ನೂಪುರ್​ ಶರ್ಮಾಗೆ ಜೂನ್ 13 ರಂದು  ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ ಮುಂಬೈ ಪೊಲೀಸರು

ಪ್ರವಾದಿ ಮೊಹ್ಮದರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ, ನೂಪುರ್​ ಶರ್ಮಾ ಅವರಿಗೆ ಥಾಣೆ ಜಿಲ್ಲೆಯ ಭಿವಂಡಿ ನಗರ ಪೊಲೀಸರು ನಾಳೆ (ಜೂನ್ 13) ರಂದು  ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ

ನೂಪುರ್​ ಶರ್ಮಾಗೆ ಜೂನ್ 13 ರಂದು  ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ ಮುಂಬೈ ಪೊಲೀಸರು
ನೂಪುರ್ ಶರ್ಮ
Image Credit source: Newsroom Post
Updated By: ವಿವೇಕ ಬಿರಾದಾರ

Updated on: Jun 12, 2022 | 9:02 PM

ಮುಂಬೈ: ಪ್ರವಾದಿ ಮೊಹ್ಮದರ (Prophet Mohammed) ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ, ನೂಪುರ್​ ಶರ್ಮಾ (Nupur Sharma) ಅವರಿಗೆ ಥಾಣೆ (Thane) ಜಿಲ್ಲೆಯ ಭಿವಂಡಿ ನಗರ ಪೊಲೀಸರು ನಾಳೆ (ಜೂನ್ 13) ರಂದು  ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ ಎಂದು ಎಎನ್​​ಐ ಸುದ್ದಿ ಸಂಸ್ಥೆ ಟ್ವೀಟ್​​ ಮಾಡಿದೆ. ಈ ಸಂಬಂಧ ನೂಪುರ್ ಶರ್ಮಾ ಅವರ ವಕೀಲರು ಸಮನ್ಸ್​ಗೆ ಪ್ರತಿಕ್ರಿಯಿಸಿ ವಿಚಾರಣೆಗೆ ಹಾಜರಾಗಲು ಇನ್ನೂ ಕೆಲವು ದಿನಗಳ ಕಾಲ ಅವಕಾಶ ನೀಡವಂತೆ  ಪೊಲೀಸರಿಗೆ ಮೇಲ್ ಕಳುಹಿಸಿದ್ದಾರೆ.

ಇದನ್ನು ಓದಿ: ಸೆಕ್ಯುಲಾರಿಸಂ ಅನ್ನು ಮುಗಿಸಬೇಕಾಗಿದೆ”, ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ಭಾರಿ ಬೆಂಬಲ

ಪ್ರವಾದಿ ಮೊಹ್ಮದರ ಕುರಿತು ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ

ಬಿಜೆಪಿ ವಕ್ತಾರೆ ನೂಪುರ್ ಶರ್ಮಾ  ಅವರು ಸುದ್ದಿವಾಹಿನಿಯ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ನಂತರ ಅವರನ್ನು ಬಿಜೆಪಿ ತನ್ನ ಪಕ್ಷದ ಸದಸ್ಯತ್ವದಿಂದ ಅಮಾನತು ಮಾಡಿತ್ತು. ನಂತರ ಈ ವಿಷಯ ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಗಿದ್ದು, ಸೌದಿ ಅರೇಬಿಯಾ, ಬಹರೈನ್‌, ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ), ಇಂಡೊನೇಷ್ಯಾ, ಜೋರ್ಡನ್‌ ಮತ್ತು ಅಫ್ಗಾನಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದು, ಭಾರತದ ವಸ್ತುಗಳನ್ನು ಕೊಡುಕೊಳ್ಳದಂತೆ ಬೋಯ್​ ಕಟ್​​ ಇಂಡಿಯಾ ಎಂದು ಸಾಮಾಜಿಕ ಜಾಲತಾಣದಲ್ಲಿ ಹರದಾಡಿತ್ತು.

ನಂತರ ಇಷ್ಟೆಲ್ಲಾ ವಿವಾದವಾಗುತ್ತಿದ್ದಂತೆ ನೂಪುರ್ ಶರ್ಮಾ ಕ್ಷಮೆ ಕೇಳಿದ್ದರು. ನಾನು ನನ್ನ ಹೇಳಿಕೆ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದೇನೆ. ಆದರೆ ನನಗೆ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಸೂಕ್ತ ಭದ್ರತೆ ಒದಗಿಸಿ ಅಂತ ಮನವಿ ಮಾಡಿದ್ದರು. ಇವರಿಗೆ ಭದ್ರತೆಯನ್ನು ಒದಗಿಸಲಾಗಿತ್ತು. ಹಾಗೇ ಇವರ ಪರವಾಗಿ ಕೆಲ ಸಂಘಟನೆಗಳು, ವ್ಯಕ್ತಿಗಳು ಮತ್ತು ಸೆಲಬ್ರೆಟಿ ಮಾತನಾಡಿದ್ದರು. ನಂತರ ನೂಪುರ್ ಶರ್ಮಾ ಅವರ ವಿರುದ್ಧ ಮಹಾರಾಷ್ಟ್ರದ ಮುಂಬ್ರಾ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾ ಪೊಲೀಸರು ಶರ್ಮಾ ಅವರಿಗೆ ಸಮನ್ಸ್‌ ಜಾರಿ ಮಾಡಿದ್ದರು. ಈ ತಿಂಗಳು (ಜೂನ್​ 22) ರಂದು ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ.​

ಇದನ್ನು ಓದಿ: ಇಸ್ಲಾಮಿಕ್ ಮೂಲಭೂತವಾದಿಗಳಿಂದ ಬೆದರಿಕೆಗಳು ಬರುತ್ತಿವೆ, ನನ್ನ ಕುಟುಂಬ ಅಪಾಯದಲ್ಲಿದೆ: ನವೀನ್ ಜಿಂದಾಲ್

ನೂಪುರ್ ಶರ್ಮಾ ಅವರ ಹೇಳಿಕೆಯನ್ನು ತೀರ್ವವಾಗಿ ವಿರೋಧಿಸಿದ ಮುಸ್ಲಿಂ ಸಮುದಾಯ ನಿನ್ನೆ ಶುಕ್ರವಾರ (ಜೂನ್​ 10) ರಂದು ಪ್ರತಿಭಟನೆಗೆ ಇಳಿದಿತ್ತು. ದೇಶದ ನಾನಾ ಭಾಗದಲ್ಲಿ ಪ್ರತಿಭಟನೆ ನಡೆದಿತ್ತು. ಹಿಂಸಾತ್ಮಕ ಕೃತ್ಯಗಳು ನಡೆದಿದ್ದವು. ನೂಪೂರ್​ ಶರ್ಮಾ ಪ್ರತಕೃತಿ ದಹನ ಮಾಡಲಾಗಿತ್ತು. ನಂತರ ರಾಜ್ಯದಲ್ಲೂ ಈ ಪ್ರತಿಭಟನೆ ನಡೆದಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದವು.

ಈ ಸಂಬಂಧ ಪೈಡೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜೂನ್​ 25ರ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಪೈಡೋನಿ ಪೊಲೀಸರು ನೂಪುರ್ ಶರ್ಮಾಗೆ ನಿನ್ನೆ (ಜೂನ್​11) ರಂದು ಸಮನ್ಸ್​ ನೀಡಿದ್ದರು  ಎಂದು ಹಿಂದುಸ್ಥಾನ ಟೈಮ್ಸ್​ ವರದಿ ಮಾಡಿತ್ತು. ನೂಪುರ್ ಶರ್ಮಾ ಅವರಿಗೆ ಅಂಚೆ ಮೂಲಕ ಸಮನ್ಸ್ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 9:02 pm, Sun, 12 June 22