ಬಿಹಾರ, ಅ.2: 2024ರ ಲೋಕಸಭೆ ಚುನಾವಣೆಗೂ ಮುನ್ನ ಬಿಹಾರದ ರಾಜ್ಯ ಸರ್ಕಾರ (Bihar State government) ಜಾತಿ ಆಧಾರಿತ ಜನಗಣತಿಯ ವರದಿ ಬಿಡುಗಡೆ (caste-based survey report) ಮಾಡಿದೆ. ಈ ಬಗ್ಗೆ ಬಿಹಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿವೇಕ್ ಕುಮಾರ್ ಸಿಂಗ್ ಇಂದು (ಸೆ.2) ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬಿಹಾರದಲ್ಲಿ ಹಿಂದುಳಿದ ವರ್ಗ 27.13% ಮತ್ತು ಅತ್ಯಂತ ಹಿಂದುಳಿದ ವರ್ಗ 36.01%, , ಸಾಮಾನ್ಯ ವರ್ಗ 15.52%. ಬಿಹಾರದ ಒಟ್ಟು ಜನಸಂಖ್ಯೆ 13 ಕೋಟಿಗಿಂತ ಹೆಚ್ಚಿದೆ ಎಂದು ಹೇಳಿದ್ದಾರೆ. ಬಿಹಾರದಲ್ಲಿ ಜಾತಿ ಸಮೀಕ್ಷೆ ಕೆಲವು ವರ್ಷಗಳ ಹಿಂದೆ ಭಾರೀ ಚರ್ಚೆಗೆ ಕಾರಣವಾಗಿತ್ತು, ರಾಜಕೀಯ ಲಾಭಕ್ಕಾಗಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಈ ಸಮೀಕ್ಷೆಯನ್ನು ಮಾಡುತ್ತಿದ್ದಾರೆ ಎಂಬ ವಾದಗಳು ಬಂದಿದೆ.
ಲೋಕಸಭೆ ಚುನಾವಣೆಯನ್ನು ಮುಂದಿಟ್ಟಿಕೊಂಡು ಸರ್ಕಾರ ಈ ಸಮೀಕ್ಷೆಯನ್ನು ಮಾಡಿದೆ ಎಂದು ಹೇಳಲಾಗುತ್ತಿದೆ. ಬಿಹಾರ 13 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯ. ಈ ಪೈಕಿ ಹಿಂದೂ ಸಮುದಾಯದ ಜನಸಂಖ್ಯೆ 81.9%ದಷ್ಟು, ಮುಸ್ಲಿಂ ಜನಸಂಖ್ಯೆ 17.7%ದಷ್ಟು, ಕ್ರಿಶ್ಚಿಯನ್ 0.05%ದಷ್ಟು, ಸಿಖ್- 0.01%ದಷ್ಟು, ಬೌದ್ಧ 0.08%ದಷ್ಟು, ಜೈನ 0.0096%ದಷ್ಟು ಮತ್ತು ಇತರ ಧರ್ಮಗಳ ಜನಸಂಖ್ಯೆ 0.12%ದಷ್ಟು ಇದೆ ಎಂದು ಈ ಸಮೀಕ್ಷೆ ವಿವರಿಸಿದೆ.
ರಾಜ್ಯದ ಅರ್ಧದಷ್ಟು ಜನಸಂಖ್ಯೆಯು ಹಿಂದುಗಳಿದ್ದಾರೆ ಎಂದು ಹೇಳಲಾಗಿದೆ. ಇದರಲ್ಲಿ ಯಾದವರ ಸಂಖ್ಯೆ ಶೇ.14ರಷ್ಟಿದೆ. ಹಿಂದುಳಿದ ವರ್ಗದ ಜನಸಂಖ್ಯೆ 27 ಪ್ರತಿಶತ. ಅತ್ಯಂತ ಹಿಂದುಳಿದ ವರ್ಗದ ಜನಸಂಖ್ಯೆಯು ಶೇಕಡಾ 36 ರಷ್ಟಿದೆ. ಬ್ರಾಹ್ಮಣರ ಜನಸಂಖ್ಯೆಯು ಶೇಕಡಾ 3.3 ರಷ್ಟಿದೆ. ಕುರ್ಮಿ ಜನಸಂಖ್ಯೆ 2.87 ಪ್ರತಿಶತದಷ್ಟಿದೆ ಎಂದು ವರದಿ ಹೇಳಿದೆ.
ಈ ಹಿಂದೆ ಜಾತಿ ಸಮೀಕ್ಷೆಗೆ ಸಂಬಂಧಿಸಿದಂತೆ ಹೈಕೋರ್ಟಿನ ಆದೇಶವನ್ನು ಪ್ರಶ್ನಿಸಿ, ಬಿಹಾರ ಸರ್ಕಾರ ಸುಪ್ರೀಂನಲ್ಲಿ ಪ್ರಶ್ನಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಜಾತಿ ಸಮೀಕ್ಷೆ ನಡೆಸಿದರೆ ಏನಾಗುತ್ತದೆ ಎಂದು ಪ್ರಶ್ನೆ ಮಾಡಿತ್ತು. ಈ ಬಗ್ಗೆ ಕೇಂದ್ರಕ್ಕೂ ನೋಟಿಸ್ ಜಾರಿ ಮಾಡಿತ್ತು. ಸುಪ್ರೀಂನ ಈ ನಿಲ್ಲುವು ನಿತೀಶ್ ಸರ್ಕಾರಕ್ಕೆ ಆನೆಬಲ ಸಿಕ್ಕಂತಾಗಿತ್ತು. ಇನ್ನು ಈ ಜಾತಿ ಸಮೀಕ್ಷೆ ಬಡವರ ಸಮಗ್ರ ಸಾಮಾಜಿಕ, ಆರ್ಥಿಕ ದತ್ತಾಂಶವನ್ನು ಸಂಗ್ರಹಿಸಬಹುದು ಎಂಬ ಉದ್ದೇಶದಿಂದ ಬಿಹಾರ ಸರ್ಕಾರವು ಜಾತಿ ಗಣತಿ ಶುರು ಮಾಡಿದೆ, ಜಾತಿ ಹಾಗೂ ಸಮುದಾಯಗಳಿಗೆ ಅನುಗುಣವಾಗಿ ನೀತಿಗಳನ್ನು ರೂಪಿಸಲು ಅನುಕೂಲವಾಗುತ್ತದೆ. ಆದರೆ, ವಿಶೇಷವಾಗಿ ಒಬಿಸಿಗಳು ಮತ್ತು ಇತರ ಜಾತಿಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ಲಭ್ಯವಿಲ್ಲ. ಈ ಕಾರಣದಿಂದಾಗಿ, ಅವರಿಗೆ ನಿರ್ದಿಷ್ಟ ನೀತಿಗಳು ಮತ್ತು ಯೋಜನೆಗಳನ್ನು ರೂಪಿಸುವುದು ಕಷ್ಟಕರವಾಗಿದೆ. ಜಾತಿ ಸಮೀಕ್ಷೆಯು ವಿವಿಧ ಜಾತಿಗಳ ಸಮಾನ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದು ಬಿಹಾರ ಸರ್ಕಾರದ ವಾದವಾಗಿದೆ.
ಇದನ್ನೂ ಓದಿ: ಬಿಹಾರದಲ್ಲಿ ಜಾತಿ ಸಮೀಕ್ಷೆ ನಡೆಸಿದರೆ ಏನಾಗುತ್ತೆ ? ಸುಪ್ರೀಂಕೋರ್ಟ್ ಪ್ರಶ್ನೆ
1.ಸಾಮಾನ್ಯ – 15.52%
2.EBC – 36.1%
3.OBC – 27.12%
4.ಪರಿಶಿಷ್ಟ ಜಾತಿ – 19.65%
5.ಪರಿಶಿಷ್ಟ ಪಂಗಡ – 1.68%
ಕೊಯಿರಿ- 4.2
ಕುರ್ಮಿ- 2.8
ಕಾಯಸ್ಥ- .60
ಮೋಚಿ, ರವಿದಾಸ್- 5.2
ಬ್ರಾಹ್ಮಣ- 3.65
ಭೂಮಿಹಾರ್- 2.86
ಮುಸಾಹರ್ – 3.08
ರಜಪೂತ- 3.45
ವ್ಯಾಪಾರಿ – 2.31
ನಾವಿಕ- 2.60
ಯಾದವ್- 14.26
ಹಿಂದುಳಿದ ವರ್ಗ: 3,54,63,936
ಅತ್ಯಂತ ಹಿಂದುಳಿದ ವರ್ಗ: 4,70,80,514
ಪರಿಶಿಷ್ಟ ಜಾತಿ: 2,56,89,820
ಪರಿಶಿಷ್ಟ ಪಂಗಡ: 21,99,361
ಮೀಸಲಾತಿ ಹೊರತಾದ: 2,02,91,679
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:02 pm, Mon, 2 October 23