ನಿತೀಶ್ ಕುಮಾರ್- ನರೇಂದ್ರ ಮೋದಿ
ಪಾಟ್ನಾ ಜನವರಿ 27: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಮೈತ್ರಿ ಪಾಲುದಾರ ಮತ್ತು ಲಾಲು ಯಾದವ್ (Lalu yadav) ಅವರ ಪಕ್ಷವಾದ ರಾಷ್ಟ್ರೀಯ ಜನತಾ ದಳ (RJD) ಪಕ್ಷದ ಸಚಿವರನ್ನು ನಾಳೆ ವಜಾ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿಗೆ ವರದಿ ಮಾಡಿದೆ. ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್), ಅಥವಾ ಜೆಡಿಯು ಸಹ ಮೂರು ತಿಂಗಳಲ್ಲಿ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿದೆ. ಬಿಹಾರದ ಎಲ್ಲಾ ಬಿಜೆಪಿ ಶಾಸಕರು ಈಗಾಗಲೇ ನಿತೀಶ್ ಕುಮಾರ್ ಅವರಿಗೆ ಬೆಂಬಲ ಪತ್ರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 2022 ರಲ್ಲಿ ಮಹಾಘಟಬಂಧನ್ ಅಥವಾ ಮಹಾಮೈತ್ರಿಕೂಟಕ್ಕೆ ಸೇರಲು ಬಿಜೆಪಿಯನ್ನು ತ್ಯಜಿಸಿದ ಜೆಡಿಯು ಮುಖ್ಯಸ್ಥರು ಆರ್‌ಜೆಡಿ ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿ ಸರ್ಕಾರದಿಂದ ಹೊರನಡೆಯಲಿದ್ದಾರೆ ಎಂದು ಈ ಬೆಳವಣಿಗೆಗಳು ಸೂಚಿಸುತ್ತವೆ.
ನಿತೀಶ್ ಕುಮಾರ್ ಅವರು ಮುಂದಿನ ನಡೆ ರೂಪಿಸಲು ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇರ ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಹಾರ ಮುಖ್ಯಮಂತ್ರಿ ನಾಳೆ ಜೆಡಿಯು ಮತ್ತು ಬಿಜೆಪಿ ಶಾಸಕರಿಗೆ ತಮ್ಮ ಮನೆಯಲ್ಲಿ ಉಪಾಹಾರ ಕೂಟ ಏರ್ಪಡಿಸಲಿದ್ದು, ನಂತರ ಉಭಯ ಪಕ್ಷಗಳ ಶಾಸಕರು ರಾಜ್ಯಪಾಲರ ಬಳಿ ತೆರಳಿ ಬೆಂಬಲ ಪತ್ರ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜನತಾ ದಳ (ಯುನೈಟೆಡ್) ಮೈತ್ರಿಯಲ್ಲಿದ್ದಾಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಉಪ ಮುಖ್ಯಮಂತ್ರಿ ಆಗಿದ್ದ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರಿಗೆ ಅದೇ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.
ಇದನ್ನೂ ಓದಿ: ಬಿಹಾರ ರಾಜಕೀಯ ಬಿಕ್ಕಟ್ಟು; ಲಾಲು ಪ್ರಸಾದ್ ಯಾದವ್ ಲೆಕ್ಕಾಚಾರ ಏನಿದೆ?
ಬಿಹಾರದಲ್ಲಿ ಇದುವರೆಗಿನ ಪ್ರಮುಖ 10 ಬೆಳವಣಿಗೆಗಳು ಇಲ್ಲಿವೆ
- ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಪಾಟ್ನಾದಲ್ಲಿ ಏನಾಗುತ್ತಿದೆ ಎಂಬುದರ ಹಿರಿಯ ವೀಕ್ಷಕರಾಗಿ ಪಾಟ್ನಾಗೆ ಕಳುಹಿಸಲಾಗಿದೆ.
- ನಿತೀಶ್ ಕುಮಾರ್ ಅವರನ್ನು ಸಂಪರ್ಕಿಸಲು ಪಕ್ಷವು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ. ಮಲ್ಲಿಕಾರ್ಜುನ ಖರ್ಗೆ ಅವರು ನಿತೀಶ್ ಕುಮಾರ್ ಅವರಿಗೆ ಹಲವಾರು ಬಾರಿ ಕರೆ ಮಾಡಿದ್ದಾರೆ. ಆದರೆ ನಿತೀಶ್ ಕುಮಾರ್ ಅವರು ಸಭೆಯಲ್ಲಿದ್ದರು. ಬಿಹಾರ ಸಿಎಂ ಮರಳಿ ಕರೆ ಮಾಡಿದಾಗ, ಕಾಂಗ್ರೆಸ್ ಅಧ್ಯಕ್ಷರು ಕಾರ್ಯನಿರತರಾಗಿದ್ದರು, ಆದ್ದರಿಂದ ಅವರು ಇನ್ನೂ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
- ಶನಿವಾರ ನಡೆದ ಪಕ್ಷದ ಸಭೆಯಲ್ಲಿ ತೇಜಸ್ವಿ ಹಲವು ಅನಿರೀಕ್ಷಿತ ಬೆಳವಣಿಗೆಗಳು ನಡೆಯಬಹುದು ಎಂದು ಸೂಚಿಸಿದರು. ಮುಖ್ಯಮಂತ್ರಿಯವರು ನನ್ನೊಂದಿಗೆ ವೇದಿಕೆಯಲ್ಲಿ ಕುಳಿತು 2005 ರ ಮೊದಲು ಬಿಹಾರದಲ್ಲಿ ಏನಿತ್ತು? ಎಂದು ಕೇಳುತ್ತಿದ್ದರು, ನಾನು ಏನೂ ಪ್ರತಿಕ್ರಿಯಿಸಲಿಲ್ಲ. ಈಗ, ಹೆಚ್ಚು ಜನರು ನಮ್ಮೊಂದಿಗಿದ್ದಾರೆ. ಎರಡು ದಶಕಗಳಲ್ಲಿ ಏನು ಮಾಡದೆ ಉಳಿದಿದೆಯೋ ಅದನ್ನು ನಾವು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಉದ್ಯೋಗಗಳು, ಜಾತಿ ಜನಗಣತಿ, ಹೆಚ್ಚುತ್ತಿರುವ ಮೀಸಲಾತಿ ಇತ್ಯಾದಿ ಕಡಿಮೆ ಸಮಯದಲ್ಲಿ ಮಾಡಲ್ಪಟ್ಟಿದೆ.. ‘ಬಿಹಾರ ಮೇ ಅಭಿ ಖೇಲ್ ಹೋನಾ ಬಾಕಿ ಹೈ’ (ಬಿಹಾರದಲ್ಲಿ ಆಟ ಇನ್ನೂ ಪ್ರಾರಂಭವಾಗಿಲ್ಲ) ಎಂದು ತೇಜಸ್ವಿ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
- ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜೆಡಿಯು ಹೊರಗೆ ಹೋಗುತ್ತಿದೆಯೇ ? ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಸಿಕ್ಕಿಲ್ಲ, ನಾನು ಅವರಿಗೆ (ಜೆಡಿ (ಯು) ನಾಯಕತ್ವಕ್ಕೆ ಪತ್ರ ಬರೆದಿದ್ದೇನೆ. ಮತ್ತು ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದೆ. ಅವರ ಮನಸ್ಸಿನಲ್ಲಿ ಏನಿದೆ ಎಂದು ನನಗೆ ಸ್ಪಷ್ಟವಾಗಿ ತಿಳಿದಿಲ್ಲ ಎಂದು ಹೇಳಿದ್ದಾರೆ.
- ಬಿಹಾರ ಬಿಜೆಪಿ ಕೋರ್ ಕಮಿಟಿ ಸಭೆಯೂ ಶನಿವಾರ ನಡೆದಿದೆ. ನಿತೀಶ್ ಕುಮಾರ್ ಇನ್ನೂ ಸಿಎಂ, ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
- ಬಿಹಾರದ ರಾಜಕೀಯ ಚಟುವಟಿಕೆಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ. “ನಾವು ಬಿಟ್ಟಿದ್ದೇವೆ ಎಂದು ಲಾಲು ಯಾದವ್ ಆಗಲೀ, ಬಿಟ್ಟು ಹೋಗುವುದಾಗಿ ನಿತೀಶ್ ಕುಮಾರ್ ಆಗಲೀ ಹೇಳಿಲ್ಲ. ಇದರ ಬಗ್ಗೆ ಬಿಜೆಪಿ ಏನು ಹೇಳಬಹುದು?” ಗಿರಿರಾಜ್ ಸಿಂಗ್ ಹೇಳಿದರು.
- ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದು, ಅಲ್ಲಿ ಲೋಕ ಜನಶಾಂಕ್ತಿ ಪಕ್ಷದ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪವನ್ ಕೂಡ ಉಪಸ್ಥಿತರಿದ್ದರು. ಸಭೆಯ ಬಳಿಕ ಮಾತನಾಡಿದ ಚಿರಾಗ್, ನಿತೀಶ್ ಕುಮಾರ್ ಅವರು ಎನ್ ಡಿಎಗೆ ಬರುತ್ತಾರೋ ಇಲ್ಲವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಮತ್ತು ಅವರು ಬರುತ್ತಿದ್ದರೆ ಅದರ ಸಮಯವನ್ನು ಸ್ಪಷ್ಟಪಡಿಸಬೇಕು ಎಂದಿದ್ದಾರೆ.
- ಇಷ್ಟೆಲ್ಲ ರಾಜಕೀಯ ಮೇಲಾಟದ ನಡುವೆ ನಿತೀಶ್ ಕುಮಾರ್ ಬಕ್ಸರ್‌ನ ಬ್ರಹ್ಮಪುರದಲ್ಲಿ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
- ನಿತೀಶ್ ಕುಮಾರ್ ಅವರನ್ನು ಕಾಂಗ್ರೆಸ್ ಪದೇ ಪದೇ ಅವಮಾನಿಸಿದೆ ಎಂದು ಜೆಡಿಯು ನಾಯಕ ಕೆಸಿ ತ್ಯಾಗಿ ಹೇಳಿದ್ದಾರೆ. ನಿತೀಶ್ ಕುಮಾರ್ ಅವರು ಮೈತ್ರಿಕೂಟದಲ್ಲಿ ಯಾವುದೇ ಸ್ಥಾನಕ್ಕಾಗಿ ಹಾತೊರೆಯಲಿಲ್ಲ ಆದರೆ ಕಾಂಗ್ರೆಸ್ ನಾಯಕತ್ವದ ಒಂದು ವಿಭಾಗವು ಅವರನ್ನು ಅವಮಾನಿಸಿದೆ ಎಂದು ಜೆಡಿಯು ನಾಯಕ ಹೇಳಿದರು. ನಿತೀಶ್ ಕುಮಾರ್ ಅವರನ್ನು ಇಂಡಿಯಾ ಬ್ಲಾಕ್‌ನ ಸಂಚಾಲಕರನ್ನಾಗಿ ಹೆಸರಿಸಲಾಯಿತು ಆದರೆ ಅವರು ಅದನ್ನು ತಿರಸ್ಕರಿಸಿದರು.
- 79 ಶಾಸಕರನ್ನು ಹೊಂದಿರುವ ಆರ್‌ಜೆಡಿ ಬಿಹಾರ ವಿಧಾನಸಭೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿದೆ. ಜೆಡಿ(ಯು) ಹೊರತುಪಡಿಸಿ ಕಾಂಗ್ರೆಸ್ ಮತ್ತು ಮೂರು ಎಡಪಕ್ಷಗಳ ‘ಮಹಾಘಟಬಂಧನ್’ ಚುಕ್ಕಾಣಿ ಹಿಡಿದಿದೆ. ಜೆಡಿಯು ಮಹಾಘಟಬಂಧನ್‌ನಿಂದ ಹಿಂದೆ ಸರಿದರೆ, ಅದು ಬಹುಮತಕ್ಕೆ ಎಂಟು ಸದಸ್ಯರ ಕೊರತೆಯಾಗುತ್ತದೆ
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ