
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಭಾರತ್ ಜೋಡೋ ಯಾತ್ರೆ (Bharat Jodo Yatra) ಹರಿಯಾಣದ ಕರ್ನಾಲ್ (Karnal) ಪ್ರವೇಶಿಸಿದೆ. ಪ್ರತಿ ಬಾರಿಯೂ ಪಕ್ಷದ ಅನೇಕ ನಾಯಕರು, ಕಾರ್ಯಕರ್ತರು ಹಾಗೂ ಗಣ್ಯರ ಜತೆ ಕಾಣಿಸಿಕೊಳ್ಳುತ್ತಿದ್ದ ರಾಹುಲ್ ಗಾಂಧಿ ಈ ಬಾರಿ ಹೊಸ ಅತಿಥಿ ಜತೆ ಕಾಣಿಸಿಕೊಂಡಿದ್ದಾರೆ. ಹೌದು, ಗೋಲ್ಡನ್ ರಿಟ್ರೈವರ್ ನಾಯಿಯೊಂದರ ಜತೆ ರಾಹುಲ್ ಹೆಜ್ಜೆ ಹಾಕುತ್ತಿರುವ ಚಿತ್ರವೀಗ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ. ಸಾಮಾಜಿಕ ಮಾಧ್ಯಮಗಳಲ್ಲೂ ವೈರಲ್ ಆಗುತ್ತಿದೆ. ಮಾಮೂಲಿಯಂತೆ ಬಿಳಿ ಟಿ-ಶರ್ಟ್ ಧರಿಸಿರುವ ರಾಹುಲ್ ಗಾಂಧಿ, ನಸು ನಗುತ್ತಾ ನಾಯಿಯ ಕೊರಳಿಗೆ ಹಾಕಿರುವ ಹಗ್ಗ ಹಿಡಿದು ಮುನ್ನಡೆಯುತ್ತಿರುವುದು ಚಿತ್ರದಲ್ಲಿದೆ.
ನಿಗದಿಯಂತೆ ಯಾತ್ರೆಯು ಘರೋಂಡ, ಮಧುಬನ್ ಮೂಲಕ ಹಾದುಹೋಗಲಿದೆ. ಸಂಜೆ ವೇಳೆಗೆ ಉಚ್ಚಾನಾದಲ್ಲಿ ದಿನದ ಯಾತ್ರೆ ಮುಕ್ತಾಯಗೊಳ್ಳಲಿದ್ದು, ನಾಳೆ ಮುಂದುವರಿಯಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಭಾರತ್ ಜೋಡೋ ಯಾತ್ರೆ ಶುಕ್ರವಾರ ಹರಿಯಾಣದ ಪಾಣಿಪತ್ ಜಿಲ್ಲೆಗೆ ಪ್ರವೇಶಿಸಿತ್ತು. ಯಾತ್ರೆಯಲ್ಲಿ ಈ ಹಿಂದೆಯೂ ಹಲವು ಬಾರಿ ವಿಭಿನ್ನವಾಗಿ ಕಾಣಿಸಿಕೊಳ್ಳುವ ಮೂಲಕ ರಾಹುಲ್ ಗಾಂಧಿ ಗಮನ ಸೆಳೆದಿದ್ದರು. ದೆಹಲಿಯ ಕೊರೆಯುವ ಚಳಿಯಲ್ಲಿ ರಾಹುಲ್ ಗಾಂಧಿ ಟೀ ಶರ್ಟ್ ಮಾತ್ರ ಧರಿಸಿ ಜಾಕೆಟ್, ಸ್ವೆಟರ್ ಹಾಕದೆ ಹೆಜ್ಜೆ ಹಾಕುವ ಮೂಲಕ ಇತ್ತೀಚೆಗೆ ಗಮನ ಸೆಳೆದಿದ್ದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ