ಭಾರತ್ ಜೋಡೋ ನ್ಯಾಯ್ ಯಾತ್ರೆ ಆರಂಭಿಸಲು ಸ್ಥಳದ ಅನುಮತಿ ನೀಡಿದ ಮಣಿಪುರ ಸರ್ಕಾರ
ಇಂಫಾಲ್ ಪೂರ್ವ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ಹೊರಡಿಸಿದ ಆದೇಶದಲ್ಲಿ ಯಾವುದೇ ಅಹಿತಕರ ಘಟನೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗದಂತೆ ತಡೆಯಲು ಜನವರಿ 14 ರಂದು ಸೀಮಿತ ಸಂಖ್ಯೆಯ ಭಾಗವಹಿಸುವವರೊಂದಿಗೆ ಯಾತ್ರೆಯನ್ನು ಆರಂಭಿಸಲು ಮಾತ್ರ ಅನುಮತಿಸಲಾಗಿದೆ.
ದೆಹಲಿ ಜನವರಿ 10: ಮಣಿಪುರ (Manipur) ಸರ್ಕಾರ ಬುಧವಾರದಂದು ತಮ್ಮ ರಾಜ್ಯದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆ (Bharat Jodo Nyay Yatra) ಆರಂಭಿಸಲಿರುವ ಸ್ಥಳಕ್ಕೆ ಅನುಮತಿ ನೀಡಿದೆ. ಆದಾಗ್ಯೂ, ಸೀಮಿತ ಸಂಖ್ಯೆಯ ಜನರು ಮಾತ್ರ ಭಾಗವಹಿಸಬಹುದು ಎಂಬ ಷರತ್ತಿನೊಂದಿಗೆ ಸರ್ಕಾರ ಕಾಂಗ್ರೆಸ್ ಪಕ್ಷಕ್ಕೆ (Congress) ಈ ಅನುಮತಿ ನೀಡಿದೆ. ಇಂಫಾಲ್ ಪೂರ್ವ ಜಿಲ್ಲೆಯ ಹಪ್ತಾ ಕಾಂಗ್ಜೆಬುಂಗ್ ಮೈದಾನದಿಂದ ಯಾತ್ರೆಯನ್ನು ಆರಂಭಿಸಲು ಕಾಂಗ್ರೆಸ್ ಮನವಿ ಮಾಡಿದ್ದು, ಎಂಟು ದಿನಗಳ ನಂತರ ಮಣಿಪುರ ಸರ್ಕಾರದಿಂದ ಅನುಮೋದನೆ ದೊರೆತಿದೆ.
ಇಂಫಾಲ್ ಪೂರ್ವ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ಹೊರಡಿಸಿದ ಆದೇಶದಲ್ಲಿ ಯಾವುದೇ ಅಹಿತಕರ ಘಟನೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗದಂತೆ ತಡೆಯಲು ಜನವರಿ 14 ರಂದು ಸೀಮಿತ ಸಂಖ್ಯೆಯ ಭಾಗವಹಿಸುವವರೊಂದಿಗೆ ಯಾತ್ರೆಯನ್ನು ಆರಂಭಿಸಲು ಮಾತ್ರ ಅನುಮತಿಸಲಾಗಿದೆ. ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು, ಭಾಗವಹಿಸುವವರ ಸಂಖ್ಯೆ ಮತ್ತು ಹೆಸರನ್ನು ಈ ಕಚೇರಿಗೆ ಮುಂಚಿತವಾಗಿ ಒದಗಿಸಬೇಕು ಎಂದು ಹೇಳಲಾಗಿದೆ.
‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಉದ್ಘಾಟನಾ ಸಮಾರಂಭದಲ್ಲಿ ಭಾರಿ ಜನಸ್ತೋಮವನ್ನು ನಿರೀಕ್ಷಿಸಲಾಗಿದೆ ಎಂದು ಇಂಫಾಲ್ ಪೂರ್ವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ವರದಿಯನ್ನು ಸಲ್ಲಿಸಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ, ಬೃಹತ್ ಸಭೆಯು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಉಂಟುಮಾಡಬಹುದು. ಇದಲ್ಲದೆ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಸೆಕ್ಷನ್ 144 ಸಿಆರ್ ಪಿಸಿ ಅಡಿಯಲ್ಲಿ ನಿಷೇಧವು ಜಾರಿಯಲ್ಲಿದೆ ಎಂದು ಅದು ಹೇಳಿದೆ. ಹಿಂದಿನ ದಿನ, ಇಂಫಾಲ್ ಪೂರ್ವ ಜಿಲ್ಲೆಯ ಹಟ್ಟಾ ಕಾಂಗ್ಜೆಬಂಗ್ ಮೈದಾನದಿಂದ ಪ್ರಾರಂಭಿಸಲು ನಿರ್ಧರಿಸಲಾದ 66 ದಿನಗಳ ಯಾತ್ರೆಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿತು.
ಇದನ್ನೂ ಓದಿ: ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಟೀಸರ್ ಬಿಡುಗಡೆ ಮಾಡಿದ ಕಾಂಗ್ರೆಸ್
ಜನವರಿ 14 ರಂದು ನಿಗದಿಯಾಗಿದ್ದ ರ‍್ಯಾಲಿಯನ್ನು ಪ್ರಾರಂಭಿಸಲು ‘ಗ್ರೌಂಡ್ ಪರ್ಮಿಷನ್’ ನೀಡಲು ಮುಖ್ಯಮಂತ್ರಿ ನಿರಾಕರಿಸಿದ್ದಾರೆ. ಅವರು ನೀಡಿದ ಏಕೈಕ ಕಾರಣವೆಂದರೆ ದುರ್ಬಲವಾದ ಕಾನೂನು ಮತ್ತು ಸುವ್ಯವಸ್ಥೆ” ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರನ್ನು ಭೇಟಿ ಮಾಡಿದ ನಂತರ ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ಅಧ್ಯಕ್ಷ ಕೆ ಮೇಘಚಂದ್ರ ಸಿಂಗ್ ನಂತರ ಸುದ್ದಿಗಾರರಿಗೆ ಹೇಳಿದ್ದರು,
ಕಾಂಗ್ರೆಸ್ ಪಕ್ಷವು ತೌಬಲ್ ಜಿಲ್ಲೆಯ ಖೋಂಗ್‌ಜೋಮ್‌ನಲ್ಲಿರುವ ಖಾಸಗಿ ಸ್ಥಳದಲ್ಲಿ ರ್ಯಾಲಿಯನ್ನು ಆಯೋಜಿಸಲಿದೆ. ಸಮಾವೇಶಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ