ಕಾಂಗ್ರೆಸ್​ನ ಭಾರತ್ ಜೋಡೊ ಯಾತ್ರೆ ಕರ್ನಾಟಕದಿಂದಲೇ ಶುರು: ಡಿಕೆ ಶಿವಕುಮಾರ್

| Updated By: ನಯನಾ ರಾಜೀವ್

Updated on: Jul 14, 2022 | 9:39 PM

ಕಾಂಗ್ರೆಸ್​ನ ಭಾರತ್ ಜೋಡೊ ಯಾತ್ರೆಯನ್ನು ಕರ್ನಾಟಕದಿಂದಲೇ ರಾಹುಲ್ ಗಾಂಧಿ ಆರಂಭಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ

ಕಾಂಗ್ರೆಸ್​ನ ಭಾರತ್ ಜೋಡೊ ಯಾತ್ರೆ ಕರ್ನಾಟಕದಿಂದಲೇ ಶುರು: ಡಿಕೆ ಶಿವಕುಮಾರ್
DK Shivakumar
Image Credit source: IG News
Follow us on

ಕಾಂಗ್ರೆಸ್​ನ ಭಾರತ್ ಜೋಡೊ ಯಾತ್ರೆಯನ್ನು ಕರ್ನಾಟಕದಿಂದಲೇ ರಾಹುಲ್ ಗಾಂಧಿ ಆರಂಭಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿರುವ ಡಿಕೆ ಶಿವಕುಮಾರ್, ಎಐಸಿಸಿ ಅಧಿವೇಶನ ಮೊದಲು ನಡೆಸಿದ್ದು ಕರ್ನಾಟಕದಲ್ಲಿ, ಈ ಅಧಿವೇಶನ ಬಳಿಕ ಗಾಂಧೀಜಿಯವರು ಕಾಂಗ್ರೆಸ್ ನೇತೃತ್ವ ವಹಿಸಿಕೊಂಡಿದ್ದರು ಎಂದರು.

ಭಾರತ್ ಜೊಡೊ ಯಾತ್ರೆ ಮೂಲಕ ರಾಹುಲ್ ಗಾಂಧಿ ಪಾದಾಯಾತ್ರೆ ನಡೆಸಲಿದ್ದಾರೆ, ಕೇರಳ ಮುಗಿಸಿಕೊಂಡು ಗುಂಡ್ಲುಪೇಟೆ ಮೂಲಕ ರಾಜ್ಯಕ್ಕೆ ರಾಹುಲ್ ಗಾಂಧಿ ಬರಲಿದ್ದಾರೆ.ರಾಜ್ಯದಲ್ಲಿ ಚಾಮರಾಜನಗರ ಮೂಲಕ ಯಾತ್ರೆ ಆರಂಭವಾಗಲಿದೆ , ಕನಿಷ್ಠ 21 ದಿನ ಭಾರತ್ ಜೋಡೊ ಯಾತ್ರೆ ನಡೆಸಲಿದ್ದಾರೆ, ಬಳ್ಳಾರಿ ಮೂಲಕ ಆಂಧ್ರ ತೆರಳಿ, ಮತ್ತೆ ರಾಯಚೂರಿಗೆ ಯಾತ್ರೆ ಬರಲಿದೆ.

ಮುಂದೆ ಮತ್ತೆ ತೆಲಂಗಾಣಕ್ಕೆ, ಆಂಧ್ರಪ್ರದೇಶಕ್ಕೆ ಯಾತ್ರೆ ತೆರಳಿದೆ, ರಾಜ್ಯದಲ್ಲಿ ಒಟ್ಟು 510 ಕಿಲೋಮೀಟರ್ ಯಾತ್ರೆ ನಡೆಯಲಿದೆ. ಆಗಸ್ಟ್ 15 ಯಾತ್ರೆ, ಪ್ರತಿ ಜಿಲ್ಲೆಯಲ್ಲಿ 75 ಕಿಲೋಮೀಟರ್ ಯಾತ್ರೆ ನಡೆಯಲಿದೆ. ಭಾರತ್ ಜೋಡೊ ಯಾತ್ರೆ ಬಿಟ್ಟರೇ ಬೇರೆ ಏನು ಗೊತ್ತಿಲ್ಲ, ಯಾರು ಏನ್ ಬೇಕಾದ್ರು ಪತ್ರ ಬರೆದುಕೊಳ್ಳಲ್ಲಿ, ನಂಗೆ ಯಾರು ಅಭಿಮಾನಿಗಳಿಲ್ಲ, ಅಭಿಮಾನ ಪಕ್ಷಕ್ಕೆ ತೋರಿಸಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.