Bharat Ratna: ಅಡ್ವಾಣಿ ಮಾತ್ರವಲ್ಲ, ಪಾಕಿಸ್ತಾನ ಮೂಲದ ಈ ವ್ಯಕ್ತಿಗೂ ದೊರೆತಿದೆ ಭಾರತ ರತ್ನ!

ಭಾರತದಲ್ಲಿ ಜನಿಸಿದವರಷ್ಟೇ ಭಾರತ ರತ್ನ ಗೌರವಕ್ಕೆ ಭಾಜನರಾದುದಲ್ಲ. ವಿದೇಶಗಳಲ್ಲಿ ಜನಿಸಿದ ಗಣ್ಯರೂ ದೇಶದ ಪರಮೋಚ್ಚ ಗೌರವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಎಲ್​ಕೆ ಅಡ್ವಾಣಿ ಅವರು ಜನಿಸಿದ್ದು ಇಂದಿನ ಪಾಕಿಸ್ತಾನದ (ಅಂದಿನ ಭಾರತ) ಕರಾಚಿಯಲ್ಲಿ. ಅದೇ ಪಾಕಿಸ್ತಾನದ ಪೇಶಾವರದಲ್ಲಿ ಜನಿಸಿದ ವ್ಯಕ್ತಿಯೊಬ್ಬರೂ ಭಾರತ ರತ್ನ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಅವರ ಕುರಿತ ಮಾಹಿತಿ ಇಲ್ಲಿದೆ.

Bharat Ratna: ಅಡ್ವಾಣಿ ಮಾತ್ರವಲ್ಲ, ಪಾಕಿಸ್ತಾನ ಮೂಲದ ಈ ವ್ಯಕ್ತಿಗೂ ದೊರೆತಿದೆ ಭಾರತ ರತ್ನ!
ಅಡ್ವಾಣಿ ಮಾತ್ರವಲ್ಲ, ಪಾಕಿಸ್ತಾನ ಮೂಲದ ಈ ವ್ಯಕ್ತಿಗೂ ದೊರೆತಿದೆ ಭಾರತ ರತ್ನ!
Follow us
Ganapathi Sharma
|

Updated on: Feb 03, 2024 | 2:39 PM

ನವದೆಹಲಿ, ಫೆಬ್ರವರಿ 3: ಅಯೋಧ್ಯೆ ರಾಮಮಂದಿರ ಆಂದೋಲನದ ಪ್ರಮುಖ ವ್ಯಕ್ತಿ ಹಾಗೂ ಭಾರತೀಯ ಜನತಾ ಪಕ್ಷದ (BJP) ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ (LK Advani) ಅವರಿಗೆ ಭಾರತ ರತ್ನ (Bharat Ratna) ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಕರ್ಪೂರಿ ಠಾಕೂರ್​ಗೆ ಭಾರತ ರತ್ನ ಘೋಷಣೆ ಮಾಡಿದ ಕೆಲವೇ ದಿನಗಳಲ್ಲಿ ಇದೀಗ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ. ಇದರೊಂದಿಗೆ, ಲಾಲ್ ಕೃಷ್ಣ ಅಡ್ವಾಣಿ ಅವರು ಇಂದಿನ ಪಾಕಿಸ್ತಾನದ ನೆಲದಲ್ಲಿ (ಅಂದಿನ ಭಾರತ) ಜನಿಸಿರುವ ‘ಭಾರತ ರತ್ನ’ಕ್ಕೆ ಭಾಜನರಾಗುತ್ತಿರುವ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಲಾಲ್ ಕೃಷ್ಣ ಅಡ್ವಾಣಿ 1927 ರಲ್ಲಿ ಇಂದಿನ ಪಾಕಿಸ್ತಾನದ ಕರಾಚಿ ನಗರದಲ್ಲಿ ಜನಿಸಿದರೆ, ಅಬ್ದುಲ್ ಗಫಾರ್ ಖಾನ್ 1890 ರಲ್ಲಿ ಪೇಶಾವರದಲ್ಲಿ ಜನಿಸಿದರು. ಇಬ್ಬರೂ ಪಾಕಿಸ್ತಾನದೊಂದಿಗೆ ತಳಮಟ್ಟದ ಸಂಬಂಧವನ್ನು ಹೊಂದಿದ್ದ ಮತ್ತು ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಅನುಭವಿಗಳು. ಅಬ್ದುಲ್ ಗಫಾರ್ ಖಾನ್ ಅವರನ್ನು ಸೀಮಂತ್ ಖಾನ್ ಮತ್ತು ಬಚಾ ಖಾನ್ ಎಂದೂ ಕರೆಯುತ್ತಾರೆ.

ಇಬ್ಬರೂ ಭಾರತದ ವಿಭಜನೆಯನ್ನು ವಿರೋಧಿಸಿದವರೇ

ಅಬ್ದುಲ್ ಗಫಾರ್ ಖಾನ್ ಮೂಲತಃ ಬಚುಲ್. ಅನ್ಯಾಯದ ವಿರುದ್ಧ ಹೋರಾಡುವುದು ಅವರ ಸ್ವಭಾವವಾಗಿತ್ತು. ಅವರ ಪರಂಪರೆಯಲ್ಲಿ ಬ್ರಿಟಿಷರ ವಿರೋಧವೂ ಸೇರಿತ್ತು. ಅವರ ಅಜ್ಜ ಸೈಫುಲ್ಲಾ ಖಾನ್ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಪಠಾಣರು ಮತ್ತು ಭಾರತೀಯರ ಮೇಲೆ ಬ್ರಿಟಿಷರ ದೌರ್ಜನ್ಯವನ್ನು ಅವರಿಗೆ ಸಹಿಸಲಾಗಲಿಲ್ಲ. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯನ್ನು ಬಹಿರಂಗವಾಗಿ ವಿರೋಧಿಸಿದರು. ಅಬ್ದುಲ್ ಗಫಾರ್ ಖಾನ್ ಅವರು ಗಡಿ ಪ್ರಾಂತ್ಯಗಳಲ್ಲಿ ಬ್ರಿಟಿಷರ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುತ್ತಿದ್ದರು. ಆದ್ದರಿಂದ ಅವರನ್ನು ಗಡಿನಾಡು ಗಾಂಧಿ ಎಂದು ಕರೆಯಲಾಯಿತು. 1919 ರಲ್ಲಿ ಬ್ರಿಟಿಷರು ಪೇಶಾವರದಲ್ಲಿ ಮಾರ್ಷಲ್ ಕಾನೂನನ್ನು ಹೇರಿದಾಗ ಅವರು ಅದನ್ನು ಬಲವಾಗಿ ವಿರೋಧಿಸಿದರು. ಅವರು ಶಾಂತಿಯ ಪ್ರಸ್ತಾಪವನ್ನು ಮುಂದಿಟ್ಟರು ಆದರೆ ಬ್ರಿಟಿಷರು ಅವರನ್ನು ಬಂಧಿಸಿದರು.

ಖಾನ್ ಅಬ್ದುಲ್ ಗಫಾರ್ ಖಾನ್ ಭಾರತದ ವಿಭಜನೆಯನ್ನು ವಿರೋಧಿಸಿದ ವ್ಯಕ್ತಿತ್ವ. ವಿಭಜನೆಯ ನಂತರ ಅವರು ಪಾಕಿಸ್ತಾನದಲ್ಲಿ ವಾಸಿಸಲು ಆದ್ಯತೆ ನೀಡಿದ್ದರೂ, ಅದೇ ಅಬ್ದುಲ್ ಗಫಾರ್ ಖಾನ್ ಅವರನ್ನು ಅವರ ಜೀವನದ ಕೊನೆಯ ದಿನಗಳಲ್ಲಿ ಪಾಕಿಸ್ತಾನ ಸರ್ಕಾರವು ಪೇಶಾವರದ ಅವರ ಮನೆಯಲ್ಲಿ ಗೃಹಬಂಧನದಲ್ಲಿ ಇರಿಸಿತು. ಮತ್ತು ಅವರು 20 ಜನವರಿ 1988 ರಂದು ನಿಧನರಾದಾಗ, ಅವರ ಇಚ್ಛೆಯ ಪ್ರಕಾರ ಅವರನ್ನು ಅಫ್ಘಾನಿಸ್ತಾನದ ಜಲಾಲಾಬಾದ್‌ನಲ್ಲಿ ಸಮಾಧಿ ಮಾಡಲಾಯಿತು.

ಭಾರತದ ಹೊರಗೆ ಜನಿಸಿದ ಯಾರಿಗೆಲ್ಲ ಭಾರತ ರತ್ನ ದೊರೆತಿದೆ?

ಭಾರತದ ಹೊರಗೆ ಜನಿಸಿ ಭಾರತ ರತ್ನ ಗೌರವಕ್ಕೆ ಭಾಜನರಾದವರಲ್ಲಿ ಅಬ್ದುಲ್ ಗಫಾರ್ ಖಾನ್ ಮಾತ್ರ ಸೇರಿಲ್ಲ. ಅವರ ನಂತರ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ನಾಯಕ ನೆಲ್ಸನ್ ಮಂಡೇಲಾ ಕೂಡ ಈ ಗೌರವಕ್ಕೆ ಪಾತ್ರರಾಗಿದ್ದಾರೆ. 1990 ರಲ್ಲಿ ಭಾರತ ಸರ್ಕಾರವು ಅವರಿಗೆ ಈ ಗೌರವವನ್ನು ನೀಡಿತು. ಈ ಇಬ್ಬರು ವ್ಯಕ್ತಿಗಳ ಹೊರತಾಗಿ, ಮಹಾನ್ ಸಮಾಜ ಸೇವಕಿ ಮತ್ತು ಮಿಷನರೀಸ್ ಆಫ್ ಚಾರಿಟಿಗಾಗಿ ಪ್ರಪಂಚದಾದ್ಯಂತ ಹೆಸರುವಾಸಿಯಾದ ಮದರ್ ತೆರೇಸಾ 1980 ರಲ್ಲಿ ಭಾರತ ರತ್ನ ಪುರಸ್ಕೃತರಾಗಿದ್ದಾರೆ.

ಮದರ್ ತೆರೇಸಾ ಅವರು ಉತ್ತರ ಮೆಸಿಡೋನಿಯಾದಲ್ಲಿ ಜನಿಸಿದರು. ಆದರೆ ಅವರು ಸಮಾಜ ಸೇವೆಗಾಗಿ ಭಾರತವನ್ನು ಆಯ್ಕೆ ಮಾಡಿದರು ಮತ್ತು 1948 ರಲ್ಲಿ ಅವರು ಸ್ವಯಂಪ್ರೇರಣೆಯಿಂದ ಭಾರತೀಯ ಪೌರತ್ವವನ್ನು ಪಡೆದರು.

ಕರಾಚಿಯಯಿಂದ ಬಾಂಬೆಗೆ ಅಡ್ವಾಣಿ

ಲಾಲ್ ಕೃಷ್ಣ ಅಡ್ವಾಣಿ ಕೂಡ ಪಾಕಿಸ್ತಾನದಲ್ಲಿ ಜನಿಸಿದರು. ಆದರೆ ವಿಭಜನೆಯ ನಂತರ ಭಾರತದಲ್ಲೇ ವಾಸ್ತವ್ಯ ಹೂಡಿ ಇಲ್ಲಿಯೇ ನೆಲೆಗೊಂಡರು. ಲಾಲ್ ಕೃಷ್ಣ ಅಡ್ವಾಣಿ ತಮ್ಮ ಆರಂಭಿಕ ಅಧ್ಯಯನವನ್ನು ಲಾಹೋರ್‌ನಲ್ಲಿ ಮಾಡಿದರು. ಅವರ ಬಾಲ್ಯ ಕಳೆದದ್ದು ಸಿಂಧ್‌ನಲ್ಲಿ. ಆ ನಂತರ ಮುಂಬೈಗೆ ಬಂದರು. ಅಡ್ವಾಣಿ ಮುಂಬೈಯ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡಿದರು. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದರು ಮತ್ತು 1947 ರಲ್ಲಿ ರಾಜಸ್ಥಾನದಲ್ಲಿ ಅದರ ಚಟುವಟಿಕೆಗಳ ಉಸ್ತುವಾರಿ ವಹಿಸಿಕೊಂಡರು.

ಕಟ್ಟರ್ ಹಿಂದುತ್ವದಿಂದಲೇ ಗುರುತಿಸಿಕೊಂಡ ಅಡ್ವಾಣಿ

ಲಾಲ್ ಕೃಷ್ಣ ಅಡ್ವಾಣಿ ಭಾರತೀಯ ರಾಜಕೀಯದ ಪ್ರಬಲ ಹಿಂದುತ್ವದ ಮುಖ. ಅವರು ಭಾರತೀಯ ಜನತಾ ಪಕ್ಷದಲ್ಲಿ ರಾಮಮಂದಿರ ಚಳವಳಿಯ ನಾಯಕರಾಗಿದ್ದರು. ಅವರು ರಾಮ ರಥ ಯಾತ್ರೆ ಕೈಗೊಂಡಿದ್ದರು. ಅವರು ಶ್ರೀನಗರದ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು. 2005 ರಲ್ಲಿ ಜಿನ್ನಾರನ್ನು ಸೆಕ್ಯುಲರ್ ಎಂದು ಕರೆದಿದ್ದಕ್ಕಾಗಿ ಅಡ್ವಾಣಿ ಟೀಕೆಗಳನ್ನು ಎದುರಿಸಬೇಕಾಯಿತು.

ಇದನ್ನೂ ಓದಿ: ಎಲ್​​ಕೆ ಅಡ್ವಾಣಿಗೆ ಭಾರತ ರತ್ನ: ಪ್ರಧಾನಿ ಮೋದಿ ಘೋಷಣೆ

ಅದೇ ವರ್ಷ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಜಿನ್ನಾ ಮತ್ತು ಲಿಯಾಖತ್ ಅಲಿ ಖಾನ್ ಅವರ ಸಮಾಧಿಗಳಿಗೆ ಭೇಟಿ ನೀಡಿ ನಮನ ಸಲ್ಲಿಸಿದರು. ಇದ ವಿವಾದಕ್ಕೂ ಕಾರಣವಾಗಿತ್ತು. ಭಾರತೀಯ ಜನತಾ ಪಕ್ಷ ಮತ್ತು ಸಂಘಕ್ಕೆ ಸಂಬಂಧಿಸಿದ ಅನೇಕ ನಾಯಕರು ಅವರನ್ನು ವಿರೋಧಿಸಿದರು. ಅವರು ಸಂಸತ್ತಿನಿಂದ ತೊಡಗಿ ಬೀದಿ ಹೋರಾಟಗಳಲ್ಲಿಯೂ ಹಿಂದೂ ರಾಷ್ಟ್ರಕ್ಕಾಗಿ ಧ್ವನಿ ಎತ್ತಿದ್ದಾರೆ.

ದೇಶದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಇನ್ಮುಂದೆ ಬೆಂಗಳೂರು ಟ್ರಾಫಿಕ್​ ಬಗ್ಗೆ ಮೊಬೈಲ್​ನಲ್ಲೇ ತಿಳಿಯಿರಿ: ವಿಡಿಯೋ
ಇನ್ಮುಂದೆ ಬೆಂಗಳೂರು ಟ್ರಾಫಿಕ್​ ಬಗ್ಗೆ ಮೊಬೈಲ್​ನಲ್ಲೇ ತಿಳಿಯಿರಿ: ವಿಡಿಯೋ
ನಾವೇನು ಕೈಗೆ ಬಳೆ ತೊಟ್ಟು ಕುಳಿತಿಲ್ಲ: ವಿಜಯೇಂದ್ರ ಕಿಡಿ
ನಾವೇನು ಕೈಗೆ ಬಳೆ ತೊಟ್ಟು ಕುಳಿತಿಲ್ಲ: ವಿಜಯೇಂದ್ರ ಕಿಡಿ
ಮಂಜಣ್ಣನ ಮಟನ್ ಪ್ರೀತಿಗೆ ಮನೆಯವರಿಂದ ವಿರೋಧ
ಮಂಜಣ್ಣನ ಮಟನ್ ಪ್ರೀತಿಗೆ ಮನೆಯವರಿಂದ ವಿರೋಧ
ಒಬ್ಬ ಭಯೋತ್ಪಾದಕನ ಹಾಗೆ ರವಿಯವರನ್ನು ನಡೆಸಿಕೊಂಡಿದ್ದಾರೆ: ವಿಜಯೇಂದ್ರ
ಒಬ್ಬ ಭಯೋತ್ಪಾದಕನ ಹಾಗೆ ರವಿಯವರನ್ನು ನಡೆಸಿಕೊಂಡಿದ್ದಾರೆ: ವಿಜಯೇಂದ್ರ
ಬಿಡುಗಡೆ ಬಳಿಕ ಸಿಟಿ ರವಿ ಮಹತ್ವದ ಸುದ್ದಿಗೋಷ್ಠಿಯ ನೇರಪ್ರಸಾರ
ಬಿಡುಗಡೆ ಬಳಿಕ ಸಿಟಿ ರವಿ ಮಹತ್ವದ ಸುದ್ದಿಗೋಷ್ಠಿಯ ನೇರಪ್ರಸಾರ
ರವಿಯವರ ಚಿಕ್ಕಮಗಳೂರು ಮನೆಬಳಿ ಕಾರ್ಯಕರ್ತರ ಸಂಭ್ರಮಾಚರಣೆ 
ರವಿಯವರ ಚಿಕ್ಕಮಗಳೂರು ಮನೆಬಳಿ ಕಾರ್ಯಕರ್ತರ ಸಂಭ್ರಮಾಚರಣೆ 
ಪಾಯಿಂಟ್ ಬ್ಲ್ಯಾಂಕ್ ರೇಂಜಲ್ಲಿ ಶೂಟ್ ಮಾಡುವಂತೆ ಹೇಳಿದ್ದು ನಿಜ: ಪ್ರಸಾದ್
ಪಾಯಿಂಟ್ ಬ್ಲ್ಯಾಂಕ್ ರೇಂಜಲ್ಲಿ ಶೂಟ್ ಮಾಡುವಂತೆ ಹೇಳಿದ್ದು ನಿಜ: ಪ್ರಸಾದ್
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಟಿ ರವಿ ಪ್ರಕರಣ ವಿಚಾರಣೆ ಆರಂಭ
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಟಿ ರವಿ ಪ್ರಕರಣ ವಿಚಾರಣೆ ಆರಂಭ
ಬಸ್​ನೊಳಗೆ ಕಿರುಕುಳ ನೀಡಿದ ಕುಡುಕನಿಗೆ 26 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ
ಬಸ್​ನೊಳಗೆ ಕಿರುಕುಳ ನೀಡಿದ ಕುಡುಕನಿಗೆ 26 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ
ರವಿ ಮನೆಯಲ್ಲಿ ಪ್ರಾಣೇಶ್ ಜೊತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು
ರವಿ ಮನೆಯಲ್ಲಿ ಪ್ರಾಣೇಶ್ ಜೊತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು