Biggboss ಬಿಗ್​ಬಾಸ್ ಮಾಜಿ ಸ್ಪರ್ಧಿ, ಸ್ವಯಂಘೋಷಿತ ದೇವಮಾನವ ಸ್ವಾಮಿ ಓಂ ನಿಧನ

|

Updated on: Feb 04, 2021 | 1:22 PM

Biggboss ತಮ್ಮನ್ನು ತಾವು ದೇವಮಾನವರೆಂದು ಘೋಷಿಸಿಕೊಂಡಿದ್ದ ಸ್ವಾಮಿ ಓಂ ಬಿಗ್​ಬಾಸ್​ಗೆ ಬರುವುದಕ್ಕೂ ಮೊದಲಿನಿಂದಲೇ ವಿವಾದಗಳನ್ನು ಸೃಷ್ಟಿಸಿಕೊಂಡವರು. ಬಿಗ್​ಬಾಸ್​​​ನಲ್ಲಿ ​ತುಂಬ ಕೀಳಾಗಿ ನಡೆದುಕೊಂಡಿದ್ದರು.

Biggboss ಬಿಗ್​ಬಾಸ್ ಮಾಜಿ ಸ್ಪರ್ಧಿ, ಸ್ವಯಂಘೋಷಿತ ದೇವಮಾನವ ಸ್ವಾಮಿ ಓಂ ನಿಧನ
ಸ್ವಾಮಿ ಓಂ
Follow us on

ಹಿಂದಿ ಬಿಗ್​​ಬಾಸ್​ 10ನೇ ಆವೃತ್ತಿಯಲ್ಲಿ ವಿವಾದಿತ ಸ್ಪರ್ಧಿಯಾಗಿದ್ದ, ಸ್ವಯಂಘೋಷಿತ ದೇವಮಾನವ ಸ್ವಾಮಿ ಓಂ (ವಿನೋದಾನಂದ ಝಾ) ಬುಧವಾರ, ಘಾಜಿಯಾಬಾದ್​​ನ ಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಇಂದು ನಿಗಮ ಬೋಧ್​ ಘಾಟ್​​ನಲ್ಲಿ ಮೃತಪಟ್ಟಿದ್ದಾರೆ.

ಸ್ವಾಮಿ ಓಂ ಕಳೆದ ಕೆಲವು ಮೂರು ತಿಂಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಸೋಂಕಿನಿಂದ ಚೇತರಿಸಿಕೊಂಡರೂ ತುಂಬ ದುರ್ಬಲರಾಗಿದ್ದರು. ಅವರಿಗೆ ನಡೆದಾಡಲೂ ಸಾಧ್ಯವಾಗುತ್ತಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಪಾರ್ಶ್ವವಾಯುಗೆ ತುತ್ತಾಗಿದ್ದ ಅವರು ಬುಧವಾರ ಮುಂಜಾನೆ ಸಾವನ್ನಪ್ಪಿದ್ದಾರೆ.

ತಮ್ಮನ್ನು ತಾವು ದೇವಮಾನವರೆಂದು ಘೋಷಿಸಿಕೊಂಡಿದ್ದ ಸ್ವಾಮಿ ಓಂ ಬಿಗ್​ಬಾಸ್​ಗೆ ಬರುವುದಕ್ಕೂ ಮೊದಲಿನಿಂದಲೇ ವಿವಾದಗಳನ್ನು ಸೃಷ್ಟಿಸಿಕೊಂಡವರು. ಬಿಗ್​ಬಾಸ್​​​ನಲ್ಲಿ ​ತುಂಬ ಕೀಳಾಗಿ ನಡೆದುಕೊಂಡಿದ್ದರು. ಅದರಲ್ಲೂ ಒಂದು ದಿನ ತಮ್ಮ ಸಹ ಸ್ಪರ್ಧಿಯ ಮೇಲೆ ಮೂತ್ರವನ್ನೂ ಎರಚಿದ್ದರು. ಈ ಘಟನೆಯ ನಂತರ ಕೋಪಗೊಂಡ ಸಲ್ಮಾನ್ ಖಾನ್​, ಸ್ವಾಮಿ ಓಂರನ್ನು ಕಾರ್ಯಕ್ರಮದಿಂದ ಹೊರಹಾಕಿದ್ದರು. ಅದಾದ ಬಳಿಕ ಹೋದಲ್ಲೆಲ್ಲ ಬಿಗ್​ಬಾಸ್​ ಮತ್ತು ಸಲ್ಮಾನ್​ ಖಾನ್​ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು.

India Together ಹ್ಯಾಷ್​ಟ್ಯಾಗ್​ನೊಂದಿಗೆ ದೇಶ ಮೊದಲು ಎಂದ ಸಚಿನ್, ಕರಣ್, ಅಕ್ಷಯ್

 

Published On - 1:15 pm, Thu, 4 February 21