ದೆಹಲಿ: ದೇವಸ್ಥಾನದಲ್ಲಿ ಜಾಗರಣೆ ವೇಳೆ ವೇದಿಕೆ ಕುಸಿತ, ಓರ್ವ ಸಾವು, 15 ಮಂದಿಗೆ ಗಂಭೀರ ಗಾಯ
ದೆಹಲಿಯ ಕಲ್ಕಾ ಮಂದಿರದಲ್ಲಿ ಜಾಗರಣೆ ವೇಳೆ ವೇದಿಕೆ ಕುಸಿದುಬಿದ್ದು ಓರ್ವ ಸಾವನ್ನಪ್ಪಿದ್ದು, 15ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿ ಜಾಗರಣೆಯ ವೇಳೆ ವೇದಿಕೆ ಕುಸಿದು ಬಿದ್ದಿದ್ದರಿಂದ ಕಾಲ್ತುಳಿತ ಉಂಟಾಗಿತ್ತು.

ರಾತ್ರಿ 12.30 ರ ಸುಮಾರಿಗೆ ಅಪಘಾತ ಸಂಭವಿಸಿದೆ, ಜಾಗರಣೆಯಲ್ಲಿ ಖ್ಯಾತ ಗಾಯಕರು ಆಗಮಿಸಿದ್ದ ಕಾರಣ ತುಂಬಾ ಜನ ಸೇರಿದ್ದರು, ಗಾಯಕರನ್ನು ಭೇಟಿಯಾಗಬೇಕೆಂದು ವೇದಿಕೆಗೆ ಬರಲು ಪ್ರಯತ್ನಿಸುತ್ತಿದ್ದರು, ಅಲ್ಲಿದ್ದವರು ಎಷ್ಟೇ ಹೇಳಿದರೂ ಕೇಳದೆ ಜನರು ವೇದಿಕೆ ಹತ್ತಿದ್ದಾರೆ.
ಇದರಿಂದ ವೇದಿಕೆ ಕುಸಿದು 15 ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಇದಲ್ಲದೇ ವೇದಿಕೆಯ ಬದಿಯಲ್ಲಿ ನಿರ್ಮಿಸಲಾಗಿದ್ದ ಪಕ್ಕದ ವೇದಿಕೆಯ ಮೇಲೂ ಜನರು ಹತ್ತಲು ಯತ್ನಿಸುತ್ತಿದ್ದರು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಪೊಲೀಸರು ವೇದಿಕೆ ಬಳಿ ಹೋಗದಂತೆ ತಡೆಯಲು ಯತ್ನಿಸಿದರಾದರೂ ಅವರ ಮಾತಿಗೆ ಕಿವಿಗೊಡಲಿಲ್ಲ.
ಮತ್ತಷ್ಟು ಓದಿ: ಶಿವಮೊಗ್ಗ: ಕಾರ್ಯಕ್ರಮದ ವೇದಿಕೆ ಮೇಲೆ ನಂಗಾನಾಚ್, ಕನ್ನಡ ಪರ ಸಂಘಟನೆ ವಿರುದ್ಧ ಆಕ್ರೋಶ
ಗಾಯಕ ಬಿ ಪ್ರಾಕ್ ವೇದಿಕೆಗೆ ಬಂದಾಗ ಜನರ ಉತ್ಸಾಹ ಹೆಚ್ಚಾಗುತ್ತಿತ್ತು ಮತ್ತು ಅಪಾರ ಸಂಖ್ಯೆಯ ಜನರು ವೇದಿಕೆಯತ್ತ ತೆರಳಲು ಪ್ರಾರಂಭಿಸಿದರು ಇದರಿಂದ ಈ ಅವಘಡ ಸಂಭವಿಸಿದೆ.
ಗಾಯಕ ಬಿ ಪ್ರಾಕ್ ವೇದಿಕೆಗೆ ಬಂದಾಗ ಜನರ ಉತ್ಸಾಹ ಹೆಚ್ಚಾಗುತ್ತಿತ್ತು ಮತ್ತು ಅಪಾರ ಸಂಖ್ಯೆಯ ಜನರು ವೇದಿಕೆಯತ್ತ ತೆರಳಲು ಪ್ರಾರಂಭಿಸಿದರು ಇದರಿಂದ ಈ ಅವಘಡ ಸಂಭವಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:22 am, Sun, 28 January 24