AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bharat Jodo Yatra: ಭಾರತ್ ಜೋಡೋ ಯಾತ್ರೆಗೆ ಹಿಮಪಾತದ ಭೀತಿ; ಕಾಂಗ್ರೆಸ್ ಚಿಂತೆ

Snowfall Effect- ಜಮ್ಮು ಮತ್ತು ಕಾಶ್ಮೀರದಲ್ಲಿ, ಅದರಲ್ಲೂ ಶ್ರೀನಗರ್ ಮೊದಲಾದ ಕೆಲ ಪ್ರದೇಶಗಳಲ್ಲಿ ಈಗ ಭಾರೀ ಮಂಜಿನ ಮಳೆ ಸುರಿಯುತ್ತಿದೆ. ಶ್ರೀನಗರ್-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಇಲ್ಲಿ ವಿಮಾನ ಹಾರಾಟವೂ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

Bharat Jodo Yatra: ಭಾರತ್ ಜೋಡೋ ಯಾತ್ರೆಗೆ ಹಿಮಪಾತದ ಭೀತಿ; ಕಾಂಗ್ರೆಸ್ ಚಿಂತೆ
ಭಾರತ್ ಜೋಡೋ ಯಾತ್ರೆಗೆ ಹಿಮಪಾತದ ಭೀತಿ
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ|

Updated on: Jan 30, 2023 | 11:15 AM

Share

ನವದೆಹಲಿ: ತಮಿಳುನಾಡಿನಿಂದ ಕನ್ಯಾಕುಮಾರಿಯಿಂದ ದಾಂಗುಡಿ ಇಡುತ್ತಾ ಕಾಶ್ಮೀರದವರೆಗೂ ಸಾಗಿ ಬಂದ ಭಾರತ್ ಜೋಡೋ ಯಾತ್ರೆ ಮುಕ್ತಾಯಗೊಂಡಿದ್ದು, ಇಂದು ಸೋಮವಾರ ಸಮಾರೋಪ (Bharat Jodo Yatra Closing Ceremony) ನಡೆಯುತ್ತಿದೆ. ಆದರೆ, ಹೆಚ್ಚೂಕಡಿಮೆ 150 ದಿನ ರಾಹುಲ್ ಗಾಂಧಿ ನೇತೃತ್ವದಲ್ಲಿ ಭರ್ಜರಿಯಾಗಿ ಸಾಗಿದ ಯಾತ್ರೆ ಅಂತಿಮ ದಿನದಂದು ಹಿಮಪಾತದ (Snowfall) ಭೀತಿ ಎದುರಿಸುತ್ತಿದೆ. ಶೇರ್ಕಾಶ್ಮೀರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜನೆಯಾಗಿರುವ ಸಾರ್ವಜನಿಕ ಸಮಾವೇಶಕ್ಕೆ ಇದೇ ಹಿಮಪಾತದ ಕಾರಣದಿಂದ ಹೆಚ್ಚು ಜನರು ಮತ್ತು ನಾಯಕರು ಸೇರದೇ ಹೋಗುವ ಸಾಧ್ಯತೆ ಇದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ, ಅದರಲ್ಲೂ ಶ್ರೀನಗರ್ ಮೊದಲಾದ ಕೆಲ ಪ್ರದೇಶಗಳಲ್ಲಿ ಈಗ ಭಾರೀ ಮಂಜಿನ ಮಳೆ ಸುರಿಯುತ್ತಿದೆ. ಶ್ರೀನಗರ್ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಇಲ್ಲಿ ವಿಮಾನ ಹಾರಾಟವೂ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಶ್ರೀನಗರಕ್ಕೆ ಬರುವ ಎಲ್ಲಾ ವಿಮಾನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇದರಿಂದ ಭಾರತ್ ಜೋಡೋ ಯಾತ್ರೆಯ ಫಿನಾಲೆ ಕಾರ್ಯಕ್ರಮಕ್ಕೆ ಬಹುತೇಕ ಗಣ್ಯರು ಆಗಮಿಸಲು ಸಾಧ್ಯವಾಗದೇ ಹೋಗಬಹುದು.

ಇಂದು ಸೋಮವಾರ ಕಾಂಗ್ರೆಸ್ ಪಕ್ಷದ ಶ್ರೀನಗರ್ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯಿಂದ ಧ್ವಜಾರೋಹಣ ನಡೆಯಲಿದೆ. ಬಳಿಕ ಶೇರ್ ಎ ಕಾಶ್ಮೀರ್ ಕ್ರೀಡಾಂಗಣದಲ್ಲಿ ಮಧ್ಯಾಹ್ನದಂದು ಸಾರ್ವಜನಿಕ ಸಮಾವೇಶ ಇದೆ. ಈ ಭಾರೀ ಕಾರ್ಯಕ್ರಮಕ್ಕೆ ಕಾಂಗ್ರೆಸ್​ನಿಂದ 21 ಪಕ್ಷಗಳಿಗೆ ಆಹ್ವಾನ ಹೋಗಿದೆ. ಡಿಎಂಕೆ, ಎನ್​ಸಿಪಿ, ಟಿಎಂಸಿ, ಸಮಾಜವಾದಿ ಪಕ್ಷ, ಆರ್​ಜೆಡಿ, ಜೆಡಿಯು, ಸಿಪಿಐ, ಸಿಪಿಐಎಂ, ನ್ಯಾಷನಲ್ ಕಾನ್ಫರೆನ್ಸ್, ಜೆಎಂಎಂ, ಪಿಡಿಪಿ, ಎಎಪಿ ಮೊದಲಾದ ಪಕ್ಷಗಳು ಆಹ್ವಾನಿತರ ಪಟ್ಟಿಯಲ್ಲಿವೆ.

ಈ ಪೈಕಿ ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಾರ್ಟಿ ಮತ್ತು ಟಿಡಿಪಿ ಪಕ್ಷಗಳು ಈ ಕಾರ್ಯಕ್ರಮಕ್ಕೆ ಬರುತ್ತಿಲ್ಲ. ಹಾಗೆಯೇ, ಬಿಜೆಡಿ, ವೈಎಸ್ಸಾರ್ ಕಾಂಗ್ರೆಸ್ ಮೊದಲಾದ ಕೆಲ ವಿಪಕ್ಷಗಳಿಗೆ ಕಾಂಗ್ರೆಸ್ ಆಹ್ವಾನ ಕೊಟ್ಟಿಲ್ಲ. ಇದರ ಹೊರತಾಗಿಯೂ ಬಹಳಷ್ಟು ಪಕ್ಷಗಳ ನಾಯಕರು ಈ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ. ಆದರೆ, ಶ್ರೀನಗರ್​ನಲ್ಲಿನ ಹಿಮದ ವಾತಾವರಣವು ಕಾಂಗ್ರೆಸ್ ಆಸೆಗೆ ತಣ್ಣೀರೆರಚುವ ಎಲ್ಲಾ ಸಾಧ್ಯತೆ ಇದೆ.

14 ರಾಜ್ಯಗಳಲ್ಲಿ ಯಾತ್ರೆ

ಭಾರತ್ ಜೋಡೋ ಯಾತ್ರೆ ಸೆಪ್ಟಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭಗೊಂಡು ಒಟ್ಟು 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಗಿ ಹೋಗಿದೆ. ಸುಮಾರು 4 ಸಾವಿರ ಕಿಮೀ ದೂರದ ಈ ಪ್ರಯಾಣದಲ್ಲಿ ರಾಹುಲ್ ಗಾಂಧಿ ನಿರಂತರವಾಗಿ ಹೆಜ್ಜೆ ಹಾಕಿದ್ದಲ್ಲದೇ ಹತ್ತಾರು ದೊಡ್ಡ ಸಭೆ, ನೂರಾರು ಸಣ್ಣ ಸಭೆಗಳನ್ನು ನಡೆಸಿದ್ದಾರೆ. ವಿವಿಧ ಗಣ್ಯರ ಜೊತೆ ಸಂವಾದಗಳನ್ನೂ ಮಾಡಿದ್ದಾರೆ.