆ ಸೇರಿತು.
ವಿಷಯ ತಜ್ಞರ ಸಮಿತಿ ಈಗ ಡೇಟಾವನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗೆ ಪರಿಶೀಲನೆಗೆ ಕಳುಹಿಸಲಿದೆ. ಭಾರತ್ ಬಯೋಟೆಕ್ ಮಂಗಳವಾರ ಒಂದು ಪ್ರಸ್ತುತಿಯನ್ನು ಮಾಡಿತು. ಅದರಲ್ಲಿ ಡೇಟಾವನ್ನು ಸಮಿತಿ ಮುಂದೆ ಪ್ರಸ್ತುತಪಡಿಸಲಾಯಿತು. ಕೊವಾಕ್ಸಿನ್‌ನ 77.8% ಪರಿಣಾಮಕಾರಿತ್ವವನ್ನು ತೋರಿಸುತ್ತದೆ ಎಂದು ಡೇಟಾದಲ್ಲಿದೆ.
Covaxin shows 77.8 % efficacy in phase 3 trial data in review by subject expert committee (SEC): Sources
— ANI (@ANI) June 22, 2021
ಏತನ್ಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆ (WHO) ಕೊವ್ಯಾಕ್ಸಿನ್‌ಗಾಗಿ ಭಾರತ್ ಬಯೋಟೆಕ್‌ನ ಆಸಕ್ತಿಯ ಅಭಿವ್ಯಕ್ತಿ (EoI) ಅನ್ನು ಸಹ ಸ್ವೀಕರಿಸಿದೆ. ನಾಳೆ (ಜೂನ್ 23) ಪೂರ್ವ-ಸಲ್ಲಿಕೆ ಸಭೆಯನ್ನು ನಿಗದಿಪಡಿಸಿದೆ. ಡಬ್ಲ್ಯುಎಚ್‌ಒ ತುರ್ತು ಬಳಕೆಯ ಪಟ್ಟಿಯನ್ನು (EUL) ಪಡೆಯಲು ಕೊವಾಕ್ಸಿನ್ ಒಂದು ಹೆಜ್ಜೆ ಹತ್ತಿರದಲ್ಲಿದೆ ಎಂದು ಭಾರತ್ ಬಯೋಟೆಕ್ ನಿರೀಕ್ಷಿಸಿದೆ.
ಈ ಸಭೆಯು ಕೊವ್ಯಾಕ್ಸಿನ್ ಲಸಿಕೆಯ ವಿವರವಾದ ವಿಮರ್ಶೆಯಾಗುವುದಿಲ್ಲವಾದರೂ, ಭಾರತ್ ಬಯೋಟೆಕ್ ಲಸಿಕೆಯ ಒಟ್ಟಾರೆ ಗುಣಮಟ್ಟದ ಬಗ್ಗೆ ಸಾರಾಂಶವನ್ನು ಸಲ್ಲಿಸಲು ಅವಕಾಶವನ್ನು ಹೊಂದಿರುತ್ತದೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.
WHO EUL-PQ ಮೌಲ್ಯಮಾಪನ ಪ್ರಕ್ರಿಯೆಯ ದಾಖಲೆಯೊಳಗೆ ಕೊವಿಡ್ -19 ಲಸಿಕೆಗಳ ಸ್ಥಿತಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಒದಗಿಸಲಾಗಿದೆ.
ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ತುರ್ತು ಬಳಕೆ ಪಟ್ಟಿಗಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ತನ್ನ ಕೊವಾಕ್ಸಿನ್‌ಗೆ ಅನುಮೋದನೆ ನಿರೀಕ್ಷಿಸುವುದಾಗಿ ಭಾರತ್ ಬಯೋಟೆಕ್ ಕಳೆದ ತಿಂಗಳು ಹೇಳಿತ್ತು.
ಇದನ್ನೂ ಓದಿ: ಡಿಸಿಜಿಐಗೆ ಕೊವ್ಯಾಕ್ಸಿನ್ 3ನೇ ಹಂತದ ಪ್ರಯೋಗಗಳ ಮಾಹಿತಿ ಸಲ್ಲಿಸಿದ ಭಾರತ್ ಬಯೋಟೆಕ್