BIG NEWS: ಅಮಿತ್ ಶಾ ಭದ್ರತೆಯಲ್ಲಿ ಲೋಪ, ಟಿಆರ್‌ಎಸ್ ಮುಖಂಡನ ಕಾರು ನಿಲ್ಲಿಸಿದ ಬೆಂಗಾವಲು ಪಡೆ
ಹೈದರಾಬಾದ್‌ನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಭದ್ರತೆಯಲ್ಲಿ ಲೋಪ ಆಗಿದೆ. ಕೇಂದ್ರ ಸಚಿವ ಅಮಿತ್ ಶಾ ಬೆಂಗಾವಲು ಪಡೆಗೆ ಕಾರೊಂದು ಅಡ್ಡ ಬಂದಿದೆ. ಪರೇಡ್ ಮೈದಾನದಿಂದ ಹರಿತಾ ಪ್ಲಾಜಾಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.

ಹೈದರಾಬಾದ್ : ತೆಲಂಗಾಣಕ್ಕೆ ಭೇಟಿ ನೀಡುರುವ ಗೃಹ ಸಚಿವ ಅಮಿತ್ ಶಾ ಅವರ ಭದ್ರತೆಯಲ್ಲಿ ಲೋಪವಾಗಿದೆ. ಅಮಿತ್ ಶಾ ಬೆಂಗಾವಲು ಪಡೆಯ ಮುಂದೆ ಟಿಆರ್‌ಎಸ್ ಮುಖಂಡ ಶ್ರೀನಿವಾಸ್ ಯಾದವ್ ಕಾರನ್ನು ನಿಲ್ಲಿಸಿದರು. ಟಿಆರ್‌ಎಸ್ ಮುಖಂಡ ಶ್ರೀನಿವಾಸ್ ಯಾದವ್ ಅವರ ಕಾರನ್ನು ಭದ್ರತಾ ಸಿಬ್ಬಂದಿ ಬಲವಂತವಾಗಿ ಹೊರ ಹಾಕಿದ್ದಾರೆ. ಬೆಂಗಾವಲು ಪಡೆಯ ಮುಂದೆ ಕಾರು ನಿಂತಿತ್ತು. ಪೊಲೀಸರು ಟಿಆರ್‌ಎಸ್ ಮುಖಂಡ ಶ್ರೀನಿವಾಸ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಹೈದರಾಬಾದ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಬೆಂಗಾವಲು ವಾಹನದ ಮುಂದೆ ಟಿಆರ್‌ಎಸ್ ನಾಯಕ ಶ್ರೀನಿವಾಸ್ ಕಾರನ್ನು ನಿಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ನಂತರ ಭದ್ರತಾ ಸಿಬ್ಬಂದಿ ಅವರನ್ನು ಮತ್ತು ಅವರ ಕಾರನ್ನು ಗೃಹ ಸಚಿವ ಅಮಿತ್ ಶಾ ಅವರ ಬೆಂಗಾವಲು ಪಡೆಯ ಮಾರ್ಗದಿಂದ ಬಲವಂತವಾಗಿ ನಿಲ್ಲಿಸಿದ್ದಾರೆ.
The car stopped just like that. I was in tension. I will speak to them (Police officers). They vandalised the car. I will go, it's unnecessary tension: TRS leader Gosula Srinivas, in Hyderabad. pic.twitter.com/cxjPbYbbwR
— ANI (@ANI) September 17, 2022
ಹೈದರಾಬಾದ್ ವಿಮೋಚನಾ ದಿನಾಚರಣೆಯಂದು ಆಯೋಜಿಸಿದ್ದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಸರ್ದಾರ್ ಪಟೇಲ್ ಇಲ್ಲದಿದ್ದರೆ ಹೈದರಾಬಾದ್‌ನ ವಿಮೋಚನೆಗೆ ಇನ್ನೂ ಹಲವು ವರ್ಷಗಳು ಬೇಕಾಗುತ್ತಿತ್ತು. ನಿಜಾಮರ ರಜಾಕಾರರನ್ನು ಸೋಲಿಸದ ಹೊರತು ಅಖಂಡ ಭಾರತದ ಕನಸು ನನಸಾಗುವುದಿಲ್ಲ ಎಂಬುದು ಸರ್ದಾರ್ ಪಟೇಲರಿಗೆ ಗೊತ್ತಿತ್ತು ಎಂದರು.
Telangana | TRS leader Gosula Srinivas parked his car in front of Home Minister Amit Shah's cavalcade in Hyderabad, he was forced to move later after HM's security forced him to do so.
— ANI (@ANI) September 17, 2022
ಇಷ್ಟು ವರ್ಷಗಳ ನಂತರ ಈ ನಾಡಿನ ಜನತೆ ‘ಹೈದರಾಬಾದ್ ಮುಕ್ತಿ ದಿವಸ್’ ಅನ್ನು ಸರ್ಕಾರದ ಸಹಭಾಗಿತ್ವದಲ್ಲಿ ಆಚರಿಸಬೇಕು ಎಂದು ಹಾರೈಸಿದ್ದರು ಆದರೆ 75 ವರ್ಷಗಳ ನಂತರವೂ ಇಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಆಡಳಿತ ನಡೆಸುತ್ತಿರುವುದು ದುರದೃಷ್ಟಕರ ಎಂದು ಅಮಿತ್ ಶಾ ಹೇಳಿದರು. ಚುನಾವಣೆ ಮತ್ತು ಪ್ರತಿಭಟನೆಗಳ ಸಂದರ್ಭದಲ್ಲಿ ವಿಮೋಚನಾ ದಿನವನ್ನು ಆಚರಿಸುವುದಾಗಿ ಹಲವರು ಭರವಸೆ ನೀಡಿದರು, ಆದರೆ ಅವರು ಅಧಿಕಾರಕ್ಕೆ ಬಂದ ನಂತರ, ಅವರು ರಜಾಕಾರರ ಭಯದಿಂದ ತಮ್ಮ ಭರವಸೆಗಳನ್ನು ಬದಲಾವಣೆಯನ್ನು ಮಾಡಿಕೊಂಡಿದ್ದಾರೆ ಎಂದು ತೆಲಂಗಾಣ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.
Published On - 1:18 pm, Sat, 17 September 22