ಭಾರತೀಯ ಕಿಸಾನ್ ಯೂನಿಯನ್​ನಿಂದ ನೂತನ ಕೃಷಿ ಕಾಯ್ದೆಗೆ ಬೆಂಬಲ: ನರೇಂದ್ರ ಸಿಂಗ್ ತೋಮರ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 15, 2020 | 7:55 PM

ಭಾರತೀಯ ಕಿಸಾನ್ ಯೂನಿಯನ್​ನ (ಬಿಕೆಯು) ಪ್ರತಿನಿಧಿಗಳು ಭೇಟಿಯಾಗಿ ಮೂರು ನೂತನ ಕೃಷಿ ಕಾಯ್ದೆಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​ ಹೇಳಿದರು.

ಭಾರತೀಯ ಕಿಸಾನ್ ಯೂನಿಯನ್​ನಿಂದ ನೂತನ ಕೃಷಿ ಕಾಯ್ದೆಗೆ ಬೆಂಬಲ: ನರೇಂದ್ರ ಸಿಂಗ್ ತೋಮರ್
ದೆಹಲಿಯಲ್ಲಿ ಕೃಷಿ ಸಚಿವ ತೋಮರ್ ಅವರನ್ನು ಭೇಟಿಯಾದ ಭಾರತೀಯ ಕಿಸಾನ್ ಯೂನಿಯನ್ ಸದಸ್ಯರು
Follow us on

ದೆಹಲಿ: ಭಾರತೀಯ ಕಿಸಾನ್ ಯೂನಿಯನ್​ನ (ಬಿಕೆಯು) ಪ್ರತಿನಿಧಿಗಳು ಭೇಟಿಯಾಗಿ ಮೂರು ನೂತನ ಕೃಷಿ ಕಾಯ್ದೆಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​ ಹೇಳಿದರು.

ಕೆಲ ರೈತ ಸಂಘಟನೆಗಳು ಹಲವರಲ್ಲಿ ನೂತನ ಕೃಷಿ ಕಾಯ್ದೆಗಳ ಕುರಿತು ತಪ್ಪು ಕಲ್ಪನೆ ಮೂಡಿಸುತ್ತಿವೆ. ಆದರೆ, ಭಾರತೀಯ ಕಿಸಾನ್ ಯೂನಿಯನ್ ಪ್ರತಿನಿಧಿಗಳು ಸ್ಪಷ್ಟ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೃಷಿ ಕಾಯ್ದೆ ಮತ್ತು ಕೇಂದ್ರ ಸರ್ಕಾರಕ್ಕೆ ಬೆಂಬಲಿಸುವುದಾಗಿ ಅವರು ತಿಳಿಸಿದ್ದಾರೆ ಎಂದು ನರೇಂದ್ರ ಸಿಂಗ್ ತೋಮರ್​ ಹೇಳಿದರು. ಭಾರತೀಯ ಕಿಸಾನ್ ಯೂನಿಯನ್ ದೆಹಲಿ ಚಲೋ ಚಳವಳಿ ಆಯೋಜಿಸಿರುವ ಸಂಘಟನೆಗಳಲ್ಲಿ ಒಂದಾಗಿದೆ. ನರೇಂದ್ರ ಸಿಂಗ್ ತೋಮರ್ ರೈತ ಪ್ರತಿನಿಧಿಗಳ ಜೊತೆ ಹಲವು ಸುತ್ತಿನ ಮಾತುಕತೆ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆ
ದೆಹಲಿಯ ಬಿಜೆಪಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು.

ಶಿವರಾಜ್ ಸಿಂಗ್ ಚೌಹಾಣ್ ಸಮರ್ಥನೆ
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೂತನ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ಭೋಪಾಲ್​ನಲ್ಲಿ ಆಯೋಜನೆಯಾಗಿದ್ದ ರೈತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನೂತನ ಕೃಷಿ ಕಾಯ್ದೆಗಳು APMCಗಳನ್ನು ಬಲಗೊಳಿಸಲಿವೆ. ರೈತರು ತಮ್ಮ ಬೆಳೆಯನ್ನು APMCಯ ಹೊರಗೂ ಮಾರುವ ಸ್ವಾತಂತ್ರ್ಯವನ್ನು ಒದಗಿಸಿಕೊಡಲಿವೆ’ ಎಂದು ಹೇಳಿದರು.