Monkeypox: ಕೇರಳದಲ್ಲಿ ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣ ದೃಢ
ಕೇರಳದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದೆ, ಭಾರತದಲ್ಲಿ ಮೊದಲ ಬಾರಿಗೆ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದೆ. ಕೇರಳದಲ್ಲಿ ಯುಎಇಯಿಂದ ಬಂದಿದ್ದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಗೋಚರಿಸಿದ್ದವು. ಬಳಿಕ ಆರೋಗ್ಯ ಸಚಿವರು ಸ್ಯಾಂಪಲ್ ಅನ್ನು ಪುಣೆ ಲ್ಯಾಬ್ಗೆ ಕಳುಹಿಸಿದ್ದರು.
ಕೇರಳದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದೆ, ಭಾರತದಲ್ಲಿ ಮೊದಲ ಬಾರಿಗೆ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದೆ. ಕೇರಳದಲ್ಲಿ ಯುಎಇಯಿಂದ ಬಂದಿದ್ದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಗೋಚರಿಸಿದ್ದವು. ಬಳಿಕ ಆರೋಗ್ಯ ಸಚಿವರು ಸ್ಯಾಂಪಲ್ ಅನ್ನು ಪುಣೆ ಲ್ಯಾಬ್ಗೆ ಕಳುಹಿಸಿದ್ದರು.
ಪಕ್ಕದ ರಾಜ್ಯವಾದ ಕೇರಳದಲ್ಲಿ ಮಂಕಿಪಾಕ್ಸ್ ಪತ್ತೆಯಾಗುವ ಮೂಲಕ ಕರ್ನಾಟಕದಲ್ಲೂ ಆತಂಕ ಹೆಚ್ಚಿಸಿದೆ. ಆದರೆ, ಈ ಬಗ್ಗೆ ಆತಂಕ ಪಡಬೇಕಾದ ಅಗತ್ಯವಿಲ್ಲ. ಕೇರಳದ ಆರೋಗ್ಯ ಇಲಾಖೆ ಯುಎಇಯಿಂದ ಬಂದಿದ್ದ ವ್ಯಕ್ತಿಯ ರಕ್ತದ ಸ್ಯಾಂಪಲ್ ಅನ್ನು ಪುಣೆಯ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿದೆ. ಇಂದು ಸಂಜೆಯೊಳಗೆ ಫಲಿತಾಂಶ ಲಭ್ಯವಾಗಲಿದ್ದು, ಅದು ಮಂಕಿಪಾಕ್ಸ್ ಸೋಂಕು ಹೌದೋ, ಅಲ್ಲವೋ ಎಂಬುದು ಖಚಿತವಾಗಲಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಮಂಕಿಪಾಕ್ಸ್ ಒಂದು ವೈರಲ್ ಝೂನೋಟಿಕ್ ಕಾಯಿಲೆಯಾಗಿದ್ದು, ಸಿಡುಬಿನಂತೆಯೇ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಈ ರೋಗದ ಹರಡುವಿಕೆ ವೇಗವಾಗಿದ್ದರೂ ಅದರಿಂದ ಜೀವ ಕಳೆದುಕೊಳ್ಳುವ ಆತಂಕ ಕಡಿಮೆ ಎನ್ನಲಾಗಿದೆ.
ಕೇಂದ್ರ ಸರ್ಕಾರವು ಮಂಕಿಪಾಕ್ಸ್ ಕಾಯಿಲೆ ಕುರಿತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ಮಾರ್ಗಸೂಚಿಯನ್ನು ರವಾನಿಸಿದೆ. ಇದುವರೆಗೆ ಭಾರತದಲ್ಲಿ ಯಾವುದೇ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದರು. ಎಲ್ಲಾ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಿಗೆ ತೆರಳುವಾಗ ಗಡಿ ಪ್ರದೇಶಗಳಲ್ಲಿ ಆರೋಗ್ಯ ತಪಾಣೆ, ರೋಗದ ಲಕ್ಷಣ ಪತ್ತೆಹಚ್ಚುವಿಕೆ ಸೇರಿದಂತೆ ಹಲವು ಕಾರ್ಯಗಳನ್ನು ಕೈಗೊಳ್ಳುವಂತೆ ಕೇಂದ್ರ ಸೂಚಿಸಿದೆ.
ಇಂಗ್ಲಿಷ್ನಲ್ಲಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಹಾಗೆಯೇ ಮಂಕಿಪಾಕ್ಸ್ ಕುರಿತು ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಸೇರಿದಂತೆ ಎಲ್ಲರೂ ಜಾಗ್ರತರಾಗಿರುವಂತೆ ಕೇಳಿಕೊಳ್ಳಲಾಗಿದೆ. ಮಂಕಿಪಾಕ್ಸ್ನ ಯಾವುದೇ ಲಕ್ಷಣಗಳು ಕಾಣಿಸಿಕೊಂಡಾಗ, ತಕ್ಷಣವೇ ಪರೀಕ್ಷೆಯನ್ನು ನಡೆಸಬೇಕು ಎಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಲಾಗಿದೆ.
ಸುಮಾರು 60 ದೇಶಗಳಲ್ಲಿ ಜುಲೈ 13ರವರೆಗೆ 10,400ಕ್ಕೂ ಅಧಿಕ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದವು. ಮಂಕಿಪಾಕ್ಸ್ ವೈರಾಣು ಸಿಡುಬು ಉಂಟುಮಾಡುವ ವೈರಾಣುವಿಗೆ ಸಂಬಂಧಿಸಿದ್ದಾಗಿದ್ದು, ಸಿಡುಬು ವೈರಾಣುವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಆದರೆ ಇವೆರಡೂ ಪೋಕ್ಸ್ವಿರಿಡೆ ಎಂಬ ತಳಿಯ ಪೈಕಿ ಆರ್ಥೋಪಾಕ್ಸ್ ವೈರಸ್ ಕುಲಕ್ಕೆ ಸೇರಿದ್ದಾಗಿದ್ದು ಮಂಕಿಪಾಕ್ಸ್ ನ ಮೊದಲ ಪ್ರಕರಣವನ್ನು 1958 ರಲ್ಲಿ ಸಂಶೋಧನೆಗಾಗಿ ಹಿಡಿದಿಟ್ಟಿದ್ದ ಮಂಗಗಳಿಂದ ಪತ್ತೆ ಮಾಡಲಾಗಿತ್ತು.
1970 ರಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಮೊದಲ ಬಾರಿಗೆ ಮಾನವರಲ್ಲಿ ಈ ಖಾಯಿಲೆ ಪತ್ತೆಯಾಗಿತ್ತು. 2020 ರಲ್ಲಿ ಡಬ್ಲ್ಯುಹೆಚ್ಒ ನೀಡಿದ ಮಾಹಿತಿಯ ಪ್ರಕಾರ 4,594 ಶಂಕಿತ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದು, 171 ಸಾವು ಸಂಭವಿಸಿದೆ (ಮರಣ ಪ್ರಮಾಣ ಶೇ.3.7 ರಷ್ಟಿದೆ) ಈ ಪ್ರಣಗಳು ಪತ್ತೆಯಾದಲ್ಲಿ ಪಿಸಿಆರ್ ಪರೀಕ್ಷೆ ಸೌಲಭ್ಯಗಳು ಲಭ್ಯವಿಲ್ಲದ ಕಾರಣ ಇವುಗಳನ್ನು ಶಂಕಿತ ಪ್ರಕರಣಗಳೆಂದು ಗುರುತಿಸಲಾಗಿದೆ.
ಲಕ್ಷಣಗಳು
ಜ್ವರ, ತಲೆ ನೋವು, ಬೆನ್ನು ನೋವು, ಸ್ನಾಯು ನೋವು, ಚಳಿ ಹಾಗೂ ಬಳಲಿಕೆ, ಜ್ವರದೊಂದಿಗೆ ದೇಹದ ಬೇರೆ ಭಾಗಗಳಿಗೆ ಹರಡುವುದಕ್ಕೂ ಮುನ್ನ, ಮುಖ, ಕೈ ಕಾಲುಗಳಲ್ಲಿ ದದ್ದು ಹೊರಹೊಮ್ಮುತ್ತದೆ. ಬಳಿಕ ಬಾಯಿಯ ಒಳಗೆ, ಕಾರ್ನಿಯಾ, ಜನನಾಂಗಗಳಲ್ಲೂ ಕಾಣಿಸಿಕೊಳ್ಳಬಹುದಾಗಿದೆ.
Published On - 7:51 pm, Thu, 14 July 22