Jammu-Kashmir: ಸೇನೆ, ಜಮ್ಮು-ಕಾಶ್ಮೀರ ಪೊಲೀಸರಿಂದ ಅತಿದೊಡ್ಡ ಕಾರ್ಯಾಚರಣೆ, ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ವಶ
ಜಂಟಿ ಕಾರ್ಯಾಚರಣೆಯಲ್ಲಿ ಬರ್ಮುಲ್ಲಾ ಪೊಲೀಸರು 3 ರಜಪೂತ್ ಸೇನೆಯೊಂದಿಗೆ ಉರಿಯ ಹತ್ಲಂಗಾ ಸೆಕ್ಟರ್‌ನಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶ್ರೀನಗರ: ಉತ್ತರ ಕಾಶ್ಮೀರದ (Kashmir) ಬಾರಾಮುಲ್ಲಾ ಜಿಲ್ಲೆಯ ಉರಿಯ ಹತ್ಲಂಗಾ ಸೆಕ್ಟರ್‌ನಲ್ಲಿ (Hathlanga Sector) ಶನಿವಾರ ಸೇನೆಯೊಂದಿಗೆ ಪೊಲೀಸರು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಜಂಟಿ ಕಾರ್ಯಾಚರಣೆಯಲ್ಲಿ ಬರ್ಮುಲ್ಲಾ ಪೊಲೀಸರು 3 ರಜಪೂತ್ ಸೇನೆಯೊಂದಿಗೆ ಉರಿಯ ಹತ್ಲಂಗಾ ಸೆಕ್ಟರ್‌ನಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
8 ಎಕೆ 74ಯು, 24 ಎಕೆ 74 ಮ್ಯಾಗಜಿನ್‌ಗಳು, 12 ಚೈನೀಸ್ ಪಿಸ್ತೂಲ್‌ಗಳು, 24 ಪಿಸ್ತೂಲ್ ಮ್ಯಾಗಜೀನ್‌ಗಳು, 9 ಚೈನೀಸ್ ಗ್ರೆನೇಡ್‌ಗಳು, 5 ಪಾಕ್ ಗ್ರೆನೇಡ್‌ಗಳು, 5 ಗೋಧಿ ಚೀಲಗಳು, 81 ಪಾಕ್ ಬಲೂನ್‌ಗಳು, 560 ರೌಂಡ್‌ಗಳ ಎಕೆ ರೈಫಲ್‌ಗಳು ಮತ್ತು 24 ರೌಂಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
Jammu & Kashmir | Police along with Army have recovered a huge cache of arms and ammunition in the Hathlanga Sector of Uri in North Kashmir’s Baramulla, say police. pic.twitter.com/fTeXeuYAff
— ANI (@ANI) December 24, 2022
ಕಳೆದ ಆರು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿರುವ ಉತ್ತರ ಕಾಶ್ಮೀರದ ಉರಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಭಾರಿ ಶಸ್ತ್ರಸಜ್ಜಿತ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಮತ್ತು ಭಾರಿ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿಯೂ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ.
ಇದನ್ನು ಓದಿ:Jammu-Kashmir: ತವಾಂಗ್ ಮುಖಾಮುಖಿ ಬಳಿಕ ಭಾರತ-ಪಾಕ್ ಗಡಿಯಲ್ಲಿ ಗಸ್ತು ಹೆಚ್ಚಿಸಿದ ಭದ್ರತಾ ಪಡೆ
ಉರಿಯ ಹತ್ಲಂಗಾ ಪ್ರದೇಶದಲ್ಲಿ ಬೆಳಿಗ್ಗೆ 6 ಗಂಟೆಗೆ ಸೇನೆಯು ಉಗ್ರರ ಗುಂಪನ್ನು ಗುರುತಿಸಿದೆ ಮತ್ತು ಈ ಗುಂಪಿಗೆ ಸವಾಲೆಸೆಯಲಾಯಿತು ಮತ್ತು ಸಂಕ್ಷಿಪ್ತ ಗುಂಡಿನ ವಿನಿಮಯದಲ್ಲಿ ಮೂವರು ಉಗ್ರರು ಕೊಲ್ಲಲ್ಪಟ್ಟರು” ಎಂದು 15 ಕಾರ್ಪ್ಸ್ನ ಜನರಲ್ ಆಫೀಸರ್ ಕಮಾಂಡಿಂಗ್, ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ