AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ್ದ ಹೊಪ್ ಶೂಟ್ಸ್​ ಪಕ್ಕಾ ಫೇಕ್​; ಸ್ಥಳಕ್ಕೆ ಹೋಗಿ ನೋಡಿದ್ರೆ 1ಕೆಜಿಗೆ 1 ಲಕ್ಷ ರೂ.ಬೆಲೆಯ ತರಕಾರಿ ಇಲ್ವೇ ಇಲ್ಲ !

ಮಾರ್ಚ್​ 31ರಂದು ಸುಪ್ರಿಯಾ ಅವರು ಮಾಡಿದ್ದ ಟ್ವೀಟ್ ಸಿಕ್ಕಾಪಟೆ ವೈರಲ್ ಆಗಿತ್ತು. 5000 ಬಾರಿ ರೀಟ್ವೀಟ್ ಆಗಿತ್ತು. ಅದನ್ನೇ ಇಟ್ಟುಕೊಂಡು ಹಲವು ಮಾಧ್ಯಮಗಳೂ ಸುದ್ದಿ ಮಾಡಿದ್ದವು. ಆದರೆ ಇದೊಂದು ಪಕ್ಕಾ ಸುಳ್ಳುಸುದ್ದಿ ಎಂಬುದೀಗ ಬಯಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ್ದ ಹೊಪ್ ಶೂಟ್ಸ್​ ಪಕ್ಕಾ ಫೇಕ್​; ಸ್ಥಳಕ್ಕೆ ಹೋಗಿ ನೋಡಿದ್ರೆ 1ಕೆಜಿಗೆ 1 ಲಕ್ಷ ರೂ.ಬೆಲೆಯ ತರಕಾರಿ ಇಲ್ವೇ ಇಲ್ಲ !
ಹಾಪ್ ಶೂಟ್ಸ್ ಬೆಳೆ ಹಾಗೂ ಅದನ್ನು ಬೆಳೆದಿದ್ದಾಗಿ ಸುದ್ದಿಯಾಗಿದ್ದ ರೈತ ಅಮರೇಶ್
Lakshmi Hegde
|

Updated on:Apr 04, 2021 | 8:24 PM

Share

ದೆಹಲಿ: ಕೆಲವು ದಿನಗಳ ಹಿಂದೆ ಬಿಹಾರದ ರೈತನೊಬ್ಬ ಹೊಪ್​ ಶೂಟ್ಸ್ ಎಂಬ ವಿಶೇಷ ಬೆಳೆಯನ್ನು ಬೆಳೆದಿದ್ದಾರೆ. ಇದು ಜಗತ್ತಿನ ಅತ್ಯಂತ ದುಬಾರಿ ತರಕಾರಿಯಾಗಿದ್ದು, 1 ಕೆಜಿಗೆ 1 ಲಕ್ಷ ರೂಪಾಯಿ ಬೆಲೆಬಾಳುತ್ತದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಭರ್ಜರಿ ವೈರಲ್ ಆಗಿತ್ತು. ಬರೀ ಸಾಮಾಜಿಕ ಜಾಲತಾಣಗಳಷ್ಟೇ ಅಲ್ಲದೆ, ಪ್ರಮುಖ ಮಾಧ್ಯಮಗಳೂ ಇದನ್ನು ವರದಿ ಮಾಡಿದ್ದವು. ಅಲ್ಲದೆ, ಈ ಬೆಳೆಯನ್ನು ಬಿಹಾರದ ಔರಂಗಾಬಾದ್ ಜಿಲ್ಲೆ ಕರಮ್​ನಿಧಿ ಗ್ರಾಮದ 38 ವರ್ಷದ ರೈತ ಅಮರೇಶ್ ಸಿಂಗ್ ಬೆಳೆದಿದ್ದಾರೆ. ಹೊಪ್​ ಶೂಟ್ಸ್​ ಬೆಳೆದ ಮೊದಲ ಭಾರತೀಯ ರೈತ ಇವರು ಎಂದು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಟ್ವೀಟ್ ಮಾಡಿ, ಕೆಲವು ಫೋಟೋಗಳನ್ನೂ ಹಂಚಿಕೊಂಡಿದ್ದರು.

ಮಾರ್ಚ್​ 31ರಂದು ಸುಪ್ರಿಯಾ ಅವರು ಮಾಡಿದ್ದ ಟ್ವೀಟ್ ಸಿಕ್ಕಾಪಟೆ ವೈರಲ್ ಆಗಿತ್ತು. 5000 ಬಾರಿ ರೀಟ್ವೀಟ್ ಆಗಿತ್ತು. ಅದನ್ನೇ ಇಟ್ಟುಕೊಂಡು ಹಲವು ಮಾಧ್ಯಮಗಳೂ ಸುದ್ದಿ ಮಾಡಿದ್ದವು. ಆದರೆ ಇದೊಂದು ಪಕ್ಕಾ ಸುಳ್ಳುಸುದ್ದಿ ಎಂಬುದೀಗ ಬಯಲಾಗಿದೆ. ಹಿಂದಿ ದಿನಪತ್ರಿಕೆ ದೈನಿಕ್ ಜಾಗರಣ್​ದ ತಂಡವೊಂದು ಅಮರೇಶ್​ ಸಿಂಗ್ ಅವರ ಕರಮ್​ನಿಧಿ ಗ್ರಾಮಕ್ಕೆ ಭೇಟಿ ನೀಡಿದಾಗ, ಅಲ್ಲಿ ಯಾವುದೇ ಹಾಪ್​ಶೂಟ್ಸ್​ ಬೆಳೆಯೂ ಕಂಡುಬಂದಿಲ್ಲ. ಈ ಬಗ್ಗೆ ಪತ್ರಿಕೆಯ ತಂಡ ಸ್ಥಳೀಯರನ್ನೂ ಮಾತನಾಡಿಸಿದೆ. ಅವರೂ ಸಹ ಇಲ್ಲಿ ಯಾರೂ ಹೊಪ್​ ಶೂಟ್ಸ್​ ತರಕಾರಿ ಬೆಳೆದಿಲ್ಲ. ಅಂಥ ಹೆಸರನ್ನು ಎಲ್ಲಿಯೂ ಕೇಳಿಯೂ ಇಲ್ಲ ಎಂದು ಹೇಳಿದ್ದಾರೆ. ಬಳಿಕ ಅಮರೇಶ್ ಸಿಂಗ್ ಫೋನ್ ನಂಬರ್ ತೆಗೆದುಕೊಂಡು ಕರೆ ಮಾಡಿದಾಗ, ನನ್ನ ಊರು ಕರಮ್​ನಿಧಿ. ಆದರೆ ನಾನು ಹೊಪ್​ ಶೂಟ್ಸ್ ಬೆಳೆದಿದ್ದು ನಲಂದಾ ಜಿಲ್ಲೆಯಲ್ಲಿ ಎಂದು ಹೇಳಿದ್ದಾರೆ. ಪತ್ರಿಕೆಯ ಸಿಬ್ಬಂದಿ ಅಲ್ಲಿಗೂ ಹೋಗಿದ್ದಾರೆ. ಆದರೆ ಅಲ್ಲಿ ಕೂಡ ಹೊಪ್ ಶೂಟ್ಸ್​ ಕಂಡುಬಂದಿಲ್ಲ. ನಲಂದಾದಿಂದ ಅಮರೇಶ್​ಗೆ ಕರೆ ಮಾಡಿದರೆ, ತರಕಾರಿ ಬೆಳೆದಿದ್ದು ಔರಂಗಾಬಾದ್​ನಲ್ಲಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಹೊಪ್​ ಶೂಟ್ಸ್​ ಬೆಳೆಯ ಬಗ್ಗೆ ಔರಂಗಾಬಾದ್​ ಜಿಲ್ಲಾಧಿಕಾರಿ ಸೌರಭ್​ ಜೋರ್​ವಲ್​ ಅವರನ್ನು ದೈನಿಕ್ ಜಾಗರಣ್​ ಸಂಪರ್ಕಿಸಿದಾಗ, ಔರಂಗಾಬಾದ್​ನಲ್ಲಿ ಆ ಬೆಳೆಯನ್ನು ಯಾರೂ ಬೆಳೆದಿಲ್ಲ. ಅಮರೇಶ್​ ಅವರು ಕಪ್ಪು ಅಕ್ಕಿ, ಗೋಧಿಯನ್ನು ಬೆಳೆದಿದ್ದಾರೆ ಹೊರತು, ಹೊಪ್ ಶೂಟ್ಸ್​ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಬಿಹಾರದ ರೈತ ಬೆಳೆದ ಈ ಬೆಳೆ 1 ಕೆಜಿಗೆ 1 ಲಕ್ಷ ರೂಪಾಯಿ: ಸೋಷಿಯಲ್​ ಮೀಡಿಯಾದಲ್ಲಿ ಫುಲ್ ಹವಾ

Published On - 8:21 pm, Sun, 4 April 21

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು