ಉಗ್ರರ ಜೊತೆ ಗುಂಡಿನ ಚಕಮಕಿ; ಬೀದರ್​ನ ಬಿಎಸ್ಎಫ್ ಯೋಧ ಹುತಾತ್ಮ

| Updated By: ಆಯೇಷಾ ಬಾನು

Updated on: Jul 07, 2021 | 12:18 PM

ಪಂಜಾಬ್ ಗಡಿಯಲ್ಲಿ ನಿನ್ನೆ ಸಂಜೆ ಉಗ್ರರ ಜೊತೆ ಗುಂಡಿನ ಚಕಮಕಿ ನಡೆದಿದೆ. ಉಗ್ರರು ಮತ್ತು ಬಿಎಸ್ಎಫ್ ಯೋಧರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಯೋಧ ಬಸವರಾಜ್ ಹುತಾತ್ಮರಾಗಿದ್ದಾರೆ.

ಉಗ್ರರ ಜೊತೆ ಗುಂಡಿನ ಚಕಮಕಿ; ಬೀದರ್​ನ ಬಿಎಸ್ಎಫ್ ಯೋಧ ಹುತಾತ್ಮ
ಬಿಎಸ್ಎಫ್ ಯೋಧ ಹುತಾತ್ಮ, ಮನೆಯಲ್ಲಿ ಆಕ್ರಂದನ
Follow us on

ಬೀದರ್: ಉಗ್ರರ ದಾಳಿಯಲ್ಲಿ ಬೀದರ್ ಜಿಲ್ಲೆಯ ಯೋಧ ಹುತಾತ್ಮರಾಗಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಆಲೂರು ಗ್ರಾಮದ BSF ಯೋಧ ಬಸವರಾಜ್(28) ಹುತಾತ್ಮರಾದವರು.

ಪಂಜಾಬ್ ಗಡಿಯಲ್ಲಿ ನಿನ್ನೆ ಸಂಜೆ ಉಗ್ರರ ಜೊತೆ ಗುಂಡಿನ ಚಕಮಕಿ ನಡೆದಿದೆ. ಉಗ್ರರು ಮತ್ತು ಬಿಎಸ್ಎಫ್ ಯೋಧರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಯೋಧ ಬಸವರಾಜ್ ಹುತಾತ್ಮರಾಗಿದ್ದಾರೆ. ಈ ಬಗ್ಗೆ ಯೋಧನ ಪತ್ನಿ ಮಂಜುಳಾಗೆ ಬಿಎಸ್ಎಫ್ನಿಂದ ಮಾಹಿತಿ ಸಿಕ್ಕಿದೆ.

ಕಳೆದ ಎಂಟು ವರ್ಷದ ಹಿಂದೆಯಷ್ಟೇ ಬಿಎಸ್ಎಫ್ ಸೇರಿದ್ದ ಬಸವರಾಜ್, ಐದು ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಬಾಳಿ ಬದುಕಬೇಕಿದ್ದ ಯೋಧ ವೀರ ಮರಣ ಹೊಂದಿದ್ದಾರೆ. ನಾಳೆ ಪಂಜಾಬ್ನಿಂದ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಬರುವ ಸಾಧ್ಯತೆ ಇದೆ. ಸಕಲ ಸರ್ಕಾರಿ ಗೌರವದೊಂದಿಗೆ ನಾಳೆ ಅಂತ್ಯಕ್ರಿಯೆ ನಡೆಯಲಿದೆ. ಯೋಧನ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ವಿಜಯಪುರ: ಮಣ್ಣಲ್ಲಿ ಮಣ್ಣಾದ ಹುತಾತ್ಮ ಯೋಧ ಕಾಶೀರಾಯ ಬೊಮ್ಮನಹಳ್ಳಿ